ಶುಕ್ರವಾರ, ಜುಲೈ 1, 2022
25 °C

ಐಸಿಸಿ ಏಕದಿನ ವಿಶ್ವಕಪ್‌ ಕ್ರಿಕೆಟ್‌: ಲಕ್ಷ ಮಹಿಳೆಯರಿಂದ ಟಿಕೆಟ್ ಖರೀದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್‌: ಈ ಬಾರಿಯ ವಿಶ್ವಕಪ್‌ ಟೂರ್ನಿಯ ಪಂದ್ಯಗಳನ್ನು ವೀಕ್ಷಿಸಲು ಮಹಿಳೆಯರು ಭಾರೀ ಉತ್ಸಾಹ ತೋರಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಮಹಿಳೆಯರು ಟಿಕೆಟ್‌ ಖರೀದಿಸಿರುವುದಾಗಿ ಟೂರ್ನಿಯ ನಿರ್ದೇಶಕ ಸ್ಟೀವ್‌ ಎಲ್‌ವರ್ಥಿ ಸೋಮವಾರ ತಿಳಿಸಿದ್ದಾರೆ. ಎರಡು ಲಕ್ಷಕ್ಕೂ ಹೆಚ್ಚು ಮಂದಿ ಮೊದಲ ಬಾರಿ ಪಂದ್ಯಗಳನ್ನು ವೀಕ್ಷಿಸಲು ಬರಲಿದ್ದಾರೆ ಎಂದೂ ಅವರು ಹೇಳಿದ್ದಾರೆ.

‘ಇದು ನಾವು ಆಯೋಜಿಸುತ್ತಿರುವ ಅತಿದೊಡ್ಡ ಕ್ರಿಕೆಟ್‌ ಹಬ್ಬವಾಗಲಿದೆ. ಇದುವರೆಗೆ 1,10,000ಕ್ಕಿಂತ ಅಧಿಕ ಮಹಿಳೆಯರು ಟಿಕೆಟ್‌ ಖರೀದಿಸಿದ್ದು, ಅದರಲ್ಲಿ ಸುಮಾರು ಒಂದು ಲಕ್ಷ ಮಂದಿ 16ರ ಒಳಗಿನ ವಯಸ್ಸಿನವರು’ ಎಂದು ಎಲ್‌ವರ್ಥಿ ತಿಳಿಸಿದರು.

ಐಸಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಯಿಂದ ನಿರ್ಗಮಿಸಲಿರುವ ಡೇವ್‌ ರಿಚರ್ಡ್ಸನ್‌,  ಟೂರ್ನಿಯ ರಕ್ಷಣೆ ಮತ್ತು ಭದ್ರತಾ ನಿರ್ದೇಶಕ ಜಿಲ್‌ ಮೆಕ್ರಾಕನ್‌ ಮತ್ತು ಎಲ್‌ವರ್ಥಿ 12ನೇ ಟೂರ್ನಿಯ ಆವೃತ್ತಿಯ ಯೋಜನೆಗಳನ್ನು ವಿವರಿಸಿದರು.

ವಿವಿಧ ವಿಭಾಗಗಳಲ್ಲಿ ಈ ಟೂರ್ನಿಯು ಹೊಸ ದಾಖಲೆಯನ್ನು ಸೃಷ್ಟಿಸಲಿದೆ. ಟಿಕೆಟ್‌ಗಾಗಿ ಮೂವತ್ತು ಲಕ್ಷಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಕೆಲವೊಂದು ಪಂದ್ಯಗಳಿಗೆ ನಾಲ್ಕು ಲಕ್ಷಕ್ಕೂ ಅಧಿಕ ಅರ್ಜಿಗಳು ಬಂದಿವೆ ಎಂದು ಐಸಿಸಿಯ ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು