ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ 19ನೇ ಆವೃತ್ತಿಯ 30ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಗುಜರಾತ್ ಟೈಟನ್ಸ್ ಅನ್ನು 99 ರನ್ಗಳಿಂದ ಸೋಲಿಸಿ, ಗೆಲುವಿನ ಹಳಿಗೆ ಮರಳಿದೆ.

ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು 12.3 ಓವರ್ಗಳಲ್ಲಿ 96 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿರುತ್ತದೆ. ಈ ಸಂದರ್ಭದಲ್ಲಿ ಜೊತೆಯಾದ ಹಾರ್ದಿಕ್ ಪಾಂಡ್ಯ ಹಾಗೂ ತಿಲಕ್ ವರ್ಮಾ ಉತ್ತಮ ಜೊತೆಯಾಟ ಆಡಿದರು. ಆ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಿದರು.

ಹಾರ್ದಿಕ್ ಉತ್ಸಾಹಭರಿತ ಮಾತು

ಒಂದು ಹಂತದಲ್ಲಿ ನಿಧಾನಗತಿಯ ಬ್ಯಾಟಿಂಗ್ ನಡೆಸುತ್ತಿದ್ದ ತಿಲಕ್ ವರ್ಮಾ ಅವರು 22 ಎಸೆತಗಳಿಗೆ 19 ರನ್ ಗಳಿಸಿದ್ದರು. ಟೈಮ್ ಔಟ್ ಸಂದರ್ಭದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಅವರು ಆಕ್ರೋಶಭರಿತವಾಗಿ ತಿಲಕ್ ವರ್ಮಾ ಅವರಿಗೆ ಉತ್ಸಾಹಭರಿತ ಮಾತುಗಳ ಮೂಲಕ ಸ್ಫೋಟಕ ಬ್ಯಾಟಿಂಗ್ ಮಾಡಲು ಸೂಚಿಸುತ್ತಾರೆ. ಹಾರ್ದಿಕ್ ಮಾತಿನಿಂದ ಕೆರಳಿದ ತಿಲಕ್ ಅವರು ಗುಜರಾತ್ ಬೌಲರ್ಗಳ ಮೇಲೆ ಸವಾರಿ ಮಾಡಿದರು.

ಪಂದ್ಯದ ಬಳಿಕ ಈ ಕುರಿತು ಮಾತನಾಡಿದ ಹಾರ್ದಿಕ್, ‘ತಿಲಕ್ ಅವರ ಪ್ರತಿಭೆ ಹೇಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಅವರಲ್ಲಿ ಪ್ರತಿಭೆ ಇದೆ ಎಂಬುದನ್ನು ನಾನು ಬಲ್ಲೆ. ಹಾಗಾಗಿ ಅವರಿಗೆ ಚೆಂಡನ್ನು ನೋಡಿ ಹೊಡೆಯಿರಿ ಎಂದು ಹೇಳಿದೆ. ತಿಲಕ್ ಅದನ್ನೇ ಮಾಡಿದರು ಮತ್ತು ತಂಡದ ಮೊತ್ತ ಹೆಚ್ಚಾಯಿತು’ ಎಂದರು.

ತಿಲಕ್ ವರ್ಮಾ ಅವರ ಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ಬೃಹತ್ ಅಂತರದ ಗೆಲುವು ದಾಖಲಿಸಿದೆ. ಸದ್ಯ, ಮುಂಬೈ ಇಂಡಿಯನ್ಸ್ ಅಭಿಮಾನಿಗಳು ‘ಕಾಂತಾರ’ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯಾವಳಿಗೆ ನಿನ್ನೆಯ ಪಂದ್ಯದಲ್ಲಿ ತಿಲಕ್ ವರ್ಮಾ ಆಡಿದ ರೀತಿಯನ್ನು ಹೋಲಿಕೆ ಮಾಡಿ, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಸೀಸನ್ ಆರಂಭವಾದಾಗಿನಿಂದ ತಿಲಕ್ ವರ್ಮಾ ಅವರ ಬ್ಯಾಟ್ನಿಂದ ರನ್ಗಳು ಬರುತ್ತಿರಲಿಲ್ಲ. ಆದರೆ, ನಿನ್ನೆಯ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರು ಕಿವಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುವಂತೆ ಸೂಚನೆ ನೀಡಿದ ಬಳಿಕ, ತಿಲಕ್ ಅವರು ಎದ್ದು ನಿಂತು ಸ್ಫೋಟಕ ಬ್ಯಾಟಿಂಗ್ ಮೂಲಕ ಗುಜರಾತ್ ಬೌಲರ್ಗಳ ಮೇಲೆ ಸವಾರಿ ಮಾಡಿದರು ಎಂಬಂತೆ ಆನಿಮೇಟೆಡ್ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ರಿಷಬ್ ಶೆಟ್ಟಿಯವರು ದೈವದ ಅಣತಿಯ ಬಳಿಕ ಎದ್ದು ನಿಂತು ಜಮಿನುದಾರರ ರೌಡಿಗಳನ್ನು ಸದೆಬಡಿಯುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.