ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಇಂಡಿಯನ್ಸ್‌ಗೆ ರುದರ್‌ಫೋರ್ಡ್‌

Last Updated 31 ಜುಲೈ 2019, 18:38 IST
ಅಕ್ಷರ ಗಾತ್ರ

ಮುಂಬೈ: ಬಿರುಸಿನ ಹೊಡೆತಗಳ ಆಟಗಾರ, ಗಯಾನಾದ ಶೆರ್ಫೇನ್‌ ರುದರ್‌ಫೋರ್ಡ್‌ ಅವರನ್ನು ಐಪಿಎಲ್‌ ತಂಡ ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಮುಂಬೈ ಇಂಡಿಯನ್ಸ್‌ ಪಡೆದುಕೊಂಡಿದೆ. ಇದಕ್ಕಾಗಿ ಲೆಗ್‌ ಸ್ಪಿನ್ನರ್‌ ಮಯಂಕ್‌ ಮಾರ್ಖಂಡೆ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ಗೆ ಬಿಟ್ಟುಕೊಟ್ಟಿದೆ.

ಗಯಾನಾ ಅಮೆಜಾನ್‌ ವಾರಿಯರ್ಸ್‌ ಪರ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಬೀಸಾಟವಾಡಿರುವ ರುದರ್‌ಫೋರ್ಡ್‌, ಟ್ರಿನ್‌ಬಾಗೊ ನೈಟ್‌ರೈಡರ್ಸ್‌ ವಿರುದ್ಧ 13 ಎಸೆತಗಳಲ್ಲಿ ಆರು ಸಿಕ್ಸರ್‌ ಸಹಿತ 45 ರನ್‌ ಚಚ್ಚಿದ್ದರು. ಶಿಮ್ರಾನ್‌ ಹೆಟ್ಮೆಯರ್ ಜೊತೆ ಪಂದ್ಯ ಗೆಲ್ಲಿಸುವ ಜೊತೆಯಾಟ ಆಡಿದ್ದರು.

171 ರನ್‌ ಬಾರಿಸಿರುವ ಅವರ ಸ್ಟ್ರೈಕ್‌ ರೇಟ್‌ 142.5. ಈ ಸಾಹಸಕ್ಕಾಗಿ ಅವರಿಗೆ ಭಾರತ ವಿರುದ್ಧ ಆಡುವ ಟಿ–20 ತಂಡದಲ್ಲಿ ಸ್ಥಾನವೂ ಸಿಕ್ಕಿದೆ.

‘ಮಾರ್ಕಂಡೆ ಅವರಿಗೆ ಶುಭ ಹಾರೈಸುತ್ತೇವೆ. ಅವರೊಬ್ಬ ಪ್ರತಿಭಾವಂತ ಬೌಲರ್‌. ಅವರನ್ನು ಬಿಟ್ಟುಕೊಡುವುದು ಕಠಿಣ ನಿರ್ಧಾರ ಎಂದು ಮುಂಬೈ ಇಂಡಿಯನ್ಸ್‌ ತಂಡದ ಮಾಲೀಕ ಆಕಾಶ್‌ ಅಂಬಾನಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT