ಕೊಹ್ಲಿ ಬದ್ಧತೆ ಶ್ಲಾಘಿಸಿದ ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ಗ್ಲೆನ್ ಮೆಕ್‌ಗ್ರಾ

7

ಕೊಹ್ಲಿ ಬದ್ಧತೆ ಶ್ಲಾಘಿಸಿದ ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ಗ್ಲೆನ್ ಮೆಕ್‌ಗ್ರಾ

Published:
Updated:
Deccan Herald

ಬೆಂಗಳೂರು: ಯುವ ಆಟಗಾರರಿಗೆ ನಾನು ಯಾವಾಗಲೂ ವಿರಾಟ್ ಕೊಹ್ಲಿ ಅವರ ಉದಾಹರಣೆಯನ್ನು ನೀಡುತ್ತೇನೆ. ಅವರಷ್ಟು ಪರಿಶ್ರಮ ಮತ್ತು ಬದ್ಧತೆಯಿಂದ ಅಭ್ಯಾಸ ಮಾಡುವವರನ್ನು ನೋಡಿಲ್ಲ ಎಂದು ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ. ಎಂ.ಆರ್‌.ಎಫ್ ಪೇಸ್ ಫೌಂಡೇಷನ್ ನಿರ್ದೇಶಕ ಗ್ಲೆನ್ ಮೆಕ್‌ಗ್ರಾ ಹೇಳಿದರು.

ಗುರುವಾರ ಇಲ್ಲಿ ಆರಂಭವಾದ ಫೌಂಡೇಷನ್‌ನ ಎರಡು ದಿನಗಳ ಶಿಬಿರದಲ್ಲ್ಲಿ ಅವರು ಉದಯೋನ್ಮುಖ ಬೌಲರ್‌ಗಳಿಗೆ ಮಾರ್ಗದರ್ಶನ ನೀಡಲು ಬಂದಿದ್ದಾರೆ. ಈ ಸಂದರ್ಭದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

‘ಅದೃಷ್ಟದ ಬಲದಿಂದ ಅಥವಾ ಆಕಸ್ಮಿಕವಾಗಿ ತಾರೆಯಾಗಿ ಬೆಳೆದವರಲ್ಲ ಕೊಹ್ಲಿ. ಅಪ್ಪಟ ಶ್ರಮ ಮತ್ತು ಪ್ರಾಮಾಣಿಕ ಪ್ರಯತ್ನಗಳಿಂದಲೇ ಅವರು ಈ ಎತ್ತರಕ್ಕೆ ಏರಿದ್ದಾರೆ. ಈ ಹಿಂದೆ ಅಡಿಲೇಡ್‌ನಲ್ಲಿ ನಡೆದಿದ್ದ ಟೆಸ್ಟ್‌ ಪಂದ್ಯದಲ್ಲಿ ನಾನು ವೀಕ್ಷಕ ವಿವರಣೆಗಾರನಾಗಿದ್ದೆ. ಭಾರತ ತಂಡವು ಉಳಿದುಕೊಂಡಿದ್ದ ಹೋಟೆಲ್‌ನಲ್ಲಿಯೇ ನಾನೂ ತಂಗಿದ್ದೆ. ಪ್ರತಿದಿನವೂ ಬೆಳಿಗ್ಗೆ ದಿನದಾಟದ ಆರಂಭಕ್ಕೂ ಕೆಲವು ಗಂಟೆಗಳ ಮುನ್ನ ವಿರಾಟ್ ಜಿಮ್ನಾಷಿಯಂನಲ್ಲಿ ವ್ಯಾಯಾಮ ಮಾಡುವುದನ್ನು ನೋಡಿದ್ದೇನೆ. ಯಾವುದೇ ಕಾರಣಕ್ಕೂ ಅವರು ದೈಹಿಕ ವ್ಯಾಯಾಮವನ್ನು ತಪ್ಪಿಸುವುದಿಲ್ಲ. ಬೇರೆ ಆಟಗಾರರಲ್ಲಿ ಈ ಬದ್ಧತೆಯನ್ನು ನೋಡಿಲ್ಲ’ ಎಂದು ನೆನಪಿಸಿಕೊಂಡರು.

ತರಬೇತಿ ಶಿಬಿರದ ಕುರಿತು ಮಾತನಾಡಿದ ಅವರು, ‘ಕೆಲವು ಉದಯೋನ್ಮುಖ ಬೌಲರ್‌ಗಳು ಚೆನ್ನಾಗಿದ್ದಾರೆ. ಖಲೀಲ್ ಅಹಮದ್, ಪ್ರಸಿದ್ಧ ಕೃಷ್ಣ ಮತ್ತು ಅಂಕಿತ್ ರಜಪೂತ್ ಅವರು  ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಅವರು ಭಾರತ ‘ಎ’ ತಂಡದಲ್ಲಿ ಆಡುತ್ತಿರುವುದು ಒಳ್ಳೆಯದು’ ಎಂದು ಹೇಳಿದರು.

‘ಅಂಕಿತ್ ರಜಪೂತ್ ಅವರಲ್ಲಿ ವಿಶೇಷ ಪ್ರತಿಭೆ ಇದೆ. ಅವರ ಬೌಲಿಂಗ್‌ಗೆ ನಾನು ಮನಸೋತಿದ್ದೇನೆ. ಅವರ ಎಸೆತಗಳಲ್ಲಿ ವೈವಿಧ್ಯತೆ ಇದೆ. ಆದ್ದರಿಂದ ಅವರು ಬಹಳ ಎತ್ತರಕ್ಕೆ ಬೆಳೆಯಬಲ್ಲರು’ ಎಂದು ಹೇಳಿದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !