ಐಪಿಎಲ್ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಮುಂಬೈ ಇಂಡಿಯನ್ಸ್ನಿಂದ ಹೊರನಡೆಯಲು ನಾಯಕ ಹಾರ್ದಿಕ್ ಪಾಂಡ್ಯ ಸಜ್ಜಾಗಿದ್ದಾರೆ ಎಂಬ ವರದಿಗಳ ನಡುವೆ, ತಂಡದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲು ಫ್ರಾಂಚೈಸಿ ಮುಂದಾಗಿದೆ.

ಹಾರ್ದಿಕ್ ಪಾಂಡ್ಯ ನಾಯಕತ್ವ ವಹಿಸಿಕೊಂಡ ನಂತರ ತಂಡದ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿಲ್ಲ. 2024ರಲ್ಲಿ 10ನೇ ಸ್ಥಾನಕ್ಕೆ ಕುಸಿದಿದ್ದ ಎಂಐ ಪಡೆ, 2025ರಲ್ಲಿ ಪ್ಲೇ ಆಫ್ ಹಂತ ಪ್ರವೇಶಿಸಿತ್ತು. ಈ ಬಾರಿ ಮತ್ತೆ ಕಳಪೆ ಪ್ರದರ್ಶನ ತೋರಿದ್ದು, 10 ತಂಡಗಳಿರುವ ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ, 2027ರ ಆವೃತ್ತಿಯನ್ನು ಗಮನದಲ್ಲಿಟ್ಟುಕೊಂಡು ‘ರಿಫ್ರೆಶ್ ಬಟನ್’ ಒತ್ತಲು ಫ್ರಾಂಚೈಸಿ ಸಿದ್ಧವಾಗಿದೆ ಎಂದು ವರದಿಯಾಗಿದೆ.

ನಾಯಕತ್ವಕ್ಕಾಗಿ ಮೂವರು ಸಮರ್ಥ ಆಟಗಾರರನ್ನು ಪಟ್ಟಿ ಮಾಡಿಕೊಳ್ಳಲಾಗಿದೆ. ತಂಡದ ಹಿರಿಯ ಆಟಗಾರರು, ಭವಿಷ್ಯದ ದೃಷ್ಟಿಯಿಂದ ತಿಲಕ್ ವರ್ಮಾ ಅವರ ಹೆಸರನ್ನು ಸೂಚಿಸಿದ್ದಾರೆ ಎನ್ನಲಾಗಿದೆ.

‘2026ರ ಟೂರ್ನಿ ಮಧ್ಯದಲ್ಲಿ ನಡೆಸಿದ ಪರಿಶೀಲನಾ ಸಭೆ ಸಂದರ್ಭದಲ್ಲಿ, ಹಲವು ವರ್ಷಗಳಿಂದ ಮುಂಬೈ ತಂಡದಲ್ಲಿರುವ ಯುವ ಬ್ಯಾಟರ್ ತಿಲಕ್ ವರ್ಮಾಗೆ ನಾಯಕತ್ವ ವಹಿಸಿಕೊಡಬಹುದು ಎಂದು ಹಿರಿಯ ಆಟಗಾರ ಸೂಚಿಸಿದ್ದಾರೆ’ ಮೂಲಗಳು ತಿಳಿಸಿವೆ.

ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಪ್ರಸ್ತುತ ಆವೃತ್ತಿಯಲ್ಲಿ ಪಾಂಡ್ಯ ಬದಲು ಮೂರು ಪಂದ್ಯಗಳಲ್ಲಿ ತಂಡ ಮುನ್ನಡೆಸಿದ್ದರು. ಸೂರ್ಯ ಅನುಪಸ್ಥಿತಿಯಲ್ಲಿ ಜಸ್ಪ್ರೀತ್ ಬೂಮ್ರಾ ಒಂದು ಪಂದ್ಯಕ್ಕೆ ನಾಯಕರಾಗಿದ್ದರು. ನಾಯಕತ್ವಕ್ಕಾಗಿ ಈ ಇಬ್ಬರನ್ನೂ ಪರಿಗಣಿಸುವ ಸಾಧ್ಯತೆ ಇದೆ ಎಂದೂ ಹೇಳಲಾಗಿದೆ.

ಹಿರಿಯ ಬ್ಯಾಟರ್ವೊಬ್ಬರಿಗೆ ವಿಭಿನ್ನ ಪಾತ್ರ ವಹಿಸುವ ಮೂಲಕ, ಅವರನ್ನು ಹಂತ ಹಂತವಾಗಿ ತಂಡದಿಂದ ಕೈಬಿಡುವ ಬಗ್ಗೆಯೂ ಆಲೋಚನೆ ನಡೆದಿದೆ ಎಂದು ತಿಳಿದುಬಂದಿದೆ.

ಮುಂಬೈ ತಂಡವನ್ನು ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ 2023ರಲ್ಲಿ ನಾಯಕತ್ವ ವಹಿಸಿಕೊಡಲಾಗಿತ್ತು.

ಅದಕ್ಕೂ ಮೊದಲು ಗುಜರಾತ್ ಟೈಟನ್ಸ್ ನಾಯಕರಾಗಿದ್ದ ಹಾರ್ದಿಕ್, 2022ರಲ್ಲಿ ಪ್ರಶಸ್ತಿ ಗೆದ್ದುಕೊಟ್ಟಿದ್ದರು. 2023ರ ಆವೃತ್ತಿಯಲ್ಲಿ ತಂಡವನ್ನು ಫೈನಲ್ಗೆ ಮುನ್ನಡೆಸಿದ್ದರು.

ತಿಲಕ್ ವರ್ಮಾ ಸಾಧನೆ
ಮುಂಬೈ ಇಂಡಿಯನ್ಸ್ ಪರ 2026ರಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರರ ಲಿಸ್ಟ್ನಲ್ಲಿ ತಿಲಕ್ ಎರಡನೇ ಸ್ಥಾನದಲ್ಲಿದ್ದಾರೆ. ಅವರು ಆಡಿದ 14 ಪಂದ್ಯಗಳಲ್ಲಿ 359 ರನ್ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ರಿಯಾನ್ ರಿಕ್ಕೆಲ್ಟನ್ (448) ಮೊದಲ ಸ್ಥಾನದಲ್ಲಿದ್ದಾರೆ.

ಐಪಿಎಲ್ನಲ್ಲಿ ಒಟ್ಟಾರೆ 68 ಪಂದ್ಯಗಳಲ್ಲಿ ಆಡಿರುವ ತಿಲಕ್, 10 ಅರ್ಧಶತಕ, 1 ಶತಕ ಸಹಿತ 1,858 ರನ್ ಕಲೆಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.