ಮುಂಬೈ: ಇಲ್ಲಿನ ವಾಖೆಂಡೆ ಸ್ಡೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 103 ರನ್‌ಗಳ ಬೃಹತ್ ಅಂತರದಿಂದ ಗೆಲ್ಲುವು ಸಾಧಿಸಿದೆ. ಈ ಮೂಲಕ ತವರಿನಲ್ಲಿ ಮುಂಬೈ ಅಧಿಕ ರನ್ ಅಂತರದಿಂದ ಸೋಲನುಭವಿಸಿದೆ.

ಸಂಜು ಸ್ಯಾಮ್ಸನ್ ಅವರ ಅಮೋಘ ಶತಕದ ಬಲದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಿಗದಿತ 20 ಓವರ್ನಲ್ಲಿ 203 ರನ್‌ಗಳ ಗುರಿಯನ್ನು ನೀಡಿತು. ಗುರಿ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ವೈಫಲ್ಯದಿಂದಾಗಿ 104 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಐಪಿಎಲ್ನ 19 ಆವೃತಿಗಳಲ್ಲಿ ಮುಂಬೈ ವಿರುದ್ಧ 103 ರನ್ಗಳಿಂದ ಗೆದ್ದ ಏಕೈಕ ತಂಡವಾಗಿ ಚೆನ್ನೈ ದಾಖಲೆ ಬರೆದಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗಳಿಸಿದ ಅತೀ ಹೆಚ್ಚು ಅಂತರದ ಗೆಲುವಾಗಿದೆ. ಈ ಮೊದಲು ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಅತಿದೊಡ್ಡ ಗೆಲುವು ಸಾಧಿಸಿದ್ದ ದಾಖಲೆ ರಾಜಸ್ಥಾನ ರಾಯಲ್ಸ್ ತಂಡ ಮಾಡಿತ್ತು. 2013ರಲ್ಲಿ ರಾಜಸ್ಥಾನ ರಾಯಲ್ಸ್, ಮುಂಬೈ ಇಂಡಿಯನ್ಸ್ ಅನ್ನು 87 ರನ್ಗಳಿಂದ ಸೋಲಿಸಿತ್ತು. ಇದೀಗ ಚೆನ್ನೈ ಸೂಪರ್ ಕಿಂಗ್ಸ್ 103 ರನ್ಗಳಿಂದ ಸೋಲಿಸುವ ಮೂಲಕ ದಾಖಲೆ ಬರೆದಿದೆ.

ಮುಂಬೈ ಇಂಡಿಯನ್ಸ್ಗೆ ರನ್ ಅಂತರದಲ್ಲಿ ಎದುರಾದ ಅತಿದೊಡ್ಡ ಸೋಲುಗಳಿವು...

ಚೆನ್ನೈ ಸೂಪರ್ ಕಿಂಗ್ಸ್ 103 ರನ್ಗಳಿಂದ ಗೆಲುವು (2026)

ರಾಜಸ್ಥಾನ ರಾಯಲ್ಸ್ 87 ರನ್ಗಳಿಂದ ಗೆಲುವು (2013)

ಸನ್ ರೈಸರ್ಸ್ ಹೈದರಾಬಾದ್ 85 ರನ್ಗಳಿಂದ ಗೆಲುವು (2016)

ಪಂಜಾಬ್ ಕಿಂಗ್ಸ್ 76 ರನ್ಗಳಿಂದ ಗೆಲುವು (2011)

ಪಂಜಾಬ್ ಕಿಂಗ್ಸ್ 66 ರನ್ಗಳಿಂದ ಗೆಲುವು (2008)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.