ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜಿಲೆಂಡ್ ಎದುರು ಬಾಂಗ್ಲಾಗೆ ಐತಿಹಾಸಿಕ ಮುನ್ನಡೆ ತಂದುಕೊಟ್ಟ ಹಕ್‌, ದಾಸ್‌

Last Updated 3 ಜನವರಿ 2022, 14:24 IST
ಅಕ್ಷರ ಗಾತ್ರ

ಮೌಂಟ್ ಮಾಂಗನೂಯಿ: ಮೋಮಿನುಲ್ ಹಕ್ (88; 244 ಎಸೆತ, 12 ಬೌಂಡರಿ) ಮತ್ತು ಲಿಟನ್ ದಾಸ್ (86; 177 ಎ, 10 ಬೌಂ) ನ್ಯೂಜಿಲೆಂಡ್ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದರು. ಅವರಅಮೋಘ ಆಟದ ಬಲದಿಂದ ಬಾಂಗ್ಲಾದೇಶ ತಂಡ ಟೆಸ್ಟ್ ಪಂದ್ಯದಲ್ಲಿ ಐತಿಹಾಸಿಕ ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿತು.

ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ ಮೂರನೇ ದಿನದಾಟದ ಅಂತ್ಯಕ್ಕೆ ಬಾಂಗ್ಲಾದೇಶ 6 ವಿಕೆಟ್ ಕಳೆದುಕೊಂಡು 401 ರನ್ ಗಳಿಸಿದ್ದು 73 ರನ್‌ಗಳ ಮುನ್ನಡೆ ಗಳಿಸಿದೆ. ನಾಟಕೀಯ ಕೊನೆಯ ಅವಧಿಯಲ್ಲಿ ಪ್ರಬಲ ದಾಳಿ ನಡೆಸಿದ ವೇಗಿ ಟ್ರೆಂಟ್ ಬೌಲ್ಟ್‌ ಪ್ರವಾಸಿ ತಂಡದ ಓಟಕ್ಕೆ ತಡೆಯೊಡ್ಡಿದರು.

4 ವಿಕೆಟ್‌ಗಳಿಗೆ 361 ರನ್‌ ಗಳಿಸಿ ಭರ್ಜರಿ ಮುನ್ನಡೆಯತ್ತ ಹೆಜ್ಜೆ ಹಾಕಿದ್ದ ಬಾಂಗ್ಲಾದೇಶದ ಮೋಮಿನುಲ್ ಮತ್ತು ಲಿಟನ್ ದಾಸ್ ವಿಕೆಟ್ ಉರುಳಿಸುವ ಮೂಲಕ 158 ರನ್‌ಗಳ ಜೊತೆಯಾಟಕ್ಕೆ ಬೌಲ್ಟ್‌ ತೆರೆ ಎಳೆದರು.

ಏಷ್ಯಾದ ಹೊರಗೆ ಮೊದಲ ಇನಿಂಗ್ಸ್‌ನಲ್ಲಿ ಗುರಿ ಬೆನ್ನತ್ತಿ ಬಾಂಗ್ಲಾದೇಶ ಮುನ್ನಡೆ ಸಾಧಿಸಿರುವುದು ಇದೇ ಮೊದಲು. ನಾಲ್ಕು ವರ್ಷಗಳ ಹಿಂದೆ ವೆಲಿಂಗ್ಟನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿ ಬಾಂಗ್ಲಾದೇಶ ಮುನ್ನಡೆ ಗಳಿಸಿತ್ತು.

ಸಂಕ್ಷಿಪ್ತ ಸ್ಕೋರು
ಮೊದಲ ಇನಿಂಗ್ಸ್‌: ನ್ಯೂಜಿಲೆಂಡ್‌:
328
ಬಾಂಗ್ಲಾದೇಶ (ಭಾನುವಾರ 67 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 175)156 ಓವರ್‌ಗಳಲ್ಲಿ 6ಕ್ಕೆ 401:ಶಾಡ್ಮನ್ ಇಸ್ಲಾಂ 22, ಮೊಹಮ್ಮದುಲ್ ಹಸನ್ 78, ನಜ್ಮುಲ್ ಹೊಸೇನ್ 64, ಮೋಮಿನುಲ್ ಹಕ್‌ 88, ಮುಷ್ಫಿಕುರ್ ರಹೀಮ್ 12, ಲಿಟನ್ ದಾಸ್ 86, ಯಾಸಿರ್ ಅಲಿ ಬ್ಯಾಟಿಂಗ್‌ 11, ಮೆಹದಿ ಹಸನ್‌ 20; ಟ್ರೆಂಟ್ ಬೌಲ್ಟ್‌ 61ಕ್ಕೆ3, ವ್ಯಾಗ್ನರ್ 98ಕ್ಕೆ3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT