ಮುಂಬೈ: ಪ್ರಭಸಿಮ್ರನ್ ಸಿಂಗ್ ಮತ್ತು ಶ್ರೇಯಸ್ ಅಯ್ಯರ್ ಅವರ ಶತಕದ ಜೊತೆಯಾಟದ ಮುಂದೆ ಕ್ವಿಂಟನ್ ಡಿ ಕಾಕ್ ಅವರ ಅಜೇಯ ಶತಕ ಫಲ ನೀಡಲಿಲ್ಲ. ಅವರಿಬ್ಬರ ಮಿಂಚಿನ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ಐಪಿಎಲ್ನಲ್ಲಿ ಅಜೇಯ ಓಟವನ್ನು ಮುಂದುವರಿಸಿತು.

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ತಂಡವು ಏಳು ವಿಕೆಟ್ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ, ಪಾಯಿಂಟ್ಸ್ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿತು. ಹಾರ್ದಿಕ್ ಪಾಂಡ್ಯ ಪಡೆಯು ಸತತ ನಾಲ್ಕನೇ ಸೋಲು ಅನುಭವಿಸಿತು.

ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಕ್ವಿಂಟನ್ (ಅಜೇಯ 112; 60ಎ, 4X8, 6X7) ಮತ್ತು ನಮನ್ (50 31ಎ, 4X3, 6X3) ಅವರ ಬ್ಯಾಟಿಂಗ್ ಬಲದಿಂದ ಮುಂಬೈ ತಂಡವು 20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 195 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಪಂಜಾಬ್ ತಂಡವು ಪ್ರಿಯಾಂಶ್ ಆರ್ಯ (15) ಮತ್ತು ಕೂಪರ್ ಕನೋಲಿ (17) ಅವರನ್ನು ಬೇಗನೆ ಕಳೆದುಕೊಂಡಿತು. ಆರಂಭಿಕ ಆಟಗಾರ ಪ್ರಭಸಿಮ್ರನ್ ಸಿಂಗ್ (ಔಟಾಗದೇ 80;39ಎ, 4x11, 6x2) ಮತ್ತು ಶ್ರೇಯಸ್ (66;35ಎ, 4x5, 6x4) ಸೊಗಸಾದ ಇನಿಂಗ್ಸ್ ಕಟ್ಟಿದರು. ಮೂರನೇ ವಿಕೆಟ್ಗೆ 66 ಎಸೆತಗಳಲ್ಲಿ ಬಿರುಸಿನ 139 ರನ್ ಸೇರಿಸಿ ತಂಡವನ್ನು ಗೆಲುವಿತ್ತ ಮುನ್ನಡೆಸಿದರು.

ಜಯಕ್ಕೆ 11 ಬೇಕಿದ್ದಾಗ ಶ್ರೇಯಸ್ ಔಟಾದರು. ಮಾರ್ಕಸ್ ಸ್ಟೋಯಿನಿಸ್ (ಔಟಾಗದೇ 10;5ಎ) ಗೆಲುವಿನ ಗಡಿ ದಾಟಿಸಿದರು. ಪಂಜಾಬ್ ತಂಡವು ಇನ್ನೂ 21 ಎಸೆತಗಳು ಬಾಕಿ ಇರುವಂತೆ 3 ವಿಕೆಟ್ಗೆ 198 ರನ್ ಗಳಿಸಿ ಸಂಭ್ರಮಿಸಿತು. ಈ ಪಂದ್ಯದಲ್ಲೂ ವೇಗಿ ಜಸ್ಪ್ರೀತ್ ಬೂಮ್ರಾ ಒಂದೂ ವಿಕೆಟ್ ಗಳಿಸಲಿಲ್ಲ.

ಕ್ವಿಂಟನ್ ಶತಕ: ಎಡಗೈ ವೇಗಿ ಅರ್ಷದೀಪ್ ಸಿಂಗ್ (22ಕ್ಕೆ3) ಎರಡನೇ ಓವರ್ನಲ್ಲಿ ರಿಯಾನ್ ರಿಕೆಲ್ಟನ್ (2; 8ಎ) ಮತ್ತು ಸೂರ್ಯಕುಮಾರ್ ಯಾದವ್ ಅವರ ವಿಕೆಟ್ ಕಬಳಿಸಿದರು. ಇದರಿಂದಾಗಿ ತಂಡವು 15 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿತು.

ಈ ಹಂತದಲ್ಲಿ ಕ್ವಿಂಟನ್ ಅವರ ಜೊತೆಗೂಡಿದ ನಮನ್, ಇನಿಂಗ್ಸ್ ಚೇತರಿಕೆಗೆ ಕಾರಣರಾದರು. ಗಾಯ ಗೊಂಡಿರುವ ರೋಹಿತ್ ಶರ್ಮಾ ಬದಲಿಗೆ ಸ್ಥಾನ ಪಡೆದ ಕ್ವಿಂಟನ್ ಮತ್ತು ನಮನ್ ಮೂರನೇ ವಿಕೆಟ್ ಜೊತೆಯಾಟ ದಲ್ಲಿ 122 (68ಎ) ರನ್ ಸೇರಿಸಿದರು.

ಕ್ವಿಂಟನ್ 2022ರ ನಂತರ ಐಪಿಎಲ್ ನಲ್ಲಿ ಗಳಿಸಿದ ಮೊದಲ ಶತಕ ಇದಾಗಿದೆ. ಪ್ರಸಕ್ತ ಟೂರ್ನಿಯಲ್ಲಿ ದಾಖಲಾದ ಎರಡನೇ ಶತಕವೂ ಇದಾಗಿದೆ. ಈಚೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಂಜು ಸ್ಯಾಮ್ಸನ್ ಶತಕ ದಾಖಲಿಸಿದ್ದರು.

14ನೇ ಓವರ್ನಲ್ಲಿ ನಮನ್ ವಿಕೆಟ್ ಗಳಿಸಿದ ಮಧ್ಯಮವೇಗಿ ಶಶಾಂಕ್ ಸಿಂಗ್ ಸಂಭ್ರಮಿಸಿದರು. ಜೊತೆಯಾಟ ಮುರಿದ ಕಾರಣ ರನ್ ಹರಿವು ತುಸು ಕಡಿಮೆಯಾಯಿತು. ಕ್ರೀಸ್ಗೆ ಬಂದ ಹಾರ್ದಿಕ್ ಪಾಂಡ್ಯ 12 ಎಸೆತಗಳಲ್ಲಿ 14 ರನ್ ಹೊಡೆದರು.

ಎಡಗೈ ವೇಗಿ ಮಾರ್ಕೊ ಯಾನ್ಸೆನ್ ಅವರು ಹಾಕಿದ ಓವರ್ನಲ್ಲಿ ಹಾರ್ದಿಕ್ ಸಿಕ್ಸರ್ ಹೊಡೆಯುವ ಪ್ರಯತ್ನ ಮಾಡಿದರು. ಆದರೆ ಬೌಂಡರಿ ಲೈನ್ನಲ್ಲಿ ಶ್ರೇಯಸ್ ಅಯ್ಯರ್ ಅವರ ಸಾಹಸಮಯ ಪ್ರಯತ್ನದಿಂದ ಇನ್ನೊಬ್ಬ ಫೀಲ್ಡರ್ ಝೇವಿಯರ್ ಬಾರ್ಟಲೆಟ್ ಅವರಿಗೆ ಕ್ಯಾಚ್ ಆದರು. ಬೌಂಡರಿಗೆರೆಯಾಚೆ ಬೀಳಲಿದ್ದ ಚೆಂಡನ್ನು ಗಾಳಿಯಲ್ಲಿ ಹಾರಿದ ಶ್ರೇಯಸ್ ಕ್ಯಾಚ್ ಮಾಡಿದ ತಕ್ಷಣ ಸನಿಹದಲ್ಲಿದ್ದ ಬಾರ್ಟ್ಲೆಟ್ ಅವರತ್ತ ಎಸೆದರು. ತಾವು ಬೌಂಡರಿಗೆರೆಯಾಚೆ (ಮುಂಬೈ ಡಗ್ಔಟ್ ಸಮೀಪ) ಬಿದ್ದರು. ಬಾರ್ಟ್ಲೆಟ್ ಚೆಂಡನ್ನು ಭದ್ರವಾಗಿ ಕೈತುಂಬಿಕೊಂಡರು.

ತಿಲಕ್ ವರ್ಮಾ ಅವರ ವೈಫಲ್ಯ ಮುಂದುವರಿಯಿತು. ಕ್ವಿಂಟನ್ 53 ಎಸೆತಗಳಲ್ಲಿ ಶತಕದ ಗಡಿ ದಾಟಿದರು.

ಸಂಕ್ಷಿಪ್ತ ಸ್ಕೋರು:  ಮುಂಬೈ ಇಂಡಿಯನ್ಸ್: 20 ಓವರ್ಗಳಲ್ಲಿ 6ಕ್ಕೆ195 (ಕ್ವಿಂಟನ್ ಡಿ ಕಾಕ್ ಔಟಾಗದೇ 112, ನಮನ್ ಧೀರ್ 50, ಹಾರ್ದಿಕ್ ಪಾಂಡ್ಯ 14, ಅರ್ಷದೀಪ್ ಸಿಂಗ್ 22ಕ್ಕೆ3, ಮಾರ್ಕೊ ಯಾನ್ಸೆನ್ 30ಕ್ಕೆ1, ಶಶಾಂಕ್ ಸಿಂಗ್ 19ಕ್ಕೆ1). ಪಂಜಾಬ್ ಕಿಂಗ್ಸ್: 16.3 ಓವರ್ ಗಳಲ್ಲಿ 3 ವಿಕೆಟ್ಗೆ 198 (ಪ್ರಭಸಿಮ್ರನ್ ಸಿಂಗ್ ಔಟಾಗದೇ 80, ಶ್ರೇಯಸ್ ಅಯ್ಯರ್ 66; ಎ.ಎಂ. ಗಜನ್ಫರ್ 31ಕ್ಕೆ 2, ಶಾರ್ದೂಲ್ ಠಾಕೂರ್ 38ಕ್ಕೆ 1). ಪಂದ್ಯದ ಆಟಗಾರ: ಅರ್ಷದೀಪ್ ಸಿಂಗ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.