ಬೆಂಗಳೂರು: ಆಸ್ಟ್ರೇಲಿಯಾದ ಸ್ಫೋಟಕ ಶೈಲಿಯ ಬ್ಯಾಟರ್ ಟಿಮ್ ಡೇವಿಡ್ ಮತ್ತು ಬ್ಯಾಟಿಂಗ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಅವರಿಬ್ಬರೂ ಬುಧವಾರ ಏಕಕಾಲಕ್ಕೆ ಅಚ್ಚರಿಚಕಿತರಾಗುವಂತೆ ಮಾಡಿದವರು ಕರ್ನಾಟಕದ ಮನೀಷ್ ಪಾಂಡೆ.

ರಾಯಪುರದ ಶಹೀದ್ ವೀರನಾರಾಯಣ ಸಿಂಗ್ ಕ್ರೀಡಾಂ ಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದಲ್ಲಿರುವ ಪಾಂಡೆ ಪಡೆದ ಅಮೋಘ ಕ್ಯಾಚ್ ಹಾಗಿತ್ತು. ಆರ್ಸಿಬಿಯ ಡೇವಿಡ್ ಅವರು ಕಾರ್ತಿಕ್ ತ್ಯಾಗಿಯ ಎಸೆತವನ್ನು ಬ್ಯಾಕ್ಫುಟ್ನಲ್ಲಿ ಹೋಗಿ ಕಟ್ ಮಾಡಿದರು. ಚೆಂಡು ಗಾಳಿಯಲ್ಲಿ ಚಿಮ್ಮಿತು. ಚೆಂಡು ಇನ್ನೇನು ನೆಲಕ್ಕೆ ಸ್ಪರ್ಶಿಸಿ ಬೌಂಡರಿಯತ್ತ ರಭಸವಾಗಿ ಸಾಗಬೇಕು ಎನ್ನುವ ಹಂತದಲ್ಲಿ ಬ್ಯಾಕ್ವರ್ಡ್ ಪಾಯಿಂಟ್ನಲ್ಲಿದ್ದ ಪಾಂಡೆ ತಮ್ಮ ಎಡಕ್ಕೆ ಗಿಡುಗನಂತೆ ಹಾರಿ ಒಂದೇ ಕೈಯಲ್ಲಿ ಚೆಂಡನ್ನು ಹಿಡಿತಕ್ಕೆ ಪಡೆದು ನೆಲಕ್ಕುರುಳಿದರು. ‘ಇದ್ಯಾರು ಪಾಂಡೆನೋ, ಗ್ಲೆನ್ ಫಿಲಿಪ್ಪೋ’ ಎಂಬ ಉದ್ಗಾರ ಕಾಮೆಂಟ್ರಿ (ಹಿಂದಿ) ಬಾಕ್ಸ್ನಲ್ಲಿ ಹೊರಹೊಮ್ಮಿತ್ತು. ಬ್ಯಾಟರ್ ಡೇವಿಡ್ ಅಂತೂ ಗರಬಡಿದಂತೆ ನಿಂತುಬಿಟ್ಟರು. ನಾನ್ಸ್ಟ್ರೈಕರ್ ತುದಿಯಲ್ಲಿದ್ದ ವಿರಾಟ್ ಕೂಡ ಹುಬ್ಬೇರಿಸಿ, ತುಟ್ಟಿ ಕಚ್ಚಿ ತಲೆದೂಗಿದರು.

ಪಾಂಡೆ ಕ್ಯಾಚ್ ಪಡೆಯುವಾಗ ಚೆಂಡು ನೆಲಕ್ಕೆ ಸ್ಪರ್ಶಿಸಿದೆಯೇ ಎಂಬುದನ್ನು ಪರಿಶೀಲಿಸಿದ ಮೂರನೇ ಅಂಪೈರ್ ‘ಔಟ್’ ಎಂದು ತೀರ್ಪಿತ್ತು. ಡೇವಿಡ್ ಮರಳಿದರು.

ಪಾಂಡೆಯ ಈ ಸಾಹಸಭರಿತ ಕ್ಯಾಚ್ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಭಾರತ ತಂಡದ ಮಾಜಿ ಆಟಗಾರ, ಕರ್ನಾಟಕದ ದೊಡ್ಡ ಗಣೇಶ್ ಅವರು ಪಾಂಡೆ ಕ್ಯಾಚ್ನ ವಿಡಿಯೊವನ್ನು ‘ಎಕ್ಸ್’ನಲ್ಲಿ ಹಂಚಿಕೊಂಡು ಶ್ಲಾಘಿಸಿದ್ದಾರೆ.

ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ಕೋಚ್ ಆಗಿರುವ ಸುನಿಲ್ ಜೋಶಿ ಅವರೂ ಒಂದು ಹಳೆಯ ವಿಡಿಯೊ ಲಿಂಕ್ ಹಂಚಿಕೊಂಡಿದ್ದಾರೆ. ಮೈಸೂರಿನಲ್ಲಿ ನಡೆದಿದ್ದ ಕರ್ನಾಟಕ–ಮುಂಬೈ ನಡುವಣ ರಣಜಿ ಟ್ರೋಫಿ ಫೈನಲ್ನಲ್ಲಿ ಸುನಿಲ್ ಜೋಶಿ ಅವರ ಬೌಲಿಂಗ್ನಲ್ಲಿ ಅಭಿಷೇಕ್ ನಾಯರ್ ಹೊಡೆದಿದ್ದ ಚೆಂಡನ್ನು ಪಾಂಡೆ ಅಮೋಘವಾಗಿ ಕ್ಯಾಚ್ ಮಾಡಿದ್ದರು.

‘ಕೆಲವು ಕ್ಯಾಚ್ಗಳನ್ನು ಮರೆಯುವುದು ಅಸಾಧ್ಯ. ಅಂದು ಪಾಂಡೆ ಪಡೆದಿದ್ದ ಆ ಸಾಹಸಮಯ ಕ್ಯಾಚ್ಗೆ ಅಭಿಷೇಕ್ ನಾಯರ್ ಅವಾಕ್ಕಾಗಿದ್ದರು. ಈಗ ಅವರು ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಕೋಚ್ ಆಗಿದ್ದಾರೆ’ ಎಂದು ಪೋಸ್ಟ್ನಲ್ಲಿ ಬರೆದಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಮೊದಲ ಶತಕ ಗಳಿಸಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಯೂ ಪಾಂಡೆ ಅವರದ್ದು. 2009ರಲ್ಲಿ ಅವರು ಆರ್ಸಿಬಿಯಲ್ಲಿ ಆಡುವಾಗ ಡೆಕ್ಕನ್ ಚಾರ್ಜರ್ಸ್ ವಿರುದ್ಧ 114 ರನ್ ಗಳಿಸಿದ್ದರು. 36 ವರ್ಷದ ಪಾಂಡೆ ಪ್ರಸಕ್ತ ಐಪಿಎಲ್ನಲ್ಲಿ ಮೂರು ಪಂದ್ಯಗಳಲ್ಲಿ ಆಡಿದ್ದಾರೆ. ಆದರೆ ಬ್ಯಾಟಿಂಗ್ ಮಾಡುವ ಅವಕಾಶ ಅವರಿಗೆ ಸಿಕ್ಕಿಲ್ಲ. ಇದೀಗ ಅದ್ಭುತವಾದ ಕ್ಯಾಚ್ ಮೂಲಕ ಗಮನ ಸೆಳೆದಿದ್ದಾರೆ. ಪಂದ್ಯದ ನಂತರ ವಿರಾಟ್ ಅವರು ಪಾಂಡೆಯನ್ನು ತಬ್ಬಿಕೊಂಡು ಅಭಿನಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-51-914205849

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.