ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಸದ್ಯ, ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದಾರೆ.

ಸದ್ಯ, ಗಾಯದ ಕಾರಣದಿಂದಾಗಿ 2026ರ ಐಪಿಎಲ್ನಲ್ಲಿ ಇದುವರೆಗೂ ಯಾವುದೇ ಪಂದ್ಯವನ್ನು ಆಡಿಲ್ಲ. ಆದರೆ, ಅವರ ಅಭಿಮಾನಿಗಳು ಧೋನಿ ಮೈದಾನಕ್ಕಿಳಿಯುವುದನ್ನು ನೋಡಲು ಕಾತರದಿಂದ ಕಾದು ಕುಳಿತಿದ್ದಾರೆ.

ಇತ್ತೀಚೆಗೆ ಬಿಹಾರ ಹಾಗೂ ಜಾರ್ಖಂಡ್ನ ಆದಾಯ ತೆರಿಗೆ ಇಲಾಖೆಯ ಮುಖ್ಯ ಆಯುಕ್ತ ಡಾ. ಡಿ. ಸುಧಾಕರ ರಾವ್ ಅವರು ಹೇಳಿಕೆ ಒಂದನ್ನು ನೀಡಿದ್ದರು. ‘ಧೋನಿಯವರು ಹಿಂದಿನ ಹಣಕಾಸು ವರ್ಷದಲ್ಲಿ ಅತೀ ಹೆಚ್ಚು ವೈಯಕ್ತಿಕ ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಿದ್ದಾರೆ’ ಎಂದಿದ್ದರು.

ಮಹೇಂದ್ರ ಸಿಂಗ್ ಧೋನಿ ಅವರು ಕ್ರಿಕೆಟರ್ ಮಾತ್ರವಲ್ಲ, ಅವರು ಅದ್ಭುತ ಕೃಷಿಕರೂ ಆಗಿದ್ದಾರೆ. ಅವರು ಟ್ರ್ಯಾಕ್ಟರ್ ಮೂಲಕ ಹೊಲ ಉಳುವುದು, ಕೃಷಿಯಲ್ಲಿ ತೊಡಗಿಕೊಳ್ಳುವ ಫೋಟೊ ಹಾಗೂ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಜಾರ್ಖಂಡ್ನ ರಾಂಚಿಯ ಕೈಲಾಶಪತಿ ಎಂಬ ಧೋನಿಯವರ ಫಾರ್ಮ್ಹೌಸ್ ಇದೆ. ಇಲ್ಲಿರುವ ಫಾರ್ಮ್ ಹೌಸ್ 7 ಎಕರೆ ಇದ್ದು, ಕೃಷಿ ಭೂಮಿಯ ಜೊತೆಗೆ ಐಷಾರಾಮಿ ಮನೆ, ಉದ್ಯಾನವೂ ಇದೆ. ಹಾಗಾದರೆ ಧೋನಿಯವರ ಈ ಫಾರ್ಮ್ಹೌಸ್ನಲ್ಲಿ ಏನೆಲ್ಲ ಇದೆ ಎಂಬುದನ್ನು ನೋಡೊಣ.

ಧೋನಿ ಅವರು ಬಿಡುವಿನ ವೇಳೆಯಲ್ಲಿ ಕುಟುಂಬದೊಂದಿಗೆ ಫಾರ್ಮ್ಹೌಸ್ನಲ್ಲಿ ಕಾಲ ಕಳೆಯುತ್ತಾರೆ. ಅವರ ಈ ತೋಟದಲ್ಲಿ ಸಾಕು ಪ್ರಾಣಿಗಳಾದ ಕುದುರೆ, ನಾಯಿ ಹಾಗೂ ವಿವಿಧ ಪಕ್ಷಿಗಳನ್ನು ಸಾಕಿದ್ದಾರೆ. ಮೂಲಸೌಕರ್ಯಗಳಿಂದ ಕೂಡಿದ ಐಷಾರಾಮಿ ನಿವಾಸವಿದೆ. ಮನೆಯ ಮುಂಭಾಗ ಸುಂದರವಾದ ಉದ್ಯಾನವೂ ಇದೆ.

ಧೋನಿ ಹಾಗೂ ಸಾಕ್ಷಿ ಅವರು ತಮ್ಮ ಮನೆಯ ಕೆಲ ಫೋಟೊ ಹಾಗೂ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅದರಂತೆ ಅವರು ಬಿಡುವಿನ ಸಮಯದಲ್ಲಿ ಸಾಕು ಪ್ರಾಣಿಗಳೊಂದಿಗೆ ಕಾಲ ಕಳೆಯುತ್ತಾರೆ.

ಮಾತ್ರವಲ್ಲದೆ, ಧೋನಿ ಅವರ ತೋಟದಲ್ಲಿ ಈಜುಕೊಳ, ಕಾರು ಹಾಗೂ ಬೈಕ್ಗಳ ಸಂಗ್ರಹವಿರುವ ಗ್ಯಾರೇಜ್ನ ಫೋಟೊಗಳನ್ನು ಕೂಡ ಹಂಚಿಕೊಂಡಿದ್ದಾರೆ. ಜೊತೆಗೆ ಇಲ್ಲಿ ಚಿಕ್ಕ ಆಟದ ಮೈದಾನ, ಜಿಮ್ ಕೂಡ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.