ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ‍್ಯಾಂಕಿಂಗ್‌: ಮೂರನೇ ಸ್ಥಾನದಲ್ಲಿ ಮಿಥಾಲಿ ರಾಜ್

Last Updated 23 ನವೆಂಬರ್ 2021, 14:41 IST
ಅಕ್ಷರ ಗಾತ್ರ

ದುಬೈ: ಭಾರತ ಕ್ರಿಕೆಟ್‌ ತಂಡದ ನಾಯಕಿ ಮಿಥಾಲಿ ರಾಜ್ ಅವರು ಏಕದಿನ ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಅನುಭವಿ ಜೂಲನ್ ಗೋಸ್ವಾಮಿ ಅವರು ಮಂಗಳವಾರ ಬಿಡುಗಡೆಯಾದ ರ‍್ಯಾಂಕಿಂಗ್‌ನಲ್ಲಿ ಬೌಲರ್‌ಗಳ ವಿಭಾಗದಲ್ಲಿ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

ಮಿಥಾಲಿ ಅವರ ಬಳಿ ಸದ್ಯ 738 ರೇಟಿಂಗ್‌ ಪಾಯಿಂಟ್‌ಗಳಿವೆ. ದಕ್ಷಿಣ ಆಫ್ರಿಕಾದ ಲಿಜೆಲಿ ಲೀ (761) ಮತ್ತು ಆಸ್ಟ್ರೇಲಿಯಾದ ಅಲಿಸಾ ಹೀಲಿ (750) ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನಗಳಲ್ಲಿದ್ದಾರೆ.

ಭಾರತದ ಇನ್ನೋರ್ವ ಆಟಗಾರ್ತಿ ಸ್ಮೃತಿ ಮಂದಾನ 710 ಪಾಯಿಂಟ್ಸ್‌ನೊಂದಿಗೆ ಆರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಬೌಲರ್‌ ಜೂಲನ್ ಗೋಸ್ವಾಮಿ ಅವರ ಬಳಿ 727 ಪಾಯಿಂಟ್ಸ್‌ಗಳಿವೆ. ಬೌಲರ್‌ಗಳ ವಿಭಾಗದಲ್ಲಿ ಆಸ್ಟ್ರೇಲಿಯಾದ ಜೆಸ್‌ ಜೊನಾಸನ್‌ (760 ಪಾಯಿಂಟ್ಸ್) ಅಗ್ರಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT