ಶುಕ್ರವಾರ, ಡಿಸೆಂಬರ್ 6, 2019
21 °C

ಪ್ಯಾಟಿನ್ಸನ್‌ಗೆ ಪಂದ್ಯ ನಿಷೇಧ

Published:
Updated:
Prajavani

ಸಿಡ್ನಿ: ಆಟಗಾರನೊಬ್ಬನನ್ನು ನಿಂದಿಸಿದ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ವೇಗಿ ಜೇಮ್ಸ್ ಪ್ಯಾಟಿನ್ಸನ್‌ ಮೇಲೆ ಒಂದು ಪಂದ್ಯದ ನಿಷೇಧ ಹೇರಲಾಗಿದೆ. ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯಕ್ಕೆ ಅವರು ಅಲಭ್ಯರಾಗಿದ್ದಾರೆ.

ಹೋದ ವಾರ ವಿಕ್ಟೋರಿಯಾ ಹಾಗೂ ಕ್ವೀನ್ಸ್‌ಲ್ಯಾಂಡ್‌ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪ್ಯಾಟಿನ್ಸನ್‌ ಕ್ರಿಕೆಟ್‌ ಆಸ್ಟ್ರೇಲಿಯಾದ ಶಿಸ್ತು ಉಲ್ಲಂಘಿ ಸಿದ್ದು ಕಂಡುಬಂದಿತ್ತು. ಅವರು ಏನು ಹೇಳಿದರು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಆಡಳಿತ ಮಂಡಳಿ ‘ಇದು ಫೀಲ್ಡಿಂಗ್‌ ವೇಳೆ ಆಟಗಾರನಿಗೆ ಮಾಡಿದ ವೈಯಕ್ತಿಕ ನಿಂದನೆ’ ಎಂದಿದೆ.

ಪ್ರತಿಕ್ರಿಯಿಸಿ (+)