ಕೋಲ್ಕತ್ತ: ಇಲ್ಲಿನ ಈಡೆನ್ ಗಾರ್ಡನ್ಸ್ ಕ್ರಿಕೆಟ್ ಮೈದಾನದಲ್ಲಿ ನಿನ್ನೆ (ಏಪ್ರಿಲ್ 9) ನಡೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಲಖನೌ ಸೂಪರ್ಜೈಂಟ್ಸ್ ತಂಡದ ವಿಕೆಟ್ ಕೀಪರ್, ಬ್ಯಾಟರ್ ಮುಕುಲ್ ಚೌಧರಿ ಬ್ಯಾಟಿಂಗ್ ಮಾಡುವಾಗ ಧೋನಿಯವರು ಹೊಡೆಯುತ್ತಿದ್ದ ಹೆಲಿಕಾಪ್ಟರ್ ಶಾಟ್ ಹೊಡೆದು ಪ್ರೇಕ್ಷಕರನ್ನು ರಂಜಿಸಿದ್ದಾರೆ.

ಎಂ.ಎಸ್. ಧೋನಿ ಅವರು ಐಪಿಎಲ್ನಲ್ಲಿ ಈ ಬಾರಿಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದಾರೆ. ಆದರೆ, ಅವರು ಗಾಯದ ಸಮಸ್ಯೆಯಿಂದಾಗಿ ಮೈದಾನದಿಂದ ದೂರ ಉಳಿದಿದ್ದಾರೆ. ಆದರೆ, ನಿನ್ನೆ ನಡೆದ ಪಂದ್ಯದಲ್ಲಿ ಧೋನಿಯವರಂತೆ ಹೆಲಿಕಾಪ್ಟರ್ ಶಾಟ್ ಸಿಡಿಸಿದ ಮುಕುಲ್ ಚೌಧರಿ ಅವರು ಧೋನಿಯವರನ್ನು ನೆನಪಿಸಿದ್ದಾರೆ.

ಇನ್ನೂ ಪಂದ್ಯದ ಬಳಿಕ ಮಾತನಾಡಿ ಮುಕುಲ್ ಚೌಧರಿ, ‘ಧೋನಿಯವರೇ ನನ್ನ ಆಟಕ್ಕೆ ಸ್ಫೂರ್ತಿ, ಅವರು ಪಂದ್ಯ ಮುಗಿಸುತ್ತಿದ್ದ ರೀತಿ ನನಗೆ ತುಂಬಾ ಇಷ್ಟ. ಹಾಗಾಗಿಯೇ ವೇಗದ ಬೌಲರ್ ಆಗಿದ್ದ ನಾನು ವಿಕೆಟ್ ಕೀಪರ್, ಬ್ಯಾಟರ್ ಆಗಿದ್ದೇನೆ’ ಎಂದಿದ್ದಾರೆ.

ಮಾತ್ರವಲ್ಲ, ಪಂದ್ಯದ ನಡುವೆ ಬಾರಿಸಿದ ಹೆಲಿಕಾಪ್ಟರ್ ಸಿಕ್ಸ್ ಕುರಿತು ಮಾತನಾಡಿದ ಅವರು, ತಾವು ಚಿಕ್ಕವರಿದ್ದಾಗಿನಿಂದಲೂ ಹೆಲಿಕಾಪ್ಟರ್ ಶಾಟ್ ಹೊಡೆಯಬೇಕೆಂದು ಪ್ರಯತ್ನಿಸುತ್ತಿದ್ದೆ ಎಂದಿದ್ದಾರೆ.

ನಾನು ಧೋನಿಯವರಿಂದ ಪ್ರಭಾವಿತನಾಗಿದ್ದೇನೆ. ಬಾಲ್ಯದಿಂದಲೂ ಅವರ ಆಟವನ್ನು ನೋಡಿಕೊಂಡು ಬಂದಿದ್ದೇನೆ. ಇಂದಿನ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಅವರಿಗೆ ಅರ್ಪಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.