ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿಶತಕ ವಂಚಿತ ಮ್ಯಾಥ್ಯೂಸ್

Last Updated 16 ಮೇ 2022, 15:45 IST
ಅಕ್ಷರ ಗಾತ್ರ

ಚಿತ್ತಗಾಂಗ್, ಬಾಂಗ್ಲಾದೇಶ: ಒಂದು ರನ್‌ನಿಂದ ದ್ವಿಶತಕ ತಪ್ಪಿಸಿಕೊಂಡ ಆಲ್‌ರೌಂಡರ್ ಏಂಜೆಲೊ ಮ್ಯಾಥ್ಯೂಸ್ ಅವರ ಅಮೋಘ ಬ್ಯಾಟಿಂಗ್‌ ಶ್ರೀಲಂಕಾ ತಂಡದ ಉತ್ತಮ ಮೊತ್ತಕ್ಕೆ ಕಾರಣವಾಯಿತು.

ಇಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ಎದುರಿನ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಶ್ರೀಲಂಕಾ 397 ರನ್‌ಗಳಿಗೆ ಆಲೌಟಾಯಿತು. ಎರಡನೇ ದಿನವಾದ ಸೋಮವಾರದ ಅಂತ್ಯಕ್ಕೆ ಆತಿಥೇಯರು ವಿಕೆಟ್ ಕಳೆದುಕೊಳ್ಳದೆ 76 ರನ್ ಗಳಿಸಿದ್ದಾರೆ.

ಭಾನುವಾರ 90 ಓವರ್‌ಗಳಲ್ಲಿ 4ಕ್ಕೆ 258 ರನ್ ಗಳಿಸಿದ್ದ ಲಂಕಾ ತಂಡದ ಪರವಾಗಿ ಮ್ಯಾಥ್ಯೂಸ್ 114 ರನ್ ಗಳಿಸಿದ್ದರು. ಸೋಮವಾರವೂ ಅವರ ಭರ್ಜರಿ ಆಟ ಮುಂದುವರಿಯಿತು. ನಯೀಮ್ ಹಸನ್ ಹಾಕಿದ 153ನೇ ಓವರ್‌ನ ಕೊನೆಯ ಎಸೆತದಲ್ಲಿ ಸ್ಕ್ವೇರ್ ಲೆಗ್‌ನಲ್ಲಿದ್ದ ಶಕೀಬ್ ಅಲ್ ಹಸನ್‌ಗೆ ಕ್ಯಾಚ್ ನೀಡಿ ಮ್ಯಾಥ್ಯೂಸ್ (199; 397 ಎಸೆತ, 19 ಬೌಂಡರಿ, 1 ಸಿಕ್ಸರ್) ನಿರ್ಗಮಿಸಿದರು. ನಯೀಮ್ ಆರು ವಿಕೆಟ್‌ಗಳ ಸಾಧನೆ ಮಾಡಿದರು.

ಶ್ರೀಲಂಕಾದ ಕೊನೆಯ ಆರು ವಿಕೆಟ್‌ಗಳು 78 ರನ್‌ಗಳಿಗೆ ಉರುಳಿದವು. ಮೊದಲ ಇನಿಂಗ್ಸ್‌ನಲ್ಲಿ ಬಾಂಗ್ಲಾದೇಶಕ್ಕೆ ಮೊಹಮ್ಮದುಲ್ ಹಸನ್ ಮತ್ತು ತಮೀಮ್ ಇಕ್ಬಾಲ್ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದಾರೆ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಶ್ರೀಲಂಕಾ: 153 ಓವರ್‌ಗಳಲ್ಲಿ 397 (ಒಶಾಡೊ ಫರ್ನಾಂಡೊ 36, ಕುಶಾಲ್ ಮೆಂಡಿಸ್ 54, ಏಂಜೆಲೊ ಮ್ಯಾಥ್ಯೂಸ್ 199, ದಿನೇಶ್ ಚಾಂದಿಮಲ್ 66; ನಯೀಮ್ ಹಸನ್105ಕ್ಕೆ‌6, ತೈಜುಲ್ ಇಸ್ಲಾಂ 107ಕ್ಕೆ1, ಶಕೀಬ್ ಅಲ್ ಹಸನ್ 60ಕ್ಕೆ3); ಬಾಂಗ್ಲಾದೇಶ: 19 ಓವರ್‌ಗಳಲ್ಲಿ 76 (ಮಹಮ್ಮದುಲ್ ಹಸನ್ ಜಾಯ್ 31, ತಮೀಮ್ ಇಕ್ಬಾಲ್ 35).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT