ಮೊಯಿನ್‌ ಅಲಿಗೆ ‘ಒಸಾಮ’ ಪ್ರಯೋಗ?

7

ಮೊಯಿನ್‌ ಅಲಿಗೆ ‘ಒಸಾಮ’ ಪ್ರಯೋಗ?

Published:
Updated:
Deccan Herald

ಸಿಡ್ನಿ: 2015ರ ಆ್ಯಷಸ್ ಟೆಸ್ಟ್ ಸರಣಿಯ ಸಂದರ್ಭದಲ್ಲಿ ತಮ್ಮನ್ನು ಆಸ್ಟ್ರೇಲಿಯಾ ತಂಡದ ಆಟಗಾರನೊಬ್ಬ ಒಸಾಮ ಎಂದು ಕರೆದಿರುವುದಾಗಿ ಇಂಗ್ಲೆಂಡ್‌ ತಂಡದ ಆಲ್‌ರೌಂಡರ್ ಮೊಯಿನ್ ಅಲಿ ದೂರಿದ್ದಾರೆ.

ಜೀವನಚರಿತ್ರೆಯಲ್ಲಿ ಅಲಿ ಈ ಆರೋಪ ಮಾಡಿದ್ದು ಭಯೋತ್ಪಾದಕ ಒಸಾಮ ಬಿನ್ ಲಾಡೆನ್ ಜೊತೆಗೆ ತಮ್ಮನ್ನು ಹೋಲಿಸಲಾಗಿದೆ ಎಂದಿದ್ದಾರೆ. ಈ ಕುರಿತು ತನಿಖೆ ಕೈಗೊಳ್ಳಲು ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧರಿಸಿದೆ.

‘ಒಸಾಮ ಎಂದು ಕರೆದಾಗ ನಾನು ಕೆಂಡಾಮಂಡಲವಾಗಿದ್ದೆ. ಕ್ರಿಕೆಟ್‌ ಅಂಗಣದಲ್ಲಿ ನಾನೆಂದಿಗೂ ಅಷ್ಟೊಂದು ಕೋಪ ಮಾಡಿಕೊಂಡಿಲ್ಲ. ವಿಷಯವನ್ನು ನಾನು ನಮ್ಮ ಕೋಚ್ ಗಮನಕ್ಕೆ ತಂದಿದ್ದೆ. ಅವರು ಆಸ್ಟ್ರೇಲಿಯಾ ಕೋಚ್‌ ಡೆರೆನ್ ಲೆಹ್‌ಮ್ಯಾನ್‌ ಜೊತೆ ಮಾತನಾಡಿದರು. ಆ ಆಟಗಾರನನ್ನು ಕರೆಸಿಕೊಂಡು ಲೆಹ್‌ಮ್ಯಾನ್‌ ವಿಚಾರಿಸಿದರು. ಆದರೆ ಆರೋಪವನ್ನು ಆಟಗಾರ ತಳ್ಳಿ ಹಾಕಿದರು’ ಎಂದು ಅಲಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !