ಮಂಗಳೂರು: ಹೋ... ಎಂಬ ಉದ್ಗಾರದ ನಂತರ ಕೆಲ ಕಾಲ ಸ್ತಬ್ದ. ಧಡ್...ಧಡ್; ಧಡ್...ಧಡ್ ಸದ್ದು ಮಾತ್ರ. ಕುತೂಹಲ, ನಿರೀಕ್ಷೆಯ ಕೊನೆಯಲ್ಲಿ ಅಯ್ಯೋ...ಎಂಬ ನಿರಾಸೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫೈನಲ್ ಪಂದ್ಯ ವೀಕ್ಷಿಸಲು ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಬಿಸಿಸಿಐ ಏರ್ಪಡಿಸಿದ್ದ ಫ್ಯಾನ್ ಪಾರ್ಕ್ನಲ್ಲಿ ಭಾನುವಾರ ಸಂಜೆ ಗುಜರಾತ್ ಟೈಟನ್ಸ್ನ ಸಾಯಿ ಸುದರ್ಶನ್ ರಿವ್ಯೂ ಮಾಡಿದ ನಂತರ ಕಂಡುಬಂದ ನೋಟ ಇದು.

ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟನ್ಸ್ನ ಆರಂಭಿಕ ಬ್ಯಾಟರ್ ಸಾಯಿ ಸುದರ್ಶನ್ ವೇಗಿ ಜೇಕಬ್ ಡಫಿ ಹಾಕಿದ ಮೊದಲ ಓವರನ್ 3 ಮತ್ತು 4ನೇ ಎಸೆತಗಳನ್ನು ಬೌಂಡರಿಗೆ ಅಟ್ಟಿದ್ದರು. 5ನೇ ಎಸೆತನವನ್ನು ಹುಕ್ ಮಾಡಲು ಪ್ರಯತ್ನಿಸಿದ್ದರು. ಚೆಂಡು ಅವರ ಗ್ಲೌಗೆ ತಾಗಿದಂತೆ ಸದ್ದು ಕೇಳಿತ್ತು. ಅಂಪೈರ್ ಔಟ್ ಕೊಟ್ಟಿದ್ದರು. ಆದರೆ ಸಾಯಿ ತಕ್ಷಣ ರಿವ್ಯೂ ಮಾಡಿದ್ದರು. ಮೂರನೇ ಅಂಪೈರ್ ಪರಿಶೀಲನೆ ಮಾಡುತ್ತಿದ್ದಾಗ ಬೃಹತ್ ಪರದೆಯ ಮುಂದೆ ಕುಳಿತಿದ್ದ ಆರ್ಸಿಬಿ ಬೆಂಬಲಿಗರು ಕುತೂಹಲಗೊಂಡಿದ್ದರು. ಆದರೆ ಔಟ್ ಅಲ್ಲ ಎಂಬ ತೀರ್ಪು ಬಂದಾಗ ನಿರಾಸೆಗೊಳಗಾದರು.

ಪಂದ್ಯ 7.30ಕ್ಕೆ ಆರಂಭಗೊಂಡಿದ್ದರೂ ಫ್ಯಾನ್ ಪಾರ್ಕ್ಗೆ ಕ್ರಿಕೆಟ್ ಪ್ರಿಯರು, ವಿಶೇಷವಾಗಿ ಆರ್ಸಿಬಿ ಫ್ಯಾನ್ಗಳು 5 ಗಂಟೆಯ ವೇಳೆಗೇ ‘ಅಂಗಣ’ದತ್ತ ಬರತೊಡಗಿದ್ದರು. ಪರದೆಯ ಮುಂದೆ ಕುಳಿತುಕೊಳ್ಳಲು ನೆಲದ ಮೇಲೆ ಹಸಿರು ಮ್ಯಾಟ್ ಹಾಸಲಾಗಿತ್ತು. ಅಬ್ಬರದ ಸಂಗೀತ ಮತ್ತು ಉದ್ಘೋಷಕ್ಕೆ ಪರಿಣಾಮಕಾರಿ ಸ್ಪೀಕರ್ಗಳನ್ನು ಅಳವಡಿಸಲಾಗಿತ್ತು. ಒಟ್ಟಾರೆ ಪರಿಸರವಿಡೀ ಕ್ರಿಕೆಟ್ ಅಂಗಣದಂತೆಯೇ ಆಗಿತ್ತು. ಆರ್ಸಿಬಿ ಜರ್ಸಿ ಹೋಲುವ ಪೋಷಾಕು ತೊಟ್ಟುಕೊಂಡು ಅಭಿಮಾನಿಗಳೂ ಬಂದ ಕಾರಣ ಅಂಗಣ ಪೂರ್ತಿ ಕೆಂಪಾದಂತೆ ಅನಿಸುತ್ತಿತ್ತು. ಆರ್ಸಿಬಿ..ಆರ್ಸಿಬಿ ಎಂಬ ಕೂಗು ಮುಖ್ಯರಸ್ತೆಗೆಯ ವರೆಗೂ ಕೇಳಿಸುತ್ತಿತ್ತು. ಪಂದ್ಯ ಆರಂಭವಾದ ನಂತರವೂ ‘ಪಾರ್ಕ್’ನತ್ತ ನಡೆದುಕೊಂಡು ಬರುತ್ತಿದ್ದವರೂ ಆರ್ಸಿಬಿಗೆ ಜಯಕಾರ ಹಾಕುತ್ತಿದ್ದರು.

ಎರಡನೇ ಓವರ್ನಲ್ಲಿ ಭುವನೇಶ್ವರ್ ಹಾಕಿದ ಎಸೆತವನ್ನು ಮುನ್ನುಗ್ಗಿ ಕವರ್ ಡ್ರೈವ್ ಮೂಲಕ ಶುಭಮನ್ ಗಿಲ್ ಬೌಂಡರಿಗೆ ಅಟ್ಟಿದಾಗ ಬ್ಯಾಟಿಂಗ್ನ ಆಕರ್ಷಣೆಗೆ ಕೆಲವೇ ಕೆಲವು ಗುಜರಾತ್ ಬೆಂಬಲಿಗರು ವ್ಹಾ..ಎಂದರೂ ಬಹುತೇಕರಲ್ಲಿ ಆತಂಕವಿತ್ತು. 3ನೇ ಓವರ್ನಲ್ಲಿ ಜೋಶ್ ಹ್ಯಾಜಲ್ವುಡ್ ಎಸೆತವನ್ನು ಪುಲ್ ಮಾಡಿ ಮಿಡ್ವಿಕೆಟ್ ಕಡೆಯಿಂದ ಬೌಂಡರಿ ಬಾರಿಸಿದಾಗಲೂ ಅದೇ ಉದ್ಗಾರಗಳು ಕೇಳಿಬಂದವು. ಆದರೆ ಮುಂದಿನ ಎಸೆತದಲ್ಲಿ ಗಿಲ್ ಔಟಾದಾಗ ಆರ್ಸಿಬಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತು. ಅಂಗಣದಲ್ಲಿ ಮೆಕ್ಸಿಕನ್ ಅಲೆ ಎದ್ದಿತು. ಮಿಡ್ ಆಫ್ನಿಂದ ಬಲಕ್ಕೆ ಓಡಿ ಮೋಹಕ ಕ್ಯಾಚ್ ಪಡೆದ ರಜತ್ ಪಾಟೀದಾರ್ಗೆ ಶಹಬ್ಬಾಸ್ ಗಿರಿ ಕೇಳಿಬಂತು.

ಆರ್ಸಿಬಿ ಬ್ಯಾಟರ್ಗಳು ಕ್ರೀಸ್ಗೆ ಬಂದಾಗ ಅಂತೂ ಅಭಿಮಾನಿಗಳ ಅಬ್ಬರ ಆಕಾಶದೆತ್ತರಕ್ಕೆ ಮುಟ್ಟಿತು. ಹಾಡು–ಕುಣಿತ, ಆಹಾರ ಮಳಿಗೆ, ಮಕ್ಕಳಿಗೆ ಆಟದ ತಾಣ, ಮನರಂಜನೆಯ ಆಟಗಳೂ ಇದ್ದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-29-88403315

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.