ಮಾಂಜ್ರೇಕರ್‌ಗೆ ತಿವಾರಿ ತಿರುಗೇಟು

7

ಮಾಂಜ್ರೇಕರ್‌ಗೆ ತಿವಾರಿ ತಿರುಗೇಟು

Published:
Updated:

ಚೆನ್ನೈ: ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ನಿಗದಿತ ವೇಳೆಯಲ್ಲಿ ಓವರ್‌ಗಳನ್ನು ಬೌಲಿಂಗ್ ಮಾಡುವಲ್ಲಿ ವಿಫಲವಾಗಿದ್ದ ಬಂಗಾಳ ತಂಡವನ್ನು ಟೀಕಿಸಿದ್ದ ವೀಕ್ಷಕ ವಿವರಣೆಗಾರ ಸಂಜಯ್ ಮಾಂಜ್ರೇಕರ್ ಅವರಿಗೆ ತಂಡದ ನಾಯಕ ಮನೋಜ್ ತಿವಾರಿ ತಿರುಗೇಟು ನೀಡಿದ್ದಾರೆ.

ಜಾರ್ಖಂಡ್ ಎದುರಿನ ಪಂದ್ಯದಲ್ಲಿ 50 ಓವರ್‌ಗಳನ್ನು ಬೌಲಿಂಗ್ ಮಾಡಲು ಬಂಗಾಳ ತಂಡವು ನಾಲ್ಕು ಗಂಟೆ ತೆಗೆದುಕೊಂಡಿತ್ತು.  ಈ ಕುರಿತು ಟ್ವೀಟ್ ಮಾಡಿದ್ದ ಮಾಂಜ್ರೇಕರ್, ‘ಈ ಪಂದ್ಯದ ಫಲಿತಾಂಶವನ್ನು ವಿಜೆಡಿ ಪದ್ಧತಿಯಲ್ಲಿ ನಿರ್ಧರಿಸಬೇಕು. ಆದರೆ ಮಳೆಯ ಕಾರಣಕ್ಕೆ ಆಲ್ಲ. ನಿಧಾನಗತಿಯ ಓವರ್‌ ರೇಟ್‌ಗಾಗಿ’ ಎಂದು ಟೀಕಿಸಿದ್ದರು.

ಇದಕ್ಕೆ ಸರಣಿ ಟ್ವೀಟ್‌ಗಳಲ್ಲಿ ಪ್ರತಿಕ್ರಿಯಿಸಿರುವ ಮನೋಜ್, ‘ಸರ್ ನೀವು ಟ್ವೀಟ್ ಮಾಡುವ ಮುನ್ನ ಈ ರೀತಿ ಆಗಲು ಕಾರಣಗಳೇನು ಎಂದು ತಂಡದ ವ್ಯವಸ್ಥಾಪಕರನ್ನು ಕೇಳಬಹುದಿತ್ತು. ಆದರೆ ಅಭಿಮಾನಿಗಳನ್ನು ಆಕರ್ಷಿಸಲು ಟ್ವೀಟ್ ಮಾಡಿದ್ದೀರಿ.  ಇಲ್ಲಿರುವ ಬಿಸಿ ವಾತಾವರಣದಲ್ಲಿ ಬಳಲುತ್ತಿರುವ ಬೌಲರ್‌ಗಳು ಸ್ವಲ್ಪ ನಿಧಾನಗತಿಯಲ್ಲಿ ಆಡಿದ್ದರು. ಬ್ಯಾಟ್ಸ್‌ಮನ್‌ಗಳು ಹೊಡೆದ ಚೆಂಡು ಮೈದಾನದ ಹೊರಗಿರುವ ಕಾಡಿನಲ್ಲಿ ಹೋಗಿ ಬೀಳುತ್ತಿವೆ. ಅದನ್ನು ಹುಡುಕಿ ತರುವುದು ವಿಳಂಬವಾಗುತ್ತಿತ್ತು. ಇದನ್ನು ಅರಿಯದೇ ನೀವು ಜನರಿಗೆ ತಪ್ಪು ಮಾಹಿತಿ ನೀಡಿದ್ದೀರಿ’ ಎಂದು ಉಲ್ಲೇಖಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !