ಬುಧವಾರ, ಅಕ್ಟೋಬರ್ 28, 2020
28 °C

ಮುಂಬೈನಲ್ಲಿ ಮುಷ್ತಾಕ್‌ ಅಲಿ ಟ್ವೆಂಟಿ–20 ಟೂರ್ನಿ ಆಯೋಜಿಸಲು ಮನವಿ

ಪಿಟಿಐ Updated:

ಅಕ್ಷರ ಗಾತ್ರ : | |

ಕ್ರಿಕೆಟ್‌ ಟೂರ್ನಿ– ಪ್ರಾತಿನಿಧಿಕ ಚಿತ್ರ

ಮುಂಬೈ: ಈ ಬಾರಿಯ ಮುಷ್ತಾಕ್ ಅಲಿ ಟ್ವೆಂಟಿ–20 ಟೂರ್ನಿಯನ್ನು ಮುಂಬೈನಲ್ಲಿ ಆಯೋಜಿಸುವಂತೆ ಮುಂಬೈ ಕ್ರಿಕೆಟ್‌ ಸಂಸ್ಥೆಯ ಅಪೆಕ್ಸ್‌ ಕೌನ್ಸಿಲ್‌ ಸದಸ್ಯ ಹಾಗೂ ಪಿಚ್‌ ಕ್ಯೂರೇಟರ್‌ ನದೀಮ್‌ ಮೆನನ್‌ ಬಿಸಿಸಿಐಗೆ ಮನವಿ ಮಾಡಿದ್ದಾರೆ. ಈ ದೇಶಿ ಟೂರ್ನಿಯನ್ನು ನಡೆಸಲು ಬೇಕಾದ ಸಾಕಷ್ಟು ಕ್ರೀಡಾಂಗಣಗಳು ಮುಂಬೈನಲ್ಲಿವೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಈ ಕುರಿತು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅವರಿಗೆ ಮೆನನ್‌ ಇ–ಮೇಲ್‌ ಮಾಡಿದ್ದಾರೆ. 

‘2020ರ ಮುಷ್ತಾಕ್‌ ಅಲಿ ಟ್ವೆಂಟಿ–20 ಟೂರ್ನಿಯನ್ನು ಆಯೋಜಿಸುವ ಜವಾಬ್ದಾರಿಯನ್ನು ಮುಂಬೈಗೆ ನೀಡಬೇಕು. ಇಲ್ಲಿ ಗುಣಮಟ್ಟದ ಆರು ಕ್ರೀಡಾಂಗಣಗಳು ಹಾಗೂ ಹೊಟೇಲ್‌ ವ್ಯವಸ್ಥೆ ಇದೆ. ಬಿಸಿಸಿಐನ ಮಾರ್ಗಸೂಚಿಗಳ ಅನ್ವಯ ಎಲ್ಲ ಕ್ರಿಕೆಟಿಗರು ಹಾಗೂ ಅಧಿಕಾರಿಗಳ ಸುರಕ್ಷತೆಗೆ ಗಮನ ನೀಡಲಾಗುವುದು. 2020ರ ಅಖಿಲ ಭಾರತ ಮಹಿಳಾ ಬಿಸಿಸಿಐ ಏಕದಿನ ಟೂರ್ನಿಯನ್ನು ಮುಂಬೈ ಯಶಸ್ವಿಯಾಗಿ ನಡೆಸಿತ್ತು‘ ಎಂದು ಮೆಮನ್‌ ಅವರು ಇ–ಮೇಲ್‌ನಲ್ಲಿ ವಿವರಿಸಿದ್ದಾರೆ.

‘ಆಟಗಾರರು ಹಾಗೂ ಅಧಿಕಾರಿಗಳು ಮುಂಬೈನ ಹೊಟೇಲ್‌ಗಳಿಗೆ ಆಗಮಿಸುವ ಮೊದಲು ಹಾಗೂ ಟೂರ್ನಿ ಆರಂಭವಾಗುವ ಮೂರ್ನಾಲ್ಕು ದಿನಗಳ ಮುನ್ನ ಕೋವಿಡ್‌–19 ಪರೀಕ್ಷೆಗೆ ಒಳಪಟ್ಟಿರುವುದನ್ನು ಬಿಸಿಸಿಐ ಖಚಿತಪಡಿಸಬೇಕು‘ ಎಂದೂ ಮೆನನ್‌ ಹೇಳಿದ್ದಾರೆ.

ದೇಶಿ ಟೂರ್ನಿಗಳನ್ನು ಆಯೋಜಿಸುವ ಕುರಿತು ಬಿಸಿಸಿಐ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಭಾರತೀಯ ಕ್ರಿಕೆಟಿಗರ ಸಂಘದ ಮುಖ್ಯಸ್ಥ ಅಶೋಕ್‌ ಮಲ್ಹೋತ್ರಾ ಅವರು ಮೆಮನ್‌ ಅವರ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೊರೊನಾ ತಡೆಯಲು ವಿಧಿಸಿದ ಲಾಕ್‌ಡೌನ್‌ನಿಂದ ಯಾವುದೇ ಪರ್ಯಾಯ ಉದ್ಯೋಗವಿಲ್ಲದೆ ಪರದಾಡುತ್ತಿರುವ ಕ್ರಿಕೆಟಿಗರಿಗೆ, ದೇಶಿ ಕ್ರಿಕೆಟ್‌ ಆರಂಭವು ಆರ್ಥಿಕ ಸಹಾಯ ಆಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು