ಡೇರ್‌ ಡೆವಿಲ್ಸ್‌ಗೆ ಕೈಫ್‌ ಸಹಾಯಕ ಕೋಚ್‌

7

ಡೇರ್‌ ಡೆವಿಲ್ಸ್‌ಗೆ ಕೈಫ್‌ ಸಹಾಯಕ ಕೋಚ್‌

Published:
Updated:
Deccan Herald

ನವದೆಹಲಿ: ಭಾರತದ ಹಿರಿಯ ಕ್ರಿಕೆಟಿಗ ಮೊಹಮ್ಮದ್‌ ಕೈಫ್‌ ಅವರನ್ನು ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ಸಹಾಯಕ ಕೋಚ್‌ ಆಗಿ ನೇಮಕ ಮಾಡಲಾಗಿದೆ ಎಂದು ತಂಡ ಶುಕ್ರವಾರ ತಿಳಿಸಿದೆ.  

‘ಡೇರ್‌ ಡೆವಿಲ್ಸ್ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆ ಎನಿಸುತ್ತಿದೆ. ಸಹಾಯ ಮಾಡುವ ಮನೋಭಾವವಿರುವ ಯುವ ಆಟಗಾರರು ತಂಡದಲ್ಲಿದ್ದಾರೆ. ಐಪಿಎಲ್‌ನಲ್ಲಿ ತಂಡವನ್ನು ಎಲ್ಲರೂ ಗುರುತಿಸುವಂತೆ ಮಾಡುತ್ತೇನೆ’ ಎಂದು ಕೈಫ್‌ ಭರವಸೆ ನೀಡಿದ್ದಾರೆ. 

ಕೈಫ್‌, ಈ ಮೊದಲು ಚತ್ತೀಸ್‌ಗಡ ರಣಜಿ ತಂಡದದಲ್ಲಿ ಕಾರ್ಯ ನಿರ್ವಹಿಸಿದ್ದರು. 

‘ಕೈಫ್‌ ಅವರ ಅನುಭವವು ನಮ್ಮ ತಂಡ ಈ ಬಾರಿಯ ಟೂರ್ನಿಯಲ್ಲಿ ಉತ್ತಮ ಸಾಧನೆ ಮಾಡಲು ನೆರವಾಗಲಿದೆ’ ಎಂದು ಡೆಲ್ಲಿ ಡೇರ್‌ ಡೆವಿಲ್ಸ್‌ನ ನಿರ್ದೇಶಕ ಮುಸ್ತಾಫ ಗೌಸ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !