ಅಹಮದಾಬಾದ್: ‘ಕೋಚ್ ಸಾಹೇಬರೇ ನಗುವಾಗ ನೀವು ಚೆಂದ ಕಾಣುತ್ತೀರಿ..’

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರಸಿಂಗ್ ಧೋನಿ ಅವರು ಪ್ರಸ್ತುತ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನು ಅಭಿನಂದಿಸಿದ್ದು ಹೀಗೆ. ಸುಮಾರು ಎರಡು ವರ್ಷಗಳ ನಂತರ ಧೋನಿ ಅವರು ಇನ್ಸ್ಟಾಗ್ರಾಮ್ನಲ್ಲಿ ಹಾಕಿರುವ ಪೋಸ್ಟ್ನಲ್ಲಿ ಗಂಭೀರ್ ಅವರ ಬಗ್ಗೆ ಬರೆದಿದ್ದಾರೆ. 2024ರಲ್ಲಿ ಕೊನೆಯ ಬಾರಿ ಧೋನಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಾಕಿದ್ದರು.

ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದ ಸಂದರ್ಭದಲ್ಲಿ ಧೋನಿ ಕೂಡ ಹಾಜರಿದ್ದರು. 2007ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಜಯಿಸಿದ್ದ ಭಾರತ ತಂಡದ ನಾಯಕರಾಗಿದ್ದರು.

‘ಅಹಮದಾಬಾದಿನಲ್ಲಿ ಇತಿಹಾಸ ರಚನೆಯಾಯಿತು. ತಂಡ, ನೆರವು ಸಿಬ್ಬಂದಿ ಹಾಗೂ ಅಭಿಮಾನಿಗಳಿಗೆ ಅಭಿನಂದನೆಗಳು. ತಾವೆಲ್ಲರೂ ಆಡುವುದನ್ನು ನೋಡುವ ಅವಕಾಶ ಸಿಕ್ಕಿದ್ದು ಸಂತಸ ತಂದಿದೆ’ ಎಂದು ಧೋನಿ ತಮ್ಮ ಪೋಸ್ಟ್ನಲ್ಲಿ ಬರೆದಿದ್ದಾರೆ.

‘ಕೋಚ್ ಸಾಹೇಬರೇ ನೀವು ನಗುತ್ತಿರುವಾಗ ಚೆಂದ ಕಾಣುತ್ತೀರಿ. ತೀಕ್ಷ್ಣತೆ ಮತ್ತು ನಗು ಎರಡೂ ಅಮೋಘ ಸಂಯೋಜನೆಯಾಗಿದೆ. ತುಂಬಾ ಒಳ್ಳೆಯ ಕಾರ್ಯ ಮಾಡಿದ್ದೀರಿ. ಹುಡುಗರೇ ಎಂಜಾಯ್ ಮಾಡಿ. ಬೂಮ್ರಾ ಬಗ್ಗೆ ನಾನು ಏನೂ ಬರೆಯದಿದ್ದರೇ ಒಳ್ಳೆಯದು. ಚಾಂಪಿಯನ್ ಬೌಲರ್ ಎಂದಷ್ಟೇ ಹೇಳಬಲ್ಲೆ..’ ಎಂದು ಉಲ್ಲೇಖಿಸಿದ್ದಾರೆ.

ಧೋನಿ ಅವರ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಗೌತಮ್ ಗಂಭೀರ್, ‘ನಿಮ್ಮನ್ನು ನೋಡುತ್ತಿರುವುದು ಸಂತಸ ತಂದಿದೆ. ನಗು ಅರಳಲು ಇನ್ನೇನು ಕಾರಣ ಬೇಕು’ ಎಂದಿದ್ದಾರೆ.

ಕ್ರೀಡಾಂಗಣದಲ್ಲಿ ಪಂದ್ಯವನ್ನು ವೀಕ್ಷಿಸಿದವರಲ್ಲಿ ತಂಡದ ಮಾಜಿ ನಾಯಕರಾದ ಕಪಿಲ್ ದೇವ್, ರೋಹಿತ್ ಶರ್ಮಾ ಅವರೂ ಇದ್ದರು.

ದ್ರಾವಿಡ್–ಲಕ್ಷ್ಮಣ್ಗೆ ಸಮರ್ಪಣೆ

ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಟಿ20 ವಿಶ್ವಕಪ್ ವಿಜಯವನ್ನು ನಿಕಟಪೂರ್ವ ಕೋಚ್ ರಾಹುಲ್ ದ್ರಾವಿಡ್ ಮತ್ತು ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರಿಗೆ ಸಮರ್ಪಣೆ ಮಾಡಿದ್ದಾರೆ.

‘ರಾಹುಲ್ ಭಾಯ್ (ದ್ರಾವಿಡ್) ಮತ್ತು ಲಕ್ಷ್ಮಣ್ ಅವರಿಬ್ಬರೂ ಭಾರತದ ಕ್ರಿಕೆಟ್ ಅನ್ನು ಉತ್ತಮವಾಗಿ ರೂಪುಗೊಳಿಸಿದ್ದಾರೆ ಮತ್ತು ನಿರ್ವಹಿಸುತ್ತಲೂ ಇದ್ದಾರೆ. ಆದ್ದರಿಂದ ಅವರಿಬ್ಬರಿಗೂ ಈ ಟ್ರೋಫಿಯನ್ನು ಸಮರ್ಪಿಸುತ್ತಿದ್ದೇನೆ’ ಎಂದು ಗಂಭೀರ್ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ದ್ರಾವಿಡ್ ಅವರಿಗೆ ನಾನು ಕೃತಜ್ಞನಾಗಿರುವೆ. ಅವರು ಕೋಚ್ ಆಗಿದ್ದ ಅವಧಿಯಲ್ಲಿ ಮಾಡಿರುವ ಕಾರ್ಯನಿರ್ವಹಣೆಯು ಅಮೋಘವಾಗಿದೆ. ಲಕ್ಷ್ಮಣ್ ಅವರು ಶ್ರೇಷ್ಠತಾ ಕೇಂದ್ರದ ಮೂಲಕ ನೀಡುತ್ತಿರುವ ಸೇವೆಯು ಮಹತ್ವದ್ದಾಗಿದೆ. ಭಾರತದ ಕ್ರಿಕೆಟ್ ಇಷ್ಟು ಉತ್ತುಂಗ ಸ್ಥಿತಿಯಲ್ಲಿ ಇರುವಂತೆ ನೋಡಿಕೊಂಡಿದ್ದಾರೆ’ ಎಂದು ಶ್ಲಾಘಿಸಿದರು.

‘ತಂಡದ ಆಟಗಾರರು ನನ್ನನ್ನು ಗೆಲ್ಲಿಸಿದರು. ನೀವು ಉತ್ತಮ ಕೋಚ್ ಅಥವಾ ನಾಯಕನೇ ಆಗಿರಬಹುದು. ಆದರೆ ತಂಡದಲ್ಲಿ ಒಳ್ಳೆಯ ಆಟಗಾರರಿದ್ದರೆ ಮಾತ್ರ ಯಶಸ್ಸು ಸಾಧ್ಯ ಎಂದು ಮೊದಲಿನಿಂದಲೂ ಹೇಳುತ್ತೇನೆ. ದ್ವಿಪಕ್ಷೀಯ ಸರಣಿಗಳಲ್ಲಿ ಆಡುವುದಕ್ಕೂ ಐಸಿಸಿ ಟೂರ್ನಿಗಳಲ್ಲಿ ನೀಡುವ ಸಾಮರ್ಥ್ಯ ಪ್ರದರ್ಶನಕ್ಕೂ ಬಹಳ ವ್ಯತ್ಯಾಸವಿದೆ’ ಎಂದರು.

ಸೂರ್ಯಕುಮಾರ್ಗೆ ಒಲಿಂಪಿಕ್ ಚಿನ್ನದ ಮೇಲೆ ಚಿತ್ತ

ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಈಗ ಒಲಿಂಪಿಕ್ ಕೂಟದ ಚಿನ್ನದ ಪದಕ ಗೆಲ್ಲುವತ್ತ ಚಿತ್ತ ಹರಿದಿದೆ. ‘2024ರ ನಂತರ ನಮ್ಮ ತಂಡವು ಬದಲಾಗಿದೆ. ಗೆಲುವುಗಳ ನಂತರವೂ ಹೇಗೆ ಆಟದಲ್ಲಿ ಮುಂದುವರಿಯಬೇಕು ಎಂಬುದನ್ನು ಅರಿತಿದ್ದೇವೆ. ಆದ್ದರಿಂದ 2025 ಮತ್ತು ಈ ವರ್ಷ ಐಸಿಸಿ ಟ್ರೋಫಿಗಳನ್ನು ಜಯಿಸಿದ್ದೇವೆ. 2027, 2028, 2029 ಮತ್ತು ಮುಂದೆಯೂ ಇದೇ ರೀತಿ ಸಾಗುತ್ತೇವೆ. ಮುಖ್ಯವಾಗಿ ಒಲಿಂಪಿಕ್ ಚಿನ್ನ (2028ರಲ್ಲಿ ಲಾಸ್ ಏಂಜಲೀಸ್) ಜಯಿಸುವುದು ನಮ್ಮ ಗುರಿಯಾಗಿದೆ. ಅದೇ ವರ್ಷ ಟಿ20 ವಿಶ್ವಕಪ್ ಟೂರ್ನಿಯೂ ಇದೆ’ ಎಂದು ಸೂರ್ಯ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.