ಸೋಮವಾರ, ಅಕ್ಟೋಬರ್ 25, 2021
24 °C

19 ವರ್ಷದೊಳಗಿನವರ ಕ್ರಿಕೆಟ್ ತಂಡದ ಕೋಚ್‌ ಮುರ್ತಜಾ ಲೋಧಗರ್‌ ಹೃದಯಾಘಾತದಿಂದ ನಿಧನ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮಿಜೋರಾಂ 19 ವರ್ಷದೊಳಗಿನವರ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಹಾಗೂ ಬಂಗಾಳ ತಂಡದ ಮಾಜಿ ಸ್ಪಿನ್ನರ್‌ ಮುರ್ತಜಾ ಲೋಧಗರ್‌ (45) ಶುಕ್ರವಾರ ರಾತ್ರಿ ಹೃದಯಾಘಾತದಿಂದ ವಿಶಾಖಪಟ್ಟಣದಲ್ಲಿ ನಿಧನರಾದರು. ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಅಭಿಷೇಕ್ ದಾಲ್ಮಿಯಾ ಈ ವಿಷಯ ತಿಳಿಸಿದ್ದಾರೆ.

ವಿನೂ ಮಂಕಡ್‌ ಟ್ರೋಫಿ ಟೂರ್ನಿಗೆ (19 ವರ್ಷದೊಳಗಿನವರ ರಾಷ್ಟ್ರೀಯ ಏಕದಿನ ಟೂರ್ನಿ) ಸಜ್ಜಾಗಲು ಮಿಜೋರಾಂ ತಂಡದೊಂದಿಗೆ ಅವರು ಬಂದರು ನಗರಿ ವಿಶಾಖಪಟ್ಟಣಕ್ಕೆ ಬಂದಿದ್ದರು.

‘ರಾತ್ರಿಯ ಭೋಜನದ ಬಳಿಕ ವಾಯುವಿಹಾರಕ್ಕೆ ತೆರಳುತ್ತಿದ್ದಾಗ ಅವರಿಗೆ ಎದೆನೋವು ಕಾಣಿಸಿಕೊಂಡು ಕುಸಿದುಬಿದ್ದರು. ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ತಡರಾತ್ರಿ ಅವರು ಕೊನೆಯುಸಿರೆಳೆದರು‘ ಎಂದು ದಾಲ್ಮಿಯಾ ಹೇಳಿದ್ದಾರೆ.

ಬಂಗಾಳ ಪರ ಒಂಬತ್ತು ರಣಜಿ ಟ್ರೋಫಿ ಟೂರ್ನಿಯ ಪಂದ್ಯಗಳನ್ನು ಆಡಿದ್ದ ಅವರು 34 ವಿಕೆಟ್‌ ಗಳಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು