ಬೆಂಗಳೂರು: ವಿಕೆಟ್ ಕೀಪರ್–ಬ್ಯಾಟರ್ ಭಾವಿಕಾ ಅಹಿರೆ ಅವರ ಅಮೋಘ ಶತಕದ ನೆರವಿನಿಂದ ಮಹಾರಾಷ್ಟ್ರ ತಂಡವು ಬಿಸಿಸಿಐ 23 ವರ್ಷದೊಳಗಿನ ಮಹಿಳಾ ಏಕದಿನ ಟ್ರೋಫಿಯ ಫೈನಲ್ನಲ್ಲಿ ಕರ್ನಾಟಕ ತಂಡವನ್ನು 75 ರನ್ಗಳಿಂದ ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ರಾಂಚಿಯ ಜೆಎಸ್ಸಿಎ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡವು ಫೀಲ್ಡಿಂಗ್ ಆಯ್ದುಕೊಂಡಿತು. ಭಾವಿಕಾ (109;1001ಎ, 4x10, 6x3) ಮತ್ತು ಈಶ್ವರಿ ಸಾವ್ಕರ್ (61;62ಎ, 4x10) ಅವರ ಬ್ಯಾಟಿಂಗ್ ನೆರವಿನಿಂದ ಮಹಾರಾಷ್ಟ್ರ ತಂಡವು 8 ವಿಕೆಟ್ಗೆ 286 ರನ್ ಗಳಿಸಿತು.

ಕರ್ನಾಟಕದ ಪರ ವಂದಿತಾ ಕೆ.ರಾವ್ ಮೂರು ವಕೆಟ್ ಪಡೆದರೆ, ಬಿ.ಜಿ. ತೇಜಸ್ವಿನಿ ಎರಡು ವಿಕೆಟ್ ಕಬಳಿಸಿದರು. ಈ ಹಿಂದಿನ ಪಂದ್ಯಗಳಲ್ಲಿ ಮಿಂಚು ಹರಿಸಿದ್ದ ಸಲೋನಿ ಪಿ. ಒಂದು ವಿಕೆಟ್ ಪಡೆಯಲಷ್ಟೇ ಶಕ್ತವಾದರು.

ಕಠಿಣ ಗುರಿಯನ್ನು ಬೆನ್ನಟ್ಟಿದ ಕರ್ನಾಟಕ ತಂಡವು ಉತ್ತಮ ಆರಂಭ ಪಡೆಯಿತು. ರಚಿತಾ ಹತ್ವಾರ್ (63;67ಎ, 4x12) ಮತ್ತು ಪ್ರೇರಣಾ ಜಿ.ಆರ್. (16) ಮೊದಲ ವಿಕೆಟ್ಗೆ 40 ರನ್ ಸೇರಿಸಿದರು. ಆದರೆ, ನಂತರದಲ್ಲಿ ನಿಯಮಿತವಾಗಿ ವಿಕೆಟ್ಗಳು ಉದುರಿದವು. ಈ ಮಧ್ಯೆ ನಿಕಿ ಪ್ರಸಾದ್ (58;61ಎ, 4x8) ಹೋರಾಟ ತೋರಿದರೂ ಗೆಲುವಿಗೆ ಸಾಕಾಗಲಿಲ್ಲ. 42.3 ಓವರ್ಗಳಲ್ಲಿ 211 ರನ್ಗಳಿಗೆ ಆಲೌಟ್ ಆಯಿತು.

ಮುಂಬೈ ಪರ ಅಕ್ಷಯಾ ಜಾಧವ್ ನಾಲ್ಕು ವಿಕೆಟ್ ಪಡೆದರೆ, ಐ.ಎಂ. ಪತಾರೆ ಮೂರು ವಿಕೆಟ್ ಕಬಳಿಸಿ ಗೆಲುವನ್ನು ತ್ವರಿತಗೊಳಿಸಿದರು.

ಸಂಕ್ಷಿಪ್ತ ಸ್ಕೋರ್:

ಮಹಾರಾಷ್ಟ್ರ: 50 ಓವರ್ಗಳಲ್ಲಿ 8 ವಿಕೆಟ್ಗೆ 286 (ಈಶ್ವರಿ ಸಾವ್ಕರ್ 61, ಈಶ್ವರಿ ಅವಸಾರೆ 36, ಭಾವಿಕಾ ಅಹಿರೆ 109; ಬಿ.ಜಿ. ತೇಜಸ್ವಿನಿ 57ಕ್ಕೆ 2, ವಂದಿತಾ ರಾವ್ 61ಕ್ಕೆ 3).

ಕರ್ನಾಟಕ: 42.3 ಓವರ್ಗಳಲ್ಲಿ 211 (ರಚಿತಾ ಹತ್ವಾರ್ 63, ನಿಕಿ ಪ್ರಸಾದ್ 58; ಐ.ಎಂ. ಪತಾರೆ 43ಕ್ಕೆ 3, ಕೆ.ಎನ್. ಮುಲ್ಲಾ 22ಕ್ಕೆ 2, ಅಕ್ಷಯಾ ಜಾಧವ್ 39ಕ್ಕೆ 2). ಫಲಿತಾಂಶ: ಮಹಾರಾಷ್ಟ್ರಕ್ಕೆ 75 ರನ್ಗಳ ಜಯ, ಚಾಂಪಿಯನ್. ಪಂದ್ಯದ ಮತ್ತು ಸರಣಿಯ ಆಟಗಾರ್ತಿ: ಭಾವಿಕಾ ಅಹಿರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.