ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆಡಲು ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರಿಗೆ ಕ್ರಿಕೆಟ್ ಆಸ್ಟ್ರೇಲಿಯಾವು ನಿರಾಕ್ಷೇಪಣಾ ಪತ್ರವನ್ನು ಇನ್ನೂ ನೀಡಿಲ್ಲ ಎಂದು ಫ್ರಾಂಚೈಸಿಯು ಸೋಮವಾರ ತಿಳಿಸಿದೆ.

ಆದರೆ ಏಪ್ರಿಲ್ 1ರಂದು ತಂಡದ ಮೊದಲ ಪಂದ್ಯದ (ಲಖನೌ ಸೂಪರ್ ಜೈಂಟ್ಸ್ ವಿರುದ್ಧ) ವೇಳೆ ಸ್ಟಾರ್ಕ್ ಅವರು ಲಭ್ಯರಾಗುವ ವಿಶ್ವಾಸವನ್ನು ತಂಡ ವ್ಯಕ್ತಪಡಿಸಿದೆ.

ಸೋಮವಾರ ನಡೆದ ಮಾಧ್ಯಮ ಸಂವಾದದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್, ಕ್ರಿಕೆಟ್ ನಿರ್ದೇಶಕ ವೇಣುಗೋಪಾಲ್ ರಾವ್ ಮತ್ತು ಮುಖ್ಯ ಕೋಚ್ ಹೆಮಾಂಗ್ ಬದಾನಿ ಅವರಿಗೆ ಸ್ಟಾರ್ಕ್ ಲಭ್ಯತೆ ಕುರಿತಂತೆ ಹಲವು ಪ್ರಶ್ನೆಗಳೂ ಎದುರಾದವು. 2025ರ ಐಪಿಎಲ್ನಲ್ಲಿ ಅವರು 11 ಪಂದ್ಯಗಳಿಂದ 14 ವಿಕೆಟ್ ಗಳಿಸಿದ್ದರು.

‘ಕ್ರಿಕೆಟ್ ಆಸ್ಟ್ರೇಲಿಯಾದ ನಿರಾಕ್ಷೇಪಣಾ ಪತ್ರಕ್ಕೆ ಕಾಯುತ್ತಿದ್ದೇವೆ. ಅದನ್ನು ಪಡೆದ ತಕ್ಷಣ ಅವರು ತಂಡವನ್ನು ಸೇರಿಕೊಳ್ಳುವ ದಿನಾಂಕ ತಿಳಿಯಲಿದೆ’ ಎಂದು ಬದಾನಿ ಹೇಳಿದರು.

‘ನಾವು ಕ್ರಿಕೆಟ್ ಆಸ್ಟ್ರೇಲಿಯಾ ಜೊತೆ ಸಂಪರ್ಕದಲ್ಲಿದ್ದೇವೆ. ಅವರು ಬೌಲಿಂಗ್ ಮಾಡುತ್ತಿದ್ದಾರೆ. ಆದರೆ ಕ್ರಿಕೆಟ್ ಆಸ್ಟ್ರೇಲಿಯಾವು ಅವರು (ಸ್ಟಾರ್ಕ್) ಆಡಲು ಅರ್ಹರಾಗಿದ್ದಾರೆ ಎಂದು ಪತ್ರ ನೀಡುವವರೆಗೆ ನಾವೇನೂ ಮಾಡುವಂತಿಲ್ಲ’ ಎಂದು ಹೇಳಿದರು. ಎನ್ಒಸಿ ವಿಳಂಬಕ್ಕೆ ಫಿಟ್ನೆಸ್ ಕಾರಣವೇ ಅಥವಾ ಕಾರ್ಯಭಾರ ನಿರ್ವಹಣೆ ಕಾರಣವೇ ಎಂಬ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು.

ಅವರ ಬದಲು ಇನ್ನೊಬ್ಬ ಎಡಗೈ ವೇಗಿ ಟಿ.ನಟರಾಜನ್ ಅಡುತ್ತಾರೆಯೇ ಎಂಬ ಪ್ರಶ್ನೆಗೆ, ಇದು ತಂಡದ ಸಂಯೋಜನೆ ಮೇಲೆ ಅವಲಂಬಿತವಾಗಿದೆ. ನಟರಾಜನ್ ಅವರು ಈಗ ಫಿಟ್ ಆಗಿದ್ದಾರೆ ಎಂದರು. ಭುಜದ ನೋವಿನಿಂದಾಗಿ ಅವರು ಕಳೆದ ಐಪಿಎಲ್ನಲ್ಲಿ ಎರಡು ಪಂದ್ಯಗಳನ್ನಷ್ಟೇ ಆಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.