ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಐದು ಸಲದ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಕಳೆದ ಐದು ವರ್ಷಗಳಿಂದ ಪ್ರಶಸ್ತಿ ಬರ ಎದುರಿಸುತ್ತಿದೆ. ಈ ಬಾರಿ ಅದನ್ನು ನೀಗುವ ಕನಸಿನೊಂದಿಗೆ ಕಣಕ್ಕಿಳಿಯಲಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ತಂಡವು ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಆಡಲಿದೆ. ‘ಮುಂಬೈಕರ್’ ಅಜಿಂಕ್ಯ ರಹಾನೆ ಅವರು ಕೋಲ್ಕತ್ತ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಮುಂಬೈ ತಂಡವು 2013-2020 ರ ನಡುವೆ ಐದು ಬಾರಿ ಟ್ರೋಫಿ ಜಯಿಸಿತ್ತು. ಹೋದ ವರ್ಷ ಹಾರ್ದಿಕ್ ಬಳಗವು ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋತಿತ್ತು. ಟೆಸ್ಟ್ ಮತ್ತು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಪಡೆದಿರುವ ರೋಹಿತ್ ಶರ್ಮಾ ನಿರಾಳರಾಗಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಏಕದಿನ ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ್ದರು. ಅದೇ ವಿಶ್ವಾಸದಲ್ಲಿ ಇಲ್ಲಿಯೂ ಕಣಕ್ಕಿಳಿಯಲಿದ್ದಾರೆ.

ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕತ್ವ ವಹಿಸಿದ್ದ ಸೂರ್ಯಕುಮಾರ್ ಯಾದವ್, ಸ್ಫೋಟಕ ಶೈಲಿಯ ಬ್ಯಾಟರ್ ತಿಲಕ್ ವರ್ಮಾ ಮತ್ತು ‘ಯಾರ್ಕರ್ ಕಿಂಗ್’ ಜಸ್ಪ್ರೀತ್ ಬೂಮ್ರಾ ಅವರು ಮುಂಬೈ ತಂಡದ ಪ್ರಮುಖ ಶಕ್ತಿಯಾಗಿದ್ದಾರೆ. ಇವರೆಲ್ಲರೂ ವಿಶ್ವಕಪ್ ವಿಜೇತ ತಂಡದಲ್ಲಿದ್ದರು ಎಂಬುದೂ ವಿಶೇಷ. ವಿದೇಶಿ ಆಟಗಾರರಾದ ರಯಾನ್ ರಿಕೆಲ್ಟನ್, ಶರ್ಫೆನ್ ರುದರ್ಫೋರ್ಡ್, ಕಾರ್ಬಿನ್ ಬಾಷ್, ಮಿಚೆಲ್ ಸ್ಯಾಂಟನರ್, ವಿಲ್ ಜ್ಯಾಕ್ಸ್ ಮತ್ತು ಅನುಭವಿ ವೇಗಿ ಟ್ರೆಂಟ್ ಬೌಲ್ಟ್ ಕೂಡ ತಂಡವನ್ನು ಗೆಲುವಿನತ್ತ ಮುನ್ನಡೆಸಬಲ್ಲರು. ಆಲ್ರೌಂಡರ್ ಶಾರ್ದೂಲ್ ಠಾಕೂರ್ ಮತ್ತು ದೀಪಕ್ ಚಾಹರ್ ಅವರು ವೇಗದ ಬೌಲಿಂಗ್ ವಿಭಾಗದ ಶಕ್ತಿಯಾಗಿದ್ದಾರೆ.

ಕೋಲ್ಕತ್ತ ತಂಡವು ಮುಂಬೈಗೆ ಸಮಬಲದ ಸವಾಲು ಒಡ್ಡುವ ಸಾಮರ್ಥ್ಯ ಹೊಂದಿದೆ. ಉಪನಾಯಕ ರಿಂಕು ಸಿಂಗ್, ಆಲ್ರೌಂಡರ್ ಸುನಿಲ್ ನಾರಾಯಣ್, ಸ್ಪಿನ್ ಮೋಡಿಗಾರ ವರುಣ್ ಚಕ್ರವರ್ತಿ, ಅಂಗಕ್ರಿಷ್ ರಘುವಂಶಿ, ಫಿನ್ ಅಲೆನ್, ಟಿಮ್ ಸೀಫರ್ಟ್, ಐಪಿಎಲ್ ಸ್ಟಾರ್ ರಾಹುಲ್ ತ್ರಿಪಾಠಿ, ಆಲ್ರೌಂಡರ್ ಕ್ಯಾಮರಾನ್ ಗ್ರೀನ್ ಅವರು ತಂಡದಲ್ಲಿದ್ದಾರೆ. ಮುಸ್ತಫೀಜುರ್ ರೆಹಮಾನ್ ಅವರನ್ನು ಕೈಬಿಟ್ಟ ಕಾರಣದಿಂದಾಗಿ ವೇಗದ ಬೌಲಿಂಗ್ ಹೊಣೆಯು ನವದೀಪ್ ಸೈನಿ ಹಾಗೂ ಉಮ್ರಾನ್ ಮಲಿಕ್ ಅವರ ಮೇಲೆ ಬೀಳುವ ಸಾಧ್ಯತೆ ಇದೆ.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊಹಾಟ್ಸ್ಟಾರ್ ಆ್ಯಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.