ಕೋಲ್ಕತ್ತ: ವೇಗಿಗಳಾದ ಸೌರಭ್ ದುಬೆ ಮತ್ತು ಕ್ಯಾಮರಾನ್ ಗ್ರೀನ್ ಅವರ ಪರಿಣಾಮಕಾರಿ ಬೌಲಿಂಗ್ ಬಳಿಕ ಕರ್ನಾಟಕದ ಮನೀಷ್ ಪಾಂಡೆ– ರೋವ್ಮನ್ ಪಾವೆಲ್ ಅಮೋಘ ಜೊತೆಯಾಟವಾಡಿದರು. ಅವರ ಆಟದ ಬಲದಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ 4 ವಿಕೆಟ್ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿತು.

ಕೊನೆಯ ಏಳು ಪಂದ್ಯಗಳಲ್ಲಿ ಆರನೇ ಗೆಲುವು ದಾಖಲಿಸಿದ ಕೆಕೆಆರ್ ಪಡೆ ಪ್ಲೇಆಫ್ ಆಸೆಯನ್ನು ಜೀವಂತವಾಗಿ ಉಳಿಸಿಕೊಂಡಿತು.

ಈಡನ್ ಗಾರ್ಡನ್ಸ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕೋಲ್ಕತ್ತ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸೌರಭ್ (34ಕ್ಕೆ2), ಗ್ರೀನ್ (23ಕ್ಕೆ2) ಹಾಗೂ ಸುನಿಲ್ ನಾರಾಯಣ್ (13ಕ್ಕೆ1) ಅವರು ಮುಂಬೈ ತಂಡಕ್ಕೆ ಆರಂಭದಲ್ಲಿಯೇ ಪೆಟ್ಟು ಕೊಟ್ಟರು. ಇದರಿಂದಾಗಿ ಹಾರ್ದಿಕ್ ಪಾಂಡ್ಯ ಪಡೆ 15.2 ಓವರ್ಗಳಲ್ಲಿ 95 ರನ್ಗಳಿಗೇ 6 ವಿಕೆಟ್ ಕಳೆದುಕೊಂಡಿತ್ತು.

ಕೊನೆಯ ಹಂತದ ಓವರ್ಗಳಲ್ಲಿ ಕಾರ್ಬಿನ್ ಬಾಷ್ (32; 18ಎ, 4x2, 6x2) ಬೀಸಾಟವಾಡಿದರು. ಹೀಗಾಗಿ, ಮುಂಬೈ 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 147 ರನ್ ಗಳಿಸಿತು.

ಸಾಧಾರಣ ಮೊತ್ತ ಬೆನ್ನಟ್ಟಿದ ಕೋಲ್ಕತ್ತ ತಂಡವು ಆರಂಭದಲ್ಲಿಯೇ ಫಿನ್ ಅಲೆನ್ (8; 5ಎ) ಅವರ ವಿಕೆಟ್ ಕಳೆದುಕೊಂಡಿತು. ನಾಯಕ ಅಜಿಂಕ್ಯ ರಹಾನೆ (21; 17ಎ) ಲಯ ಕಂಡುಕೊಳ್ಳುವ ಹಂತದಲ್ಲಿ ನಿರ್ಗಮಿಸಿದರು. ಬೌಲಿಂಗ್ನಲ್ಲಿ ಮಿಂಚಿದ್ದ ಆಲ್ರೌಂಡರ್ ಗ್ರೀನ್ (4; 8ಎ) ಅವರು ಬ್ಯಾಟಿಂಗ್ನಲ್ಲಿ ನಿರಾಶೆ ಅನುಭವಿಸಿದರು. ರಹಾನೆ ಪಡೆ 54 ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಈ ವೇಳೆ ಜೊತೆಯಾದ ಮನೀಷ್ (45; 33ಎ, 4x6) ಹಾಗೂ ಪಾವೆಲ್ (40; 30ಎ, 4x2, 6x2) ನಾಲ್ಕನೇ ವಿಕೆಟ್ಗೆ 64 ರನ್ ಸೇರಿಸಿ ಆಸರೆಯಾದರು. ಅರ್ಧಶತಕದತ್ತ ಮುನ್ನುಗ್ಗುತ್ತಿದ್ದ ಮನೀಷ್ ಅವರು ಜಸ್ಪ್ರೀತ್ ಬೂಮ್ರಾಗೆ ವಿಕೆಟ್ ಒಪ್ಪಿಸಿದರು. ಪಾವೆಲ್ ಅವರು ಬಾಷ್ (30ಕ್ಕೆ3) ಅವರ ಬೌಲಿಂಗ್ನಲ್ಲಿ ಅಲ್ಲಾಹ ಘಜನಫರ್ಗೆ ಕ್ಯಾಚಿತ್ತರು.

ಮನೀಷ್ ಅವರು ಹಾಲಿ ಲೀಗ್ನಲ್ಲಿ ಮೊದಲ ಬಾರಿಗೆ ಬ್ಯಾಟ್ ಮಾಡುವ ಅವಕಾಶ ಪಡೆದರು. ಸಿಕ್ಕ ಅವಕಾಶದಲ್ಲಿ ಅಮೂಲ್ಯ ಕಾಣಿಕೆ ನೀಡಿದರು.

ಕೊನೆಯಲ್ಲಿ ರಿಂಕು ಸಿಂಗ್ (9; 5ಎ) ಹಾಗೂ ಅನುಕೂಲ್ ರಾಯ್ (4) ತಂಡವನ್ನು ಗೆಲುವಿನ ದಡ ಸೇರಿಸಿದರು. ಕೆಕೆಆರ್ ತಂಡವು 18.5 ಓವರ್ಗಳಲ್ಲಿ 6 ವಿಕೆಟ್ಗೆ 148 ರನ್ ಗಳಿಸಿ ಸಂಭ್ರಮಿಸಿತು.

ಇದಕ್ಕೂ ಮೊದಲು, ಮುಂಬೈ ತಂಡದ ರೋಹಿತ್ ಶರ್ಮಾ (15; 13ಎ, 6x2) ಅವರು ಭರವಸೆಯ ಆಟವಾಡಿದರು. ಆದರೆ ಇನ್ನೊಂದು ಬದಿಯಲ್ಲಿದ್ದ ರಿಯಾನ್ ರಿಕೆಲ್ಟನ್ (6; 7ಎ) ಅವರು ಮನೀಷ್ ಪಡೆದ ಕ್ಯಾಚ್ಗೆ ನಿರ್ಗಮಿಸಿದರು. ಸೂರ್ಯಕುಮಾರ್ ಯಾದವ್ (15; 6ಎ) ಮತ್ತೊಮ್ಮೆ ದೊಡ್ಡ ಇನಿಂಗ್ಸ್ ಆಡುವಲ್ಲಿ ವಿಫಲರಾದರು. ಸೌರಭ್ ದುಬೆ ಎಸೆತದ ವೇಗ ಅಂದಾಜು ಮಾಡುವಲ್ಲಿ ಎಡವಿದ ಅವರು ಕ್ಲೀನ್ಬೌಲ್ಡ್ ಆದರು.

ಈ ಸಂದರ್ಭದಲ್ಲಿ ತಿಲಕ್ ವರ್ಮಾ (20; 32ಎ, 6x1) ಮತ್ತು ನಾಯಕ ಹಾರ್ದಿಕ್ ಪಾಂಡ್ಯ (26; 27ಎ, 4x2, 6x1) ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದರು. ವಿಕೆಟ್ ಪತನವನ್ನು ತಡೆಯುವ ಪ್ರಯತ್ನ ಮಾಡಿದರು. ಕೊನೆಯಲ್ಲಿ ಬಾಷ್ ಮತ್ತು ಚಾಹರ್ ಚೇತರಿಕೆ ನೀಡಿದರು.

ಮಳೆ ಬಂದಿದ್ದರಿಂದ ಸ್ವಲ್ಪ ಹೊತ್ತು ಪಂದ್ಯ ಸ್ಥಗಿತವಾಗಿತ್ತು.

ಸಂಕ್ಷಿಪ್ತ ಸ್ಕೋರು: ಮುಂಬೈ ಇಂಡಿಯನ್ಸ್: 20 ಓವರ್ಗಳಲ್ಲಿ 8ಕ್ಕೆ 147 (ರೋಹಿತ್ ಶರ್ಮಾ 15, ಸೂರ್ಯಕುಮಾರ್ ಯಾದವ್ 15, ತಿಲಕ್ ವರ್ಮಾ 20, ಹಾರ್ದಿಕ್ ಪಾಂಡ್ಯ 26, ಕಾರ್ಬಿನ್ ಬಾಷ್ ಔಟಾಗದೇ 32, ಸೌರಭ್ ದುಬೆ 34ಕ್ಕೆ2, ಕ್ಯಾಮರಾನ್ ಗ್ರೀನ್ 23ಕ್ಕೆ2) ಕೋಲ್ಕತ್ತ ನೈಟ್ ರೈಡರ್ಸ್: 18.5 ಓವರ್ಗಳಲ್ಲಿ 6 ವಿಕೆಟ್ಗೆ 148 (ಅಜಿಂಕ್ಯ ರಹಾನೆ 21, ಮನೀಷ್ ಪಾಂಡೆ 45, ರೋವ್ಮನ್ ಪಾವೆಲ್ 40; ಕಾರ್ಬಿನ್ ಬಾಷ್ 30ಕ್ಕೆ3)

ಪಂದ್ಯದ ಆಟಗಾರ: ಮನೀಷ್ ಪಾಂಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.