ರಾಯಪುರ: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ನಿನ್ನೆಯ (ಬುಧವಾರ) ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದೆ. ಈ ಪಂದ್ಯದಲ್ಲಿ ಸೋಲಿನ ನಡುವೆಯೂ ಕೆಕೆಆರ್ ಆಟಗಾರ, ಕನ್ನಡಿಗ ಮನೀಶ್ ಪಾಂಡೆ ಹಿಡಿದ ಕ್ಯಾಚ್ ಒಂದು ಪ್ರಶಂಸೆಗೆ ಕಾರಣವಾಗಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡವು ಆರ್ಸಿಬಿ ಗೆಲುವಿಗೆ 193 ರನ್ಗಳ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಆರ್ಸಿಬಿ ಇನ್ನೂ 5 ಎಸೆತಗಳು ಬಾಕಿ ಇರುವಂತೆ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರುತ್ತು.

ಇದೇ ವೇಳೆ ಕೆಕೆಆರ್ ಬೌಲಿಂಗ್ನ 18ನೇ ಓವರ್ನಲ್ಲಿ ಕಾರ್ತಿಕ್ ತ್ಯಾಗಿ ಎಸೆದ ಚೆಂಡನ್ನು ಟಿಮ್ ಡೇವಿಡ್ ಅವರು ಬಲವಾಗಿ ಕಟ್ ಮಾಡುತ್ತಾರೆ. ಚೆಂಡು ಬ್ಯಾಕ್ವರ್ಡ್ ಪಾಯಿಂಟ್ ಕಡೆಗೆ ಹೋಗುತ್ತದೆ. ನೆಲದ ಮಟ್ಟಕ್ಕಿಂತ ಸ್ವಲ್ಪ ಮೇಲೆ ಇದ್ದ ಚೆಂಡು ವೇಗವಾಗಿ ಮನೀಶ್ ಪಾಂಡೆ ಕಡೆ ಹೋಗುತ್ತದೆ.

ಕೂಡಲೆ ಮನೀಶ್ ಪಾಂಡೆ ಅವರು ತಮ್ಮ ಎಡಭಾಗಕ್ಕೆ ಜಿಗಿದು ಆ ಕ್ಯಾಚ್ ಅನ್ನು ಪೂರ್ಣಗೊಳಿಸುತ್ತಾರೆ. ಮನೀಶ್ ಪಾಂಡೆ ಹಿಡಿದ ಕ್ಯಾಚ್ ನೋಡಿದ ವಿರಾಟ್ ಕೊಹ್ಲಿ ಹಾಗೂ ಬ್ಯಾಟರ್ ಟಿಮ್ ಡೇವಿಡ್ ಒಂದು ಕ್ಷಣ ದಿಗ್ಭ್ರಮೆಗೊಳ್ಳುತ್ತಾರೆ. ಕ್ಯಾಚ್ ಅನ್ನು ಪರಿಶೀಲಿಸಿದ ಮೂರನೇ ಅಂಪೈರ್ ಕ್ರಮಬದ್ಧವಾದ ಕ್ಯಾಚ್ ಎಂದು ಪರಿಗಣಿಸಿ ಔಟ್ ನೀಡುತ್ತಾರೆ.

ಈ ಕ್ಯಾಚ್ ಹಿಡಿದ 36 ವರ್ಷದ ಮನೀಶ್ ಪಾಂಡೆ ಅವರ ಫಿಟ್ನೆಸ್ ಕುರಿತು ಕ್ರಿಕೆಟ್ ವಿಶ್ಲೇಷಕರು ಹಾಗೂ ಕ್ರಿಕೆಟ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅನೇಕರು ಈ ಕ್ಯಾಚ್ ಅನ್ನು ಐಪಿಎಲ್–2026ರ ‘ಸೀಸನ್ ಆಫ್ ದಿ ಕ್ಯಾಚ್’ ಎಂದು ಬಣ್ಣಿಸುತ್ತಿದ್ದರೆ. ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಅವರು ಮನೀಶ್ ಪಾಂಡೆ ಅವರನ್ನು ಅಪ್ಪಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.