ಬುಧವಾರ, ನವೆಂಬರ್ 13, 2019
18 °C
2021ರ ವರೆಗೆ ಏಕದಿನ ಕ್ರಿಕೆಟ್‌ನಲ್ಲಿ ಮುಂದುವರಿಕೆ

ಟ್ವೆಂಟಿ–20ಗೆ ಮಿಥಾಲಿ ವಿದಾಯ

Published:
Updated:
Prajavani

ನವದೆಹಲಿ (ಪಿಟಿಐ): ಅನುಭವಿ ಆಟ ಗಾರ್ತಿ ಮಿಥಾಲಿ ರಾಜ್ ಅವರು ಅಂತರರಾಷ್ಟ್ರೀಯ ಟ್ವೆಂಟಿ–20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

ಇದೇ 24ರಿಂದ ದಕ್ಷಿಣ ಆಫ್ರಿಕಾ ಎದುರು ಭಾರತದಲ್ಲಿ ನಡೆಯಲಿರುವ ಸರಣಿಯಲ್ಲಿ ತಾವು ಆಡುವುದಾಗಿ ಮಿಥಾಲಿ ಹೋದ ವಾರ ತಿಳಿಸಿದ್ದರು. ಆದರೆ ಇದೀಗ ಅವರ ನಿವೃತ್ತಿ ಘೋಷಣೆಯು ಅಚ್ಚರಿ ಮೂಡಿಸಿದೆ.

‘ಏಕದಿನ ಕ್ರಿಕೆಟ್‌ನಲ್ಲಿ ಮುಂದುವ ರಿಯುವರು. 2021ರ  ಏಕದಿನ ಕ್ರಿಕೆಟ್ ವಿಶ್ವಕಪ್‌ ಟೂರ್ನಿಯಲ್ಲಿ ಆಡುತ್ತೇನೆ. ನ್ಯೂಜಿಲೆಂಡ್‌ನಲ್ಲಿ ಟೂರ್ನಿಯ ನಡೆಯಲಿದೆ’ ಎಂದು 36 ವರ್ಷದ ಮಿಥಾಲಿ ತಿಳಿಸಿದ್ದಾರೆ. ‌

‘2006ರಿಂದ ಇಲ್ಲಿಯವರೆಗೂ ಭಾರತ ಟ್ವೆಂಟಿ–20 ತಂಡವನ್ನು ಪ್ರತಿ ನಿಧಿಸಿದ್ದೇನೆ. ಇದೀಗ ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಲು ಸಜ್ಜಾಗುತ್ತೇನೆ. ಅದಕ್ಕಾಗಿ ನನ್ನ ಸಂಪೂರ್ಣ ಸಾಮರ್ಥ್ಯ ಮತ್ತು ಸಮ ಯವನ್ನು ವಿನಿಯೋಗಿಸುತ್ತೇನೆ’ ಎಂದು ಮಿಥಾಲಿ ಬಿಸಿಸಿಐಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಮಹಿಳೆಯರ ಚುಟುಕು ಮಾದರಿ ಕ್ರಿಕೆಟ್‌ನಲ್ಲಿ ಎರಡು ಸಾವಿರಕ್ಕೂ ಹೆಚ್ಚು ರನ್ ಗಳಿಸಿರುವ ಸಾಧನೆ ಮಾಡಿರುವ ಭಾರತದ ಮೊದಲ ಕ್ರಿಕೆಟ್ ಆಟಗಾರ್ತಿಯಾ ಗಿದ್ದಾರೆ. 32 ಟಿ20 ಪಂದ್ಯಗಳಲ್ಲಿ ಅವರು ತಂಡದ ನಾಯಕತ್ವ ವಹಿಸಿದ್ದರು.  2012, 2014 ಮತ್ತು 2016ರ ವಿಶ್ವ ಟ್ವೆಂಟಿ–20 ಟೂರ್ನಿಗಳಲ್ಲಿ ಅವರು ತಂಡದ ನಾಯಕಿಯಾಗಿದ್ದರು.

’ನನ್ನ ದೇಶಕ್ಕೆ ವಿಶ್ವಕಪ್ ಗೆದ್ದು ಕೊಡುವ ಕನಸು ಕೈಗೂಡಿಲ್ಲ. ಆದರೆ ಏಕದಿನ ಕ್ರಿಕೆಟ್‌ನಲ್ಲಿ ಅದನ್ನು ಸಾಧಿಸುವ ಪ್ರಯತ್ನ ನನ್ನದು. ಇದೇ ತಿಂಗಳು ದಕ್ಷಿಣ ಅಫ್ರಿಕಾ ಎದುರಿನ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡಕ್ಕೆ ಒಳ್ಳೆಯದಾಗಲಿ’ ಎಂದು ಮಿಥಾಲಿ ಶುಭ ಕೋರಿದ್ದಾರೆ.

ಹೋದ ವರ್ಷ ವಿಶ್ವ ಟ್ವೆಂಟಿ–20 ಟೂರ್ನಿಯಲ್ಲಿ  ಇಂಗ್ಲೆಂಡ್ ಎದುರಿನ ಸೆಮಿಫೈನಲ್‌ ಪಂದ್ಯದಲ್ಲಿ ಅವರನ್ನು  ಆಡುವ ಹನ್ನೊಂದರ ಬಳಗದಿಂದ ಕೈಬಿಡಲಾಗಿತ್ತು. ಆಗ ತಂಡದ ಕೋಚ್ ಆಗಿದ್ದ ರಮೇಶ್ ಪೊವಾರ್ ಮತ್ತು ಮಿಥಾಲಿ ನಡುವೆ ವಾಗ್ವಾದ ನಡೆದಿತ್ತು . ಅದು ವಿವಾದವಾಗಿತ್ತು. ಪೊವಾರ್ ಅವರನ್ನು ಕೋಚ್ ಹುದ್ದೆಯಿಂದ ಕೈಬಿಡಲಾಗಿತ್ತು. ನಂತರದ ಬೆಳವಣಿಗೆಯಲ್ಲಿ ಡಬ್ಲ್ಯು. ವಿ. ರಾಮನ್ ನೂತನ ಕೋಚ್ ಆಗಿ ನೇಮಕವಾಗಿದ್ದರು.

‘ಮಿಥಾಲಿ ಈ ದಿಢೀರ್ ನಿರ್ಧಾರವನ್ನು ಎಕೆ ಕೈಗೊಂಡರು ಎಂದು ತಿಳಿಯುತ್ತಿಲ್ಲ. ಮುಂದಿನ ವರ್ಷ ಟ್ವೆಂಟಿ–20 ವಿಶ್ವ ಕಪ್ ಟೂರ್ನಿ ನಡೆಯಲಿದೆ. ಅವರು ಮಹಾನ್ ಆಟಗಾರ್ತಿ. ಅವರು ಈಗ ಯುವ ಆಟಗಾರ್ತಿಯರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ’ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ. ಮಿಥಾಲಿ, 203 ಏಕದಿನ ಪಂದ್ಯ ಗಳನ್ನು ಆಡಿದ್ದಾರೆ. ಒಟ್ಟು 6720 ರನ್‌ಗಳನ್ನು ಪೇರಿಸಿದ್ದಾರೆ. ಅದರಲ್ಲಿ ಏಳು ಶತಕಗಳು ಇವೆ. 10 ಟೆಸ್ಟ್‌ ಪಂದ್ಯಗಳನ್ನೂ ಆಡಿರುವ ಅವರು 663 ರನ್‌ ಗಳಿಸಿದ್ದಾರೆ.

ಪ್ರತಿಕ್ರಿಯಿಸಿ (+)