ಬೆಂಗಳೂರು: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಒಡೆತನದ ಮುಂಬೈ ಇಂಡಿಯನ್ಸ್, ತನ್ನ ಐದನೇ ಕ್ರಿಕೆಟ್ ಫ್ರಾಂಚೈಸಿಯಾಗಿ ‘ಎಂಐ ನ್ಯೂಯಾರ್ಕ್’ ತಂಡವನ್ನು ಖರೀದಿಸಿದೆ.
ಮುಂಬೈ ಇಂಡಿಯನ್ಸ್ ಸೋಮವಾರ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದೆ. ಚೊಚ್ಚಲ ಆವೃತ್ತಿಯ ಮೇಜರ್ ಲೀಗ್ ಕ್ರಿಕೆಟ್ (ಎಂಎಲ್‌ಸಿ) ಟೂರ್ನಿಯಲ್ಲಿ ಎಂಐ ನ್ಯೂಯಾರ್ಕ್ ತಂಡ ಆಡಲಿದೆ.
ನ್ಯೂಯಾರ್ಕ್ ತಂಡವು ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದ ಐದನೇ ತಂಡ ಆಗಿದೆ. ಮುಂಬೈ ಇಂಡಿಯನ್ಸ್ (ಐಪಿಎಲ್), ಎಂಐ ಕೇಪ್‌ಟೌನ್ (ದಕ್ಷಿಣ ಆಫ್ರಿಕಾ ಟಿ20), ಎಂಐ ಎಮಿರೇಟ್ಸ್ (ಐಎಲ್ ಟಿ20) ಮತ್ತು ಮುಂಬೈ ಇಂಡಿಯನ್ಸ್ (ಡಬ್ಲ್ಯುಪಿಎಲ್) ಈ ಹಿಂದಿನ ನಾಲ್ಕು ತಂಡಗಳಾಗಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.