ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಸ್ಟ್ ಇಂಡೀಸ್‌ ವಿರುದ್ಧದ ಟೆಸ್ಟ್: ಮೆಹಿದಿ ಶತಕ, ಬಾಂಗ್ಲಾ ಉತ್ತಮ ಮೊತ್ತ

ಶಕೀಬ್ ಅರ್ಧಶತಕ
Last Updated 4 ಫೆಬ್ರುವರಿ 2021, 13:40 IST
ಅಕ್ಷರ ಗಾತ್ರ

ಚತ್ತೊಗ್ರಾಮ್‌, ಬಾಂಗ್ಲಾದೇಶ: ಮೊದಲ ಬಾರಿ ಶತಕ ಗಳಿಸಿದ ಮೆಹಿದಿ ಹಸನ್‌ (103) ಬಾಂಗ್ಲಾದೇಶ ತಂಡವು ಉತ್ತಮ ಮೊತ್ತ ಕಲೆಹಾಕಲು ನೆರವಾದರು. ವೆಸ್ಟ್ ಇಂಡೀಸ್ ವಿರುದ್ಧ ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ತಂಡವು ಮೊದಲ ಇನಿಂಗ್ಸ್‌ನಲ್ಲಿ 430 ರನ್ ಗಳಿಸಿತು.

ಉತ್ತರವಾಗಿ ಬ್ಯಾಟಿಂಗ್ ಮಾಡುತ್ತಿರುವ ವೆಸ್ಟ್ ಇಂಡೀಸ್ ಗುರುವಾರ ಎರಡನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್‌ ಕಳೆದುಕೊಂಡು 75 ರನ್‌ ಗಳಿಸಿದೆ. ನಾಯಕ್ ಕ್ರೇಗ್‌ ಬ್ರಾಥ್‌ವೇಟ್‌ (ಬ್ಯಾಟಿಂಗ್‌ 49) ಹಾಗೂ ಕುಮ್ರಾ ಬೊನ್ನರ್‌ (ಬ್ಯಾಟಿಂಗ್‌ 17) ಕ್ರೀಸ್‌ನಲ್ಲಿದ್ದು, ಮುರಿಯದ ಎರಡನೇ ವಿಕೆಟ್‌ ಜೊತೆಯಾಟದಲ್ಲಿ 51 ರನ್‌ಗಳನ್ನು ಕಲೆಹಾಕಿದ್ದರು.

ಬಾಂಗ್ಲಾ ಇನಿಂಗ್ಸ್‌ನ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಆಲ್‌ರೌಂಡರ್‌ ಮೆಹಿದಿ ಹಸನ್‌ ಪ್ರವಾಸಿ ಪಡೆಯ ಬೌಲರ್‌ಗಳಿಗೆ ಸವಾಲಾದರು. 168 ಎಸೆತಗಳನ್ನು ಎದುರಿಸಿದ ಅವರ ಬ್ಯಾಟಿಂಗ್‌ನಲ್ಲಿ 13 ಬೌಂಡರಿಗಳಿದ್ದವು. ಮೂರು ಪ್ರಮುಖ ಜೊತೆಯಾಟಗಳಲ್ಲಿ ಅವರು ಭಾಗಿಯಾದರು.

ಏಳನೇ ವಿಕೆಟ್‌ಗೆ ಶಕೀಬ್ ಅಲ್ ಹಸನ್ (68) ಜೊತೆಯಾಗಿ 67, ಎಂಟನೇ ವಿಕೆಟ್‌ ಜೊತೆಯಾಟದಲ್ಲಿ ತೈಜುಲ್ ಇಸ್ಲಾಂ (18) ಜೊತೆ 45 ಹಾಗೂ 9ನೇ ವಿಕೆಟ್‌ಗೆ ನಯೀಂ ಹಸನ್ (24) ಜೊತೆಗೂಡಿ 67 ರನ್‌ ಸೇರಿಸಿದರು.

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್: ಬಾಂಗ್ಲಾದೇಶ (ಬುಧವಾರ 90 ಓವರ್‌ಗಳಲ್ಲಿ 5ಕ್ಕೆ 242): 150.2 ಓವರ್‌ಗಳಲ್ಲಿ 430 (ಶಕೀಬ್ ಅಲ್ ಹಸನ್‌ 68, ಮೆಹಿದಿ ಹಸನ್‌ 103, ನಯೀಂ ಹಸನ್‌ 24, ಲಿಟನ್ ದಾಸ್ 38, ಶಾದ್ಮನ್ ಇಸ್ಲಾಮ್ 59; ಜೊಮೆಲ್ ವಾರಿಕನ್‌ 133ಕ್ಕೆ 4, ರಖೀಮ್ ಕಾರ್ನವಾಲ್‌ 114ಕ್ಕೆ 2, ಕ್ರುಮಾ ಬೊನ್ನರ್‌ 16ಕ್ಕೆ 1). ವೆಸ್ಟ್ ಇಂಡೀಸ್‌ :ಕ್ರೇಗ್ ಬ್ರಾಥ್‌ವೇಟ್‌ ಬ್ಯಾಟಿಂಗ್ 49, ಕ್ರುಮಾ ಬೊನ್ನರ್‌ ಬ್ಯಾಟಿಂಗ್‌ 17; ಮುಸ್ತಫಿಜುರ್ ರೆಹಮಾನ್‌ 18ಕ್ಕೆ 2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT