ಬೆಂಗಳೂರು: ಮನೋಜ್ ಭಾಂಡಗೆ ಅವರ ಮಿಂಚಿನ ಶತಕದ ಬಲದಿಂದ ಎಜಿಒ ರಿಕ್ರಿಯೇಷನ್ ಕ್ಲಬ್ (ಎಜಿಒಆರ್ಸಿ) ತಂಡವು ಕೆಎಸ್ಸಿಎ ಗ್ರೂಪ್ 2 ಡಿವಿಷನ್ 1 ಲೀಗ್ ಕಮ್ ನಾಕೌಟ್ ಟೂರ್ನಿಯ ಪಂದ್ಯದಲ್ಲಿ ಸೋಮವಾರ 8 ವಿಕೆಟ್ಗಳಿಂದ ರೈಲ್ವೆ ಇನ್ಸ್ಟಿಟ್ಯೂಟ್ (ದಕ್ಷಿಣ) ಹುಬ್ಬಳ್ಳಿ ತಂಡವನ್ನು ಮಣಿಸಿತು.

ಮದನ್ ಮೋಹನಕೃಷ್ಣ (72; 36 ಎಸೆತ) ಅವರ ಬಿರುಸಿನ ಅರ್ಧಶತಕದ ಬಲದಿಂದ ರೈಲ್ವೆ ಇನ್ಸ್ಟಿಟ್ಯೂಟ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿತು. ಎಜಿಒಆರ್ಸಿ ತಂಡದ ದರ್ಶನ್ ಎಂ.ಆರ್. (16ಕ್ಕೆ4) ಪರಿಣಾಮಕಾರಿ ಬೌಲಿಂಗ್ ದಾಳಿ ನಡೆಸಿದರು. ಮನೋಜ್ (ಔಟಾಗದೇ 101; 36 ಎಸೆತ, 4x7, 6x10) ಅವರ ಅಜೇಯ ಶತಕದ ಬಲದಿಂದ ಎಜಿಒಆರ್ಸಿ ತಂಡವು ಇನ್ನೂ 45 ಎಸೆತಗಳಿರುವಂತೆಯೇ ಗುರಿ ತಲುಪಿತು.

ಕೊನೆ ಓವರ್ವರೆಗೆ ಸಾಗಿದ ಇನ್ನೊಂದು ಪಂದ್ಯದಲ್ಲಿ ಕೇಂದ್ರ ಅಬಕಾರಿ ಮತ್ತು ಕಸ್ಟಮ್ಸ್ ತಂಡವು 4 ವಿಕೆಟ್ಗಳಿಂದ ಡಿಇಎಲ್ಎಲ್ ಕ್ರಿಕೆಟ್ ಕ್ಲಬ್ ತಂಡದ ವಿರುದ್ಧ ಗೆಲುವು ಸಾಧಿಸಿತು.

ಸಂಕ್ಷಿಪ್ತ ಸ್ಕೋರು: ರೈಲ್ವೆ ಇನ್ಸ್ಟಿಟ್ಯೂಟ್ (ದಕ್ಷಿಣ) ಹುಬ್ಬಳ್ಳಿ: 20 ಓವರ್ಗಳಲ್ಲಿ 8 ವಿಕೆಟ್ಗೆ 146 (ಮದನ್ ಮೋಹನಕೃಷ್ಣ 72; ದರ್ಶನ್ ಎಂ.ಆರ್. 16ಕ್ಕೆ4). ಎಜಿಒಆರ್ಸಿ: 12.3 ಓವರ್ಗಳಲ್ಲಿ 2 ವಿಕೆಟ್ಗೆ 147 (ಮನೋಜ್ ಭಾಂಡಗೆ ಔಟಾಗದೇ 101).

ಡಿಇಎಲ್ಎಲ್ ಕ್ರಿಕೆಟ್ ಕ್ಲಬ್: 20 ಓವರ್ಗಳಲ್ಲಿ 6 ವಿಕೆಟ್ಗೆ 171 (ವಿನಯ್ ಆರ್.ಎಸ್. 32, ಧನು ಔಟಾಗದೇ 34; ಸುರೇಶ್ ಎಚ್. ಕರಣಿ 31ಕ್ಕೆ2). ಕೇಂದ್ರ ಅಬಕಾರಿ ಮತ್ತು ಕಸ್ಟಮ್ಸ್: 19.3 ಓವರ್ಗಳಲ್ಲಿ 6 ವಿಕೆಟ್ಗೆ 172 (ಆರ್.ಸಮರ್ಥ್ 43, ತಿಪ್ಪಾರೆಡ್ಡಿ ಔಟಾಗದೇ 35; ರಾಜೇಶ್ ಎ. 27ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.