ಮುಲ್ಲನಪುರ (ಪಿಟಿಐ): ಕರ್ನಾಟಕದ ವೇಗಿ ಪ್ರಸಿದ್ಧಕೃಷ್ಣ ಮತ್ತು ಹೈದರಾಬಾದಿನ ಮೊಹಮ್ಮದ್ ಸಿರಾಜ್ ಅವರು ಮುಂಬರುವ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕಾಗಿ ಪೂರ್ವಾಭ್ಯಾಸ ಆರಂಭಿಸಿದರು.

ಮುಲ್ಲನಪುರದ ಕ್ರಿಕೆಟ್ ಕ್ರೀಡಾಂಗಣ ದಲ್ಲಿ ಶನಿವಾರದಿಂದ ಅಫ್ಗಾನಿಸ್ತಾನ ಎದುರು ಟೆಸ್ಟ್ ನಡೆಯಲಿದೆ. ಅದಕ್ಕಾಗಿ ಬುಧವಾರ ಭಾರತ ತಂಡದ ಆಟಗಾರರು ಅಭ್ಯಾಸ ಆರಂಭಿಸಿದರು. ಪ್ರಸಿದ್ಧ ಮತ್ತು ಸಿರಾಜ್ ಅವರು ಬಿಸಿಲಿನ ಧಗೆಯಲ್ಲಿಯೇ ಸುಮಾರು 25 ನಿಮಿಷ ನೆಟ್ಸ್ನಲ್ಲಿ ಬೌಲಿಂಗ್ ಮಾಡಿದರು.

ಎರಡು ತಿಂಗಳುಗಳ ಕಾಲ ಐಪಿಎಲ್ ನಲ್ಲಿ ಆಡಿದ್ದ ಆಟಗಾರರು ನೇರವಾಗಿ ದ್ವಿಪಕ್ಷೀಯ ಸರಣಿಯಲ್ಲಿ ಕಣಕ್ಕಿಳಿಯಲಿ ದ್ದಾರೆ. ಇದರಿಂದಾಗಿ ಅವರ ಕಾರ್ಯಭಾರ ಒತ್ತಡದ ಕುರಿತು ಚರ್ಚೆಗಳು ಗರಿಗೆದರಿವೆ. ಅನುಭವಿ ವೇಗಿ ಸಿರಾಜ್ ಅವರಿಗೆ ಫಿಟ್ನೆಸ್ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳು ಇಲ್ಲ. ಆದರೆ ಈ ಭಾಗದಲ್ಲಿ ಸದ್ಯ ಬೇಸಿಗೆಯು ಏರುಗತಿಯಲ್ಲಿದೆ.ತಂಡದಲ್ಲಿ ಸ್ಥಾನ ಪಡೆದಿರುವ ಆರೂವರೆ ಅಡಿ ಎತ್ತರದ ಬಲಗೈ ವೇಗಿ ಗುರ್ನೂರ್ ಬ್ರಾರ್ ಅವರಿಗೆ ಪದಾರ್ಪಣೆಯ ಅವಕಾಶ ಸಿಗುವುದೇ ಎಂಬ ಕುತೂಹಲ ಗರಿಗೆದರಿದೆ. ಉತ್ತಮ ಲೆಂಗ್ತ್ನಲ್ಲಿ ಮೊನಚಾದ ಬೌನ್ಸರ್ಗಳನ್ನು ಪ್ರಯೋಗಿಸುವಲ್ಲಿ ಸಮರ್ಥರಾಗಿದ್ದಾರೆ.

ನೆಟ್ ಬೌಲರ್ ಆಗಿ ಅವಕಾಶ ಪಡೆದಿರುವ ಜಮ್ಮು–ಕಾಶ್ಮೀರದ ವೇಗಿ ಅಕೀಬ್ ನಬಿ ಕೂಡ ಬೌಲಿಂಗ್ ಅಭ್ಯಾಸ ಮಾಡಿದರು. ಲೈನ್ ಮತ್ತು ಲೆಂಗ್ತ್ ನಿರ್ವಹಿಸುವಲ್ಲಿ ನಿಖರತೆ ಸಾಧಿಸಿದರು.

ಈ ಸಂದರ್ಭದಲ್ಲಿ ಎಡಗೈ ಸ್ಪಿನ್ –ಆಲ್ರೌಂಡರ್ ಹರ್ಷ ದುಬೆ ಅವರಿಗೆ ಹೆಚ್ಚು ಹೊತ್ತು ಬ್ಯಾಟಿಂಗ್ ಅಭ್ಯಾಸ ನಡೆಸಲು ಅವಕಾಶ ಕೊಡಲಾಯಿತು. ಇನ್ನೊಬ್ಬ ಎಡಗೈ ಸ್ಪಿನ್ನರ್ ಮಾನವ್ ಸುತಾರ್ ಕೂಡ ತಂಡದಲ್ಲಿದ್ದಾರೆ. ಆದ್ದರಿಂದ ಅಂತಿಮ 11ರ ಬಳಗದಲ್ಲಿ ಸ್ಥಾನ ಪಡೆಯಲು ದುಬೆ ಮತ್ತು ಸುತಾರ್ ಅವರಲ್ಲಿ ಪೈಪೋಟಿ ಇದೆ. ಸುತಾರ್ ಕೂಡ ಅಭ್ಯಾಸ ನಡೆಸಿದರು. ಇವರಿಬ್ಬರ ಅಭ್ಯಾಸದ ಮೇಲೆ ಮುಖ್ಯ ಕೋಚ್ ಗೌತಮ್ ಗಂಭೀರ್ ನಿಗಾ ವಹಿಸಿದ್ದರು.

ನಾಯಕ ಶುಭಮನ್ ಗಿಲ್ ಅವರು ಪ್ರಿನ್ಸ್ ಯಾದವ್ ಸೇರಿದಂತೆ ಬೇರೆ ಬೇರೆ ಬೌಲರ್ಗಳ ಎಸೆತಗಳನ್ನು ಎದುರಿಸಿದರು. ವೇಗಿ ಮಯಂಕ್ ಯಾದವ್ ಕೂಡ ಈ ಸಂದರ್ಭದಲ್ಲಿ ಇದ್ದರು. ಆದರೆ ಅವರು ಹೆಚ್ಚು ಬೌಲಿಂಗ್ ಮಾಡಲಿಲ್ಲ. ಫಿಟ್ನೆಸ್ ವ್ಯಾಯಾಮಗಳಲ್ಲಿ ತೊಡಗಿಕೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-51-1472106718

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.