ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌: ಮಾರ್ಷ್‌ ಹೊರಗುಳಿಯುವ ಸಾಧ್ಯತೆ

Last Updated 22 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ದುಬೈ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿರುದ್ಧದ ಪಂದ್ಯದ ವೇಳೆ ಉಂಟಾದ ಪಾದದ ಗಾಯವು ಗಂಭೀರವಾಗಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಮಿಚೆಲ್‌ಮಾರ್ಷ್‌ ಅವರು‌ ಈ ಬಾರಿಯ ಐಪಿಎಲ್‌ನಿಂದಲೇ ಹೊರನಡೆಯುವ ಸಾಧ್ಯತೆಗಳಿವೆ ಎಂದು ತಂಡದ ಮೂಲಗಳು ತಿಳಿಸಿವೆ.

ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ಮಾರ್ಷ್‌‌ ಅವರಿಗೆ ಆರ್‌ಸಿಬಿ ಇನಿಂಗ್ಸ್‌ ವೇಳೆ 5ನೇ ಓವರ್ ಬೌಲಿಂಗ್ ಮಾಡಲು ನಾಯಕ ಡೇವಿಡ್ ವಾರ್ನರ್ ಚೆಂಡು ನೀಡಿದ್ದರು. ಆದರೆ ಗಾಯದ ಹಿನ್ನೆಲೆಯಲ್ಲಿ ನಾಲ್ಕು ಎಸೆತಗಳನ್ನು ಮಾತ್ರ ಎಸೆಯಲುಅವರಿಗೆ ಸಾಧ್ಯವಾಯಿತು. ಅವರ ಓವರ್‌ಅನ್ನು‌‌ ಆಲ್‌ರೌಂಡರ್ ವಿಜಯಶಂಕರ್‌ ಪೂರ್ಣಗೊಳಿಸಿದ್ದರು.

ಹೈದರಾಬಾದ್ ಇನಿಂಗ್ಸ್‌ ವೇಳೆ‌ 10ನೇ ಆಟಗಾರನಾಗಿ ಬ್ಯಾಟ್‌ ಮಾಡಲು ಮಾರ್ಷ್‌‌ ಕಣಕ್ಕಿಳಿದರು. ಆಗಲೂ ಅವರಿಗೆ ನೋವು ಕಾಡಿತು. ಒಂದೂ ರನ್‌ ಗಳಿಸದೆ ಶಿವಂ ದುಬೆ ಅವರಿಗೆ ವಿಕೆಟ್‌ ಒಪ್ಪಿಸಿದರು.

‘ಮಾರ್ಷ್‌ ಅವರಿಗೆ ಗಂಭೀರ ಗಾಯವಾದಂತೆ ಕಾಣುತ್ತಿದೆ. ಅವರು ಮುಂದಿನ ಯಾವುದೇ ಪಂದ್ಯಗಳಲ್ಲಿ ಆಟವಾಡಲು ಸಾಧ್ಯವಾಗುವುದೇ ಎಂಬುದರ ಬಗ್ಗೆ ಖಚಿತವಿಲ್ಲ‘ ಎಂದು ತಂಡದ ಮೂಲಗಳು ತಿಳಿಸಿವೆ.

ಆರ್‌ಸಿಬಿ ಮತ್ತು ಸನ್‌ರೈಸರ್ಸ್‌ ಹೈದರಾಬಾದ್ ನಡುವೆ ದುಬೈನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ, ಆರ್‌ಸಿಬಿ 10 ರನ್‌ಗಳ ಜಯ ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT