ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಯಗೊಂಡಿದ್ದನ್ನು ಸಾಬೀತುಪಡಿಸಲು ವಿಡಿಯೊ ಸಾಕ್ಷ್ಯ ಒದಗಿಸಿದ ಮಿಚೆಲ್‌ ಸ್ಟಾರ್ಕ್

Last Updated 21 ಜೂನ್ 2020, 8:09 IST
ಅಕ್ಷರ ಗಾತ್ರ

ಸಿಡ್ನಿ: ಇಂಡಿಯನ್‌ ಪ್ರೀಮಿಯರ್‌ ಲೀಗ್ 11ನೇ ಆವೃತ್ತಿಯ (2008) ಆರಂಭಕ್ಕೂ ಮುನ್ನ ತಾವು ಗಾಯಗೊಂಡಿದ್ದು ನಿಜ ಎಂಬುದನ್ನು ಸಾಬೀತುಪಡಿಸಲು ಮುಂದಾಗಿರುವ ಆಸ್ಟ್ರೇಲಿಯಾದ ಕ್ರಿಕೆಟಿಗ ಮಿಚೆಲ್‌ ಸ್ಟಾರ್ಕ್‌, ಇದಕ್ಕಾಗಿ ವಿಮಾ ಸಂಸ್ಥೆಗೆ ವಿಡಿಯೊ ಸಾಕ್ಷ್ಯ ಒದಗಿಸಿದ್ದಾರೆ.

ಆ ವರ್ಷದ ಐಪಿಎಲ್‌ ಟೂರ್ನಿಯ ಆಟಗಾರರ ಹರಾಜಿನಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡವು ₹ 9.40 ಕೋಟಿ ನೀಡಿ ಸ್ಟಾರ್ಕ್‌ ಅವರನ್ನು ತನ್ನತ್ತ ಸೆಳೆದುಕೊಂಡಿತ್ತು. ಗಾಯದ ಕಾರಣ ಸ್ಟಾರ್ಕ್‌ ಲೀಗ್‌ನಿಂದ ಹಿಂದೆ ಸರಿದಿದ್ದರು. ಹೀಗಾಗಿ ಅವರಿಗೆ ಫ್ರಾಂಚೈಸ್‌ ಆ ಮೊತ್ತವನ್ನು ನೀಡಿರಲಿಲ್ಲ.

ಐಪಿಎಲ್‌ ಆಡುವುದು ತಪ್ಪಿದರೆ ಪರಿಹಾರ ನೀಡುವಂತಹ ಪಾಲಿಸಿಯನ್ನು ಅವರು ವಿಮಾ ಸಂಸ್ಥೆಯಿಂದ ಖರೀದಿಸಿದ್ದರು. 2018ರ ಫೆಬ್ರುವರಿ 27ರಿಂದ ಮಾರ್ಚ್‌ 31ರ ಅವಧಿಗೆ ₹65.54 ಲಕ್ಷ ಕಂತು ಪಾವತಿಸಿ ವಿಮೆ ಪಡೆದಿದ್ದರು ಎಂದೂ ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿದ್ದವು.

ಹೋದ ವರ್ಷದ ಏಪ್ರಿಲ್‌ನಲ್ಲಿ ವಿಮಾ ಸಂಸ್ಥೆಯ ವಿರುದ್ಧ ದಾವೆ ಹೂಡಿದ್ದ ಸ್ಟಾರ್ಕ್‌ ₹10 ಕೋಟಿ ಪರಿಹಾರ ಕೇಳಿದ್ದರು. ಪರಸ್ಪರ ಮಾತುಕತೆಯ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಎರಡು ಕಡೆಯವರೂ ವಿಫಲರಾಗಿದ್ದರು.

2018ರಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಟೆಸ್ಟ್‌ ಪಂದ್ಯದ ವೇಳೆ ಸ್ಟಾರ್ಕ್‌ ಅವರ ಬಲಗಾಲಿನ ಮೀನಖಂಡದಲ್ಲಿ ನೋವು ಕಾಣಿಸಿಕೊಂಡಿತ್ತು. ಇದಕ್ಕೆ ಸಂಬಂಧಿಸಿದ ಎರಡು ವಿಡಿಯೊ ತುಣುಕುಗಳನ್ನು ಸ್ಟಾರ್ಕ್‌ ಅವರ ಮ್ಯಾನೇಜರ್‌ ಆ್ಯಂಡ್ರ್ಯೂ ಫ್ರೇಸರ್‌ ಅವರು ವಿಮಾ ಸಂಸ್ಥೆಗೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT