ಲಖನೌ: ‘ಈ ಹಿಂದೆ ಆಡುವ ಭರದಲ್ಲಿ ದೇಹದ ಬಗ್ಗೆ ನಾನು ಅಷ್ಟೇನೂ ಕಾಳಜಿ ವಹಿಸಿರಲಿಲ್ಲ. ಆದರೆ ಗಂಭೀರ ಸ್ವರೂಫದ ಗಾಯದ ಸಮಸ್ಯೆಗಳು ಎದುರಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಪುನಶ್ಚೇತನ ಅವಧಿಯಲ್ಲಿ ಜಸ್ಪ್ರೀತ್ ಬೂಮ್ರಾ ಜೊತೆಗಿನ ಸಂವಾದ ನನ್ನ ಚೇತರಿಕೆಗೆ ನೆರವು ನೀಡಿತು’ ಎಂದು ವೇಗದ ಬೌಲರ್ ಮಯಂಕ್ ಯಾದವ್ ಹೇಳಿದ್ದಾರೆ.

23 ವರ್ಷ ವಯಸ್ಸಿನ ಮಯಂಕ್ 2024ರ ಐಪಿಎಲ್ನ ಕೆಲವು ಪಂದ್ಯಗಳಲ್ಲಿ ತಮ್ಮ ವೇಗದಿಂದ ಗಮನ ಸೆಳೆದಿದ್ದರು. ಆದರೆ ಕೆಲವೇ ಪಂದ್ಯಗಳ ಬಳಿಕ ಕಾಣಿಸಿಕೊಂಡ ಗಾಯದ ಸಮಸ್ಯೆ ಅವರ ವೃತ್ತಿಜೀವನದ ಮೇಲೆ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದ್ದವು. ಈಗ ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ಪುನಶ್ಚೇತನ ಅವಧಿ ಪೂರ್ಣಗೊಳಿಸಿರುವ ಅವರು ಲಖನೌ ಸೂಪರ್ ಜೈಂಟ್ಸ್ ತಂಡದ ಪರ ಮರಳಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

‘ಶಸ್ತ್ರಚಿಕಿತ್ಸೆಯ ನಂತರದ ಅವಧಿ ನನ್ನಲ್ಲಿ ಬದಲಾವಣೆಗಳನ್ನು ತಂದಿತು. ಈ ಮೊದಲು ನಾನು ದೇಹದ ಬಗ್ಗೆ ಅಷ್ಟೇನೂ ಗಮನಹರಿಸುತ್ತಿರಲಿಲ್ಲ. ಪೂರ್ಣ ಗುಣಮುಖನಾಗುವ ಮೊದಲೇ ಆಡಲು ಇಳಿಯುತ್ತಿದ್ದೆ. ಆದರೆ ಶಸ್ತ್ರಚಿಕಿತ್ಸೆಯ ನಂತರ ಚೇತರಿಕೆ, ಪೌಷ್ಟಿಕ ಆಹಾರ, ನಿದ್ದೆ ಕಡೆ ಗಮನ ನೀಡಿದ್ದೇನೆ. ದೇಹಾರೋಗ್ಯದ ಬಗ್ಗೆ ಕಾಳಜಿ ವಹಿಸಿದೆ. ಈಗ ಆಡಲು ದೇಹವೂ ಅನುವು ಮಾಡಿಕೊಟ್ಟಿದೆ’ ಎಂದು ಮಯಂಕ್ ಅವರು ಜಿಯೊಸ್ಟಾರ್ನ ಐಪಿಎಲ್ ಟುಡೇ ಲೈವ್ಗೆ ತಿಳಿಸಿದ್ದಾರೆ.

ಎನ್ಸಿಎನಲ್ಲಿ ಪುನಶ್ಚೇತನ ಅವಧಿಯಲ್ಲಿ ಬೂಮ್ರಾ ಭಯ್ಯಾ (ಸೋದರ) ಅಲ್ಲಿದ್ದರು. ಅವರ ಜೊತೆಗೆ ನನಗೆ ಒಳ್ಳೆಯ ನಂಟು ಇದೆ. ನನಗೆ ಅವರು ಶಿಕ್ಷಕನಿದ್ದಂತೆ. ಅವರಿಗೂ ಶಸ್ತ್ರಚಿಕಿತ್ಸೆ ಆಗಿತ್ತು’ ಎಂದು ಅವರು ಹೇಳಿದರು.

‘ಅವರು ನಾನು ಕರೆ ಮಾಡಿದಾಗ ಅಥವಾ ಸಂದೇಶ ಕಳುಹಿಸಿದಾಗ ಅವರ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು’ ಎಂದು ಮಯಂಕ್ ನೆನಪಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.