ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ.7ರಿಂದ ಮಹಾರಾಜ ಟ್ರೋಫಿ; ಅನಾವರಣಗೊಳಿಸಿದ ನಟ ಸುದೀಪ್‌

ಮೈಸೂರಿನಲ್ಲಿ ಮೊದಲ 18 ಪಂದ್ಯ
Last Updated 4 ಆಗಸ್ಟ್ 2022, 12:38 IST
ಅಕ್ಷರ ಗಾತ್ರ

ಮೈಸೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ)‘ಮಹಾರಾಜ ಟ್ರೋಫಿ ಟ್ವೆಂಟಿ 20 ಕ್ರಿಕೆಟ್‌ ಟೂರ್ನಿ’ಯನ್ನು ನಗರದ ‘ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣ’ದಲ್ಲಿಆಯೋಜಿಸಿದ್ದು, ಆ.7ರಂದು ಟೂರ್ನಿಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಚಾಲನೆ ನೀಡಲಿದ್ದಾರೆ.

ಇಲ್ಲಿನ ಸದರ್ನ್‌ಸ್ಟಾರ್‌ ಹೋಟೆಲ್‌ನಲ್ಲಿ ಗುರುವಾರ ಚಲನಚಿತ್ರ ನಟ ಸುದೀಪ್‌, ಕೆಎಸ್‌ಸಿಎ ಅಧ್ಯಕ್ಷ ರೋಜರ್‌ ಬಿನ್ನಿ ಟ್ರೋಫಿಯನ್ನು ಅನಾವರಣಗೊಳಿಸಿದರು. ರಾಜ್ಯದ ಆರು ತಂಡ ಹಾಗೂ ನಾಯಕರನ್ನು ಘೋಷಿಸಲಾಯಿತು.

ನಂತರ ಮಾತನಾಡಿದ ರೋಜರ್‌ ಬಿನ್ನಿ, ‘ಕರ್ನಾಟಕ ಪ್ರೀಮಿಯರ್‌ ಲೀಗ್‌ನ ಹೊಸ ಅವತರಣಿಕೆ ಮಹಾರಾಜ ಟ್ರೋಫಿಯಾಗಿದ್ದು,ಕೋವಿಡ್‌ನಿಂದ ಕಳೆದೆರಡು ವರ್ಷ ಟೂರ್ನಿ ನಡೆದಿರಲಿಲ್ಲ. ಮೈಸೂರಿನಲ್ಲಿ ಕ್ರೀಡಾ ಸಂಸ್ಕೃತಿ ಬೆಳೆಯಲು ರಾಜವಂಶಸ್ಥರ ಕೊಡುಗೆ ಅಪಾರ. ಹೀಗಾಗಿಯೇ ಟ್ರೋಫಿಗೆ ಮಹಾರಾಜ ಹೆಸರು ಇಡಲಾಗಿದೆ’ ಎಂದರು.

ಸಂಸ್ಥೆಯ ರಾಯಭಾರಿ ನಟ ಸುದೀಪ್‌ ಮಾತನಾಡಿ, ‘ಕ್ರಿಕೆಟ್‌ ಎಲ್ಲರನ್ನೂ ಜೊತೆಯಾಗಿಸುತ್ತದೆ.ರಾಜ್ಯದಲ್ಲಿ ಉತ್ತಮ ಆಟಗಾರರಿದ್ದು, ಸಾಮರ್ಥ್ಯವನ್ನು ತೋರಲು ಸಿಕ್ಕಿರುವ ಅದ್ಭುತ ಅವಕಾಶ ಇದಾಗಿದೆ. ಮಳೆ ಸುರಿಯುವಂತೆಯೇರನ್‌ ಹೊಳೆ ಹರಿಯಲಿ. ಉತ್ತಮ ಆಟ ಎಲ್ಲರಿಂದಲೂ ಮೂಡಿ ಬರಲಿ’ ಎಂದು ಆಶಿಸಿದರು.

ಖಜಾಂಚಿ ವಿನಯ್ ಮೃತ್ಯುಂಜಯ ಮಾತನಾಡಿ, ‘ಮೊದಲ ಹಂತದ 18 ಪಂದ್ಯಗಳು ಆ.15ರವರಗೆ ಮೈಸೂರಿನಲ್ಲಿ ನಡೆಯಲಿವೆ. ಉಳಿದ 16 ‍ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಅಲ್ಲಿಯೇ 26ರಂದು ಫೈನಲ್‌ ಪಂದ್ಯ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

‘ಟೂರ್ನಿಯ ಪ್ರಾಯೋಜಕತ್ವವನ್ನು ಶ್ರೀರಾಮ್‌ ಗ್ರೂಪ್‌ ವಹಿಸಿದ್ದು, ಪೇಟಿಎಂನಲ್ಲಿ ಟಿಕೆಟ್‌ ಬುಕಿಂಗ್‌ ಮಾಡಬಹುದಾಗಿದೆ. ಸ್ಟಾರ್‌ಸ್ಪೋರ್ಟ್ಸ್ 2, ಸ್ಟಾರ್‌ಸ್ಪೋರ್ಟ್ಸ್ ಕನ್ನಡದಲ್ಲಿ ಪಂದ್ಯಗಳ ನೇರ ಪ್ರಸಾರವಾಗಲಿದ್ದು, ಫ್ಯಾನ್‌ಕೋಡ್‌ ಆ್ಯಪ್‌ನಲ್ಲಿಯೂ ನೋಡಬಹುದು’ ಎಂದರು.

ತಂಡಗಳು ಹಾಗೂ ನಾಯಕ ಪಟ್ಟಿಯನ್ನು ಸುದೀಪ್‌ ಬಿಡುಗಡೆ ಮಾಡಿದರು. ಮೈಸೂರು ವಾರಿಯರ್ಸ್‌– ಕರುಣ್‌ ನಾಯರ್, ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್‌– ಮಯಾಂಕ್‌ ಅಗರ್‌ವಾಲ್‌, ಶಿವಮೊಗ್ಗ ಸ್ಟ್ರೈಕರ್ಸ್‌– ಕೆ.ಗೌತಮ್‌,ಗುಲ್ಬರ್ಗ ಮಿಸ್ಟಿಕ್‌– ಮನೀಷ್‌ ಪಾಂಡೆ, ಹುಬ್ಬಳ್ಳಿ ಟೈಗರ್ಸ್‌– ಅಭಿಮನ್ಯು ಮಿಥುನ್‌, ಮಂಗಳೂರು ಯುನೈಟೆಡ್‌ ತಂಡವನ್ನು ಆರ್.ಸಮರ್ಥ್‌ ಮುನ್ನಡೆಸಲಿದ್ದಾರೆ.

ಗೋಷ್ಠಿಯಲ್ಲಿ ಮೈಸೂರು ವಾರಿಯರ್ಸ್‌ ಫ್ರಾಂಚೈಸಿ ಸೈಕಲ್‌ ಪ್ಯೂರ್‌ನ ಪವನ್ ರಂಗ, ಸುಧಾಕರ್‌ ಪೈ, ಹರಿ, ಇರ್ಫಾನ್‌ ಸೇಠ್‌ ಇದ್ದರು.

ಮಹಾರಾಜ ಟ್ರೋಫಿ: ಮೊದಲ ಹಂತದ ಪಂದ್ಯಗಳು

ದಿನಾಂಕ; ಪಂದ್ಯ;ಸಮಯ

ಆ.7;ಹುಬ್ಬಳ್ಳಿ ಟೈಗರ್ಸ್‌– ಮಂಗಳೂರು ಯುನೈಟೆಡ್‌;ಮಧ್ಯಾಹ್ನ 3

ಆ.7;ಮೈಸೂರು ವಾರಿಯರ್ಸ್‌–ಶಿವಮೊಗ್ಗ ಸ್ಟ್ರೈಕರ್ಸ್;ಸಂಜೆ 7

ಆ.8;ಬೆಂಗಳೂರು ಬ್ಲಾಸ್ಟರ್ಸ್– ಗುಲ್ಬರ್ಗ ಮಿಸ್ಟಿಕ್ಸ್;ಮಧ್ಯಾಹ್ನ 3

ಆ.8;ಮೈಸೂರು ವಾರಿಯರ್ಸ್‌–ಮಂಗಳೂರು ಯುನೈಟೆಡ್‌;ಸಂಜೆ 7

ಆ.9;ಗುಲ್ಬರ್ಗ ಮಿಸ್ಟಿಕ್ಸ್–ಶಿವಮೊಗ್ಗ ಸ್ಟ್ರೈಕರ್ಸ್;ಮಧ್ಯಾಹ್ನ 3

ಆ.9;ಬೆಂಗಳೂರು ಬ್ಲಾಸ್ಟರ್ಸ್‌– ಹುಬ್ಬಳ್ಳಿ ಟೈಗರ್ಸ್;ಸಂಜೆ 7

ಆ.10;ಮೈಸೂರು ವಾರಿಯರ್ಸ್– ಹುಬ್ಬಳ್ಳಿ ಟೈಗರ್ಸ್;ಮಧ್ಯಾಹ್ನ 3

ಆ.10;ಮಂಗಳೂರು ಯುನೈಟೆಡ್‌–ಶಿವಮೊಗ್ಗ ಸ್ಟ್ರೈಕರ್ಸ್;ಸಂಜೆ 7

ಆ.11;ಬೆಂಗಳೂರು ಬ್ಲಾಸ್ಟರ್ಸ್‌– ಮಂಗಳೂರು ಯುನೈಟೆಡ್‌;ಮಧ್ಯಾಹ್ನ 3

ಆ.11;ಮೈಸೂರು ವಾರಿಯರ್ಸ್–ಗುಲ್ಬರ್ಗ ಮಿಸ್ಟಿಕ್ಸ್;ಸಂಜೆ 7

ಆ.12;ಹುಬ್ಬಳ್ಳಿ ಟೈಗರ್ಸ್–ಗುಲ್ಬರ್ಗ ಮಿಸ್ಟಿಕ್ಸ್;ಮಧ್ಯಾಹ್ನ 3

ಆ.12;ಬೆಂಗಳೂರು ಬ್ಲಾಸ್ಟರ್ಸ್‌–ಶಿವಮೊಗ್ಗ ಸ್ಟ್ರೈಕರ್ಸ್;ಸಂಜೆ 7

ಆ.13;ಹುಬ್ಬಳ್ಳಿ ಟೈಗರ್ಸ್–ಶಿವಮೊಗ್ಗ ಸ್ಟ್ರೈಕರ್ಸ್;ಮಧ್ಯಾಹ್ನ 3

ಆ.13;ಮೈಸೂರು ವಾರಿಯರ್ಸ್– ಬೆಂಗಳೂರು ಬ್ಲಾಸ್ಟರ್ಸ್‌;ಸಂಜೆ 7

ಆ.14;ಮೈಸೂರು ವಾರಿಯರ್ಸ್–ಶಿವಮೊಗ್ಗ ಸ್ಟ್ರೈಕರ್ಸ್;ಮಧ್ಯಾಹ್ನ 3

ಆ.14;ಗುಲ್ಬರ್ಗ ಮಿಸ್ಟಿಕ್ಸ್–ಮಂಗಳೂರು ಯುನೈಟೆಡ್‌;ಸಂಜೆ 7

ಆ.15;ಮಂಗಳೂರು ಯುನೈಟೆಡ್‌– ಬೆಂಗಳೂರು ಬ್ಲಾಸ್ಟರ್ಸ್;ಮಧ್ಯಾಹ್ನ 3

ಆ.15;ಗುಲ್ಬರ್ಗ ಮಿಸ್ಟಿಕ್ಸ್–ಹುಬ್ಬಳ್ಳಿ ಟೈಗರ್ಸ್;ಸಂಜೆ 7

ಸ್ಥಳ: ಮೈಸೂರಿನ ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT