ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಅತ್ಯಂತ ಯಶಸ್ವಿ ಬೌಲರ್ ಆಗಿರುವ ಲುಂಗಿ ಎನ್ಗಿಡಿ ಅವರು ನಿನ್ನೆ (ಏಪ್ರಿಲ್ 25) ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡರು. ಕೂಡಲೆ ಅವರನ್ನು ಮೈದಾನದಿಂದಲೆ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಯಿತು.

ಕ್ರಿಕೆಟ್ ಅಭಿಮಾನಿಗಳು ಅವರ ಆರೋಗ್ಯ ಸ್ಥಿತಿ ಹೇಗಿದೆ? ಎಂಬುದರ ಕುರಿತು ಚಿಂತಿತರಾಗಿದ್ದಾರೆ. ಮಾತ್ರವಲ್ಲ, ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಶುಭ ಹಾರೈಸುತ್ತಿದ್ದಾರೆ. ಈ ನಡುವೆ, ಅವರ ಆರೋಗ್ಯದ ಕುರಿತು ಅಪ್ಡೇಟ್ ಬಂದಿದೆ.

ಸದ್ಯ, ಲುಂಗಿ ಎನ್ಗಿಡಿ ಅವರ ಆರೋಗ್ಯದ ಕುರಿತು ಕುಶಿ ಸುದ್ದಿ ಹೊರಬಿದ್ದಿದೆ. ಅವರು ಚಿಕಿತ್ಸೆ ಪಡೆದುಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ವರದಿಯಾಗಿದೆ. ಅವರಿಗೆ ತಲೆ ಮತ್ತು ಕುತ್ತಿಗೆಯ ಹಿಂಭಾಗಕ್ಕೆ ಬಲವಾಗಿ ಪೆಟ್ಟು ಬಿದ್ದ ಪರಿಣಾಮ ಅವರನ್ನು ಬಿ.ಎಲ್.ಕೆ-ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಐಎಎನ್ಎಸ್ ಪ್ರಕಾರ, ‘ಲುಂಗಿ ಎನ್ಗಿಡಿ ಚೆನ್ನಾಗಿದ್ದಾರೆ. ಅವರು ಈಗ ದೆಹಲಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ತಂಗಿರುವ ಹೋಟೆಲ್ಗೆ ಮರಳಿದ್ದಾರೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಫ್ರಾಂಚೈಸಿಯ ವೈದ್ಯಕೀಯ ಸಿಬ್ಬಂದಿ ಅವರ ಆರೋಗ್ಯದ ಮೇಲ್ವಿಚಾರಣೆ ನಡೆಸಲಿದೆ’ ಎಂದು ಮೂಲಗಳು ತಿಳಿಸಿರುವುದಾಗಿ ವರದಿ ಮಾಡಿದೆ.

ಸದ್ಯ, ಆರೋಗ್ಯ ಚೇತರಿಸಿಕೊಂಡಿರುವ ಅವರು ಶುಭಹಾರೈಸಿದ, ಆರೋಗ್ಯ ಸುಧಾರಣೆಗಾಗಿ ಪ್ರಾರ್ಥಿಸಿದವರಿಗೆ ಧನ್ಯವಾದ ತಿಳಿಸಿದ್ದಾರೆ.

ಲುಂಗಿ ಎನ್ಗಿಡಿ ಅವರು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ದೆಹಲಿ ಕ್ಯಾಪಿಟಲ್ಸ್ನ ಅಧ್ಯಕ್ಷ ಮತ್ತು ಸಹ-ಮಾಲೀಕ ಕಿರಣ್ ಕುಮಾರ್ ಗ್ರಂಥಿ ಅವರು ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯದ ವಿಚಾರಣೆ ಮಾಡಿದ್ದರು.

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಅವರ ದಾಖಲೆಯ ಅಜೇಯ 152 ಹಾಗೂ ನಿತೀಶ್ ರಾಣಾ ಅವರ 91 ರನ್ಗಳ ನೆರವಿನಿಂದ 264 ರನ್ ಕಲೆಹಾಕಿತ್ತು. ಅದರ ಹೊರತಾಗಿಯೂ, ಪಂಜಾಬ್ ತಂಡ ಇನ್ನೂ 7 ಎಸೆತಗಳು ಬಾಕಿ ಇರುವಂತೆ ಈ ಬೃಹತ್ ಮೊತ್ತವನ್ನು ಚೇಸ್ ಮಾಡಿ ಗುರಿ ತಲುಪಿತ್ತು. ಈ ಪಂದ್ಯದಲ್ಲಿ ಲುಂಗಿ ಎನ್ಗಿಡಿ ಅವರನ್ನು ಡೆಲ್ಲಿ ತಂಡವನ್ನು ಮಿಸ್ ಮಾಡಿಕೊಂಡಿರುವುದು ಗಮನಾರ್ಹ.

ಲುಂಗಿ ಎನ್ಗಿಡಿಗೆ ಆಗಿದ್ದೇನು

ಅಕ್ಷರ್ ಪಟೇಲ್ ಎಸೆದ ಬಾಲ್ ಅನ್ನು ಪ್ರಿಯಾಂಶ್ ಆರ್ಯ ಬಲವಾಗಿ ಬಾರಿಸುತ್ತಾರೆ. ಮಿಡ್ ಆನ್ನಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ಎನ್ಗಿಡಿ ಅವರು ಕ್ಯಾಚ್ ಹಿಡಿಯುವ ಪ್ರಯತ್ನದಲ್ಲಿ ನೆಲಕ್ಕೆ ಬೀಳುತ್ತಾರೆ. ಈ ವೇಳೆ ಅವರಿಗೆ ತಲೆ ಮತ್ತು ಕುತ್ತಿಗೆ ಭಾಗಕ್ಕೆ ಬಲವಾಗಿ ಪೆಟ್ಟು ಬೀಳುತ್ತದೆ. ಪರಿಣಾಮ ಅವರು ಮೈದಾನದಿಂದ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು.

ಘಟನೆಯ ಬಳಿಕ ಐಪಿಎಲ್, ‘ಲುಂಗಿ ಅವರ ಆರೋಗ್ಯ ಸ್ಥಿರವಾಗಿದೆ ಮತ್ತು ಅವರು ಇಂದೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ’ ಎಂದು ಹೇಳಿತ್ತು. ಅದರಂತೆ, ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಕೂಡ ಮಾಡಲಾಗಿದೆ.

ಈ ಐಪಿಎಲ್ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಪ್ರಮುಖ ಬೌಲರ್ ಆಗಿರುವ ಎನ್ಗಿಡಿ, ಆಡಿರುವ 7 ಪಂದ್ಯಗಳಲ್ಲಿ 29.42 ಸರಾಸರಿಯಲ್ಲಿ 7 ವಿಕೆಟ್ ಕಬಳಿಸಿದ್ದಾರೆ. ಅವರು 8.70 ಎಕಾನಮಿ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.