ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೀಷ್ ಪಾಂಡೆ ಭರ್ಜರಿ ಶತಕ

Last Updated 21 ಆಗಸ್ಟ್ 2019, 19:46 IST
ಅಕ್ಷರ ಗಾತ್ರ

ಬೆಂಗಳೂರು: ಮನೀಷ್ ಪಾಂಡೆ ಬುಧವಾರ ರಾತ್ರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಪಿಎಲ್‌ ಟೂರ್ನಿಯ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದರು.

ತಮ್ಮ ‘ಗೆಳೆಯ’ ಆರ್‌. ವಿನಯಕುಮಾರ್ ನಾಯಕತ್ವದ ಹುಬ್ಬಳ್ಳಿ ಟೈಗರ್ಸ್‌ ವಿರುದ್ಧ ಮನೀಷ್ (ಔಟಾಗದೆ 102; 50ಎಸೆತ, 7ಬೌಂಡರಿ, 7ಸಿಕ್ಸರ್) ಶತಕ ಬಾರಿಸಿದ್ದು ವಿಶೇಷ. ಇದರಿಂದಾಗಿ ಬೆಳಗಾವಿ ಪ್ಯಾಂಥರ್ಸ್‌ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 180 ರನ್ ಗಳಿಸಿತು.

ಟಾಸ್ ಗೆದ್ದ ಹುಬ್ಬಳ್ಳಿ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ತಂಡದ ಬೌಲರ್‌ಗಳು ಬೆಳಗಾವಿಗೆ ಆರಂಭದಲ್ಲಿಯೇ ಆಘಾತ ನೀಡಿದರ. ಬೆಳಗಾವಿ ತಂಡವು ಕೇವಲ 41 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.

ವಿಂಡೀಸ್ ಎದುರಿನ ಏಕದಿನ ಸರಣಿಯಲ್ಲಿ ಅಡಿ ಬಂದಿರುವ ಮನೀಷ್ ಒಬ್ಬರೇ ಎಲ್ಲ ಬೌಲರ್‌ಗಳ ಬೆವರಿಳಿಸಿಬಿಟ್ಟರು. ಅವರಿಗೆ ಒಂದು ಜೀವದಾನ ನೀಡಿದ್ದು ವಿನಯ್ ಬಳಗಕ್ಕೆ ದುಬಾರಿಯಾಯಿತು. ಕೆಳಕ್ರಮಾಂಕದ ಬ್ಯಾಟಿಂಗ್‌ ಪಡೆಯಿಂದ ಯಾರೂ ದೊಡ್ಡ ಮೊತ್ತ ಗಳಿಸಲಿಲ್ಲ. ಆದರೆ ಮನೀಷ್ ಆಟಕ್ಕೆ ಸಾಟಿ ಇರಲಿಲ್ಲ. ಕೆಪಿಎಲ್‌ನಲ್ಲಿ ಇದು ಅವರ ಎರಡನೇ ಶತಕ. ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಟೂರ್ನಿಯಲ್ಲಿ ಮೊದಲ ಶತಕ ಬಾರಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಯೂ ಮನೀಷ್‌ಗೆ ಇದೆ.

ಸಂಕ್ಷಿಪ್ತ ಸ್ಕೋರು: ಬೆಳಗಾವಿ ಪ್ಯಾಂಥರ್ಸ್: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 180 (ಸ್ಟಾಲಿನ್ ಹೂವರ್ 19, ಶುಭಾಂಗ್ ಹೆಗಡೆ 18, ಮನೀಷ್ ಪಾಂಡೆ ಔಟಾಗದೆ 102, ಮೀರ್ ಕೌನೇನ್ ಅಬ್ಬಾಸ್ 18, ಆರ್ಷದೀಪ್ ಸಿಂಗ್ ಬ್ರಾರ್ 11, ಮಿತ್ರಕಾಂತ್ ಯಾದವ್ 37ಕ್ಕೆ1, ವಿದ್ಯಾಧರ್ ಪಾಟೀಲ 41ಕ್ಕೆ2, ಆದಿತ್ಯ ಸೋಮಣ್ಣ 17ಕ್ಕೆ1, ಪ್ರವೀಣ ದುಬೆ 19ಕ್ಕೆ1, ಡೇವಿಡ್ ಮಥಾಯಿಸ್ 18ಕ್ಕೆ2) ವಿವರ ಅಪೂರ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT