ಬೆಂಗಳೂರು: ಟಿ20 ವಿಶ್ವಕಪ್ನ ಲೀಗ್ ಹಂತದಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದು ಸೂಪರ್–8 ತಲುಪಿದ್ದ ಭಾರತ ತಂಡವು ಸೆಮಿಫೈನಲ್ ತಲುಪುವುದಿಲ್ಲ ಎಂದು ಹೇಳಿಕೆ ನೀಡಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಮೊಹಮ್ಮದ್ ಅಮೀರ್, ಮತ್ತೊಮ್ಮೆ ಭಾರತ ಫೈನಲ್ ಹೋಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ ಮೊಹಮ್ಮದ್ ಅಮೀರ್ ಅವರು ಇಂಗ್ಲೆಂಡ್ ತಂಡಕ್ಕೆ ಬೆಂಬಲ ನೀಡಿದ್ದಾರೆ. ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯವು ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿದೆ. ಈ ಮೈದಾನ ಬ್ಯಾಟರ್ಗಳಿಗೆ ಅನುಕೂಲ ನೀಡಲಿದ್ದು, ಭಾರತದ ಬ್ಯಾಟರ್ಗಳು ಲಯದಲ್ಲಿ ಇಲ್ಲದಿರುವುದರಿಂದ ಭಾರತ ಫೈನಲ್ಗೆ ತಲುಪಲ್ಲ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಅಭಿಷೇಕ್ ಶರ್ಮಾ ಅವರನ್ನು ‘ಬೇಕಾಬಿಟ್ಟಿಯಾಗಿ ಆಡುವ ಆಟಗಾರ’ ಎಂದು ಕಾಲೆಳೆದಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯದ ಕುರಿತು ಹಾರ್ನಾ ಮನಾ ಹೈ ಕಾರ್ಯಕ್ರಮದಲ್ಲಿ ಮಾತನಾಡಿದ ಅಮೀರ್, 'ವಾಂಖೆಡ್ ಮೈದಾನ ಬ್ಯಾಟರ್ಗಳಿಗೆ ನೆರವು ನೀಡಲಿದೆ. ಇಂಗ್ಲೆಂಡ್ ಎರಡನೆಯದಾಗಿ ಬ್ಯಾಟಿಂಗ್ ಮಾಡಿದರೆ ಭಾರತವನ್ನು ಸೋಲಿಸುತ್ತಾರೆ’ ಎಂದಿದ್ದಾರೆ.

ಭಾರತದ ಬ್ಯಾಟರ್ಗಳ ಕುರಿತು ಮಾತನಾಡಿದ ಅಮೀರ್, ‘ಪ್ರಸ್ತುತ ಭಾರತದ ಬ್ಯಾಟರ್ಗಳು ಉತ್ತಮವಾಗಿ ಆಡುತ್ತಿಲ್ಲ. ಯಾರೋ ಒಂದಿಬ್ಬರು ಮಾತ್ರ ಪ್ರದರ್ಶನ ತೋರುತ್ತಿದ್ದಾರೆ. ಆದರೆ, ಸಂಪೂರ್ಣ ತಂಡವಾಗಿ ಗಮನಿಸಿದರೆ, ಬ್ಯಾಟರ್ಗಳು ಅಸ್ಥಿರ ಪ್ರದರ್ಶನ ತೋರುತ್ತಿದ್ದಾರೆ’ ಎಂದು ಹೇಳಿದ್ದಾರೆ.

‘ಇಶಾನ್ ಕಿಶನ್ ನಮ್ಮ ತಂಡದ ವಿರುದ್ಧ ಚೆನ್ನಾಗಿ ಆಡಿದರು. ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ ಸೂಪರ್–8ರವರೆಗೂ ತಂಡಕ್ಕಾಗಿ ಏನನ್ನೂ ಮಾಡಿಲ್ಲ. ಸಂಜು ಸ್ಯಾಮ್ಸನ್ ಹಾಗೂ ಬುಮ್ರಾ ಉತ್ತಮ ಲಯದಲ್ಲಿದ್ದಾರೆ’ ಎಂದಿದ್ದಾರೆ.

‘ಹಾಗಾಗಿ, ಈ ತಂಡ ಮೇಲುಗೈ ಸಾಧಿಸಲಿದೆ ಎಂದು ನನಗೆ ಅನಿಸುತ್ತಿಲ್ಲ. ಇಂಗ್ಲೆಂಡ್ ಸೆಮಿಫೈನಲ್ ಗೆಲ್ಲುವ ನೆಚ್ಚಿನ ತಂಡವಾಗಿದೆ’ ಎಂದು ಅಮೀರ್ ಹೇಳಿದ್ದಾರೆ. ಈ ಹಿಂದೆ ಭಾರತ ಸೆಮಿಫೈನಲ್ ತಲುಪಲ್ಲ ಎಂದಿದ್ದ ಅವರು ಟ್ರೋಲ್ಗೆ ಒಳಗಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.