ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯೊಬಬಲ್ ಸವಾಲೇ ಸರಿ: ಮ್ಯಾಕ್ಸ್‌ವೆಲ್‌

Last Updated 7 ಏಪ್ರಿಲ್ 2021, 16:55 IST
ಅಕ್ಷರ ಗಾತ್ರ

ಚೆನ್ನೈ: ಸತತವಾಗಿ ಬಯೊಬಬಲ್‌ನಲ್ಲಿ ಕಳೆಯುವುದೊಂದು ದುಸ್ವಪ್ನ. ಈ ಕಠಿಣ ಜೀವನ ವಿಧಾನವನ್ನು ಅನುಸರಿಸುವುದು ದೊಡ್ಡ ಸವಾಲೇ ಸರಿ ಎಂದು ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಅಭಿಪ್ರಾಯಪಟ್ಟರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿರಿರುವ ಅವರು ತಂಡದ ಯು ಟ್ಯೂಬ್ ಚಾನಲ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೊದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಆಟಗಾರರಿಗೆ ಹೊರಜಗತ್ತಿನೊಂದಿಗೆ ಬೆರೆಯಲು ಆಗುತ್ತಿಲ್ಲ. ಸಂವಾದ ನಡೆಯುತ್ತಿಲ್ಲ. ಇದರಿಂದ ಮಾನಸಿಕವಾಗಿ ಕುಗ್ಗಿಹೋಗುತ್ತೇವೆ. ಈ ಒತ್ತಡವನ್ನು ನಿರ್ವಹಿಸುವುದು ದೊಡ್ಡ ಸವಾಲು. ಹೀಗಿದ್ದರೂ ಆಟದ ಅಂಗಣಕ್ಕೆ ಮರಳು ಸಾಧ್ಯವಾಗಿರುವುದು ಖುಷಿಯ ಸಂಗತಿ’ ಎಂದು ಅವರು ನುಡಿದಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿರ್ಸ್ ಜೊತೆಗೂಡಿ ಆಡುವುದು ಸಂಭ್ರವವೇ ಸರಿ. ಈ ಬಾರಿ ಅವರೊಂದಿಗೆ ತಂಡಕ್ಕಾಗಿ ಉತ್ತಮ ಆಟವಾಡಲು ಸಾಧ್ಯವಾಗುವ ಭರವಸೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT