ಮುಂಬೈ: ಆರಂಭಿಕ ಆಟಗಾರರಾದ ರಿಯಾನ್ ರಿಕೆಲ್ಟನ್ (83;32ಎ) ಮತ್ತು ರೋಹಿತ್ ಶರ್ಮಾ (84;44ಎ) ಅವರ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ಸೋಮವಾರ ಐಪಿಎಲ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಆರು ವಿಕೆಟ್ಗಳ ನಿರಾಯಾಸ ಜಯ ದಾಖಲಿಸಿತು.

ಹ್ಯಾಟ್ರಿಕ್ ಸೋಲಿನ ಬಳಿಕ ಮುಂಬೈ ತಂಡವು ಗೆಲುವಿನ ಹಳಿಗೆ ಮರಳಿತು. ಆದರೆ, ತಂಡದ ಪ್ಲೇ ಆಫ್ ಹಾದಿ ಕಠಿಣವಾಗಿದೆ. ಲಖನೌ ತಂಡಕ್ಕೆ ಇದು ಸತತ ಆರನೇ ಸೋಲಾಗಿದೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ರಿಷಭ್ ಪಂತ್ ಪಡೆಯ ಪ್ಲೇ ಆಫ್ ಕನಸು ಬಹುತೇಕ ಕಮರಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡವು ಫೀಲ್ಡಿಂಗ್ ಆಯ್ದುಕೊಂಡಿತು. ನಿಕೋಲಸ್ ಪೂರನ್ (63;20ಎ) ಅವರ ಬಿರುಗಾಳಿ ಇನಿಂಗ್ಸ್ನಿಂದಾಗಿ ಲಖನೌ ತಂಡವು 5 ವಿಕೆಟ್ಗೆ 228 ರನ್ಗಳ ಉತ್ತಮ ಮೊತ್ತ ಗಳಿಸಿತು.

ಗುರಿ ಬೆನ್ನಟ್ಟಿದ ಮುಂಬೈ ತಂಡಕ್ಕೆ ರಿಕೆಲ್ಟನ್ ಮತ್ತು ರೋಹಿತ್ ಭರ್ಜರಿ ಆರಂಭ ಒದಗಿಸಿದರು. ಲಖನೌ ಬೌಲರ್ಗಳನ್ನು ಮನಬಂದಂತೆ ದಂಡಿಸಿದ ಈ ಜೋಡಿ ಮೊದಲ ವಿಕೆಟ್ಗೆ ಬಿರುಸಿನ 143 (65ಎ) ರನ್ ಪೇರಿಸಿ ಗೆಲುವಿಗೆ ಮುನ್ನುಡಿ ಬರೆಯಿತು. ಅವರಿಬ್ಬರು ಪ್ರತಿ ಓವರ್ಗೆ 13 ಸರಾಸರಿಯಲ್ಲಿ ರನ್ ಸೂರೆ ಮಾಡಿದರು.

ದಕ್ಷಿಣ ಆಫ್ರಿಕಾದ ಎಡಗೈ ಬ್ಯಾಟರ್ ರಿಕೆಲ್ಟನ್ ಇನಿಂಗ್ಸ್ನಲ್ಲಿ ಆರು ಬೌಂಡರಿ ಮತ್ತು ಎಂಟು ಭರ್ಜರಿ ಸಿಕ್ಸರ್ಗಳಿದ್ದವು. ಗಾಯದಿಂದಾಗಿ ಕೆಲವು ಪಂದ್ಯಗಳನ್ನು ಕಳೆದುಕೊಂಡಿದ್ದ ರೋಹಿತ್ ಅವರು ಏಳು ಸಿಕ್ಸರ್ ಮತ್ತು ಆರು ಬೌಂಡರಿ ಬಾರಿಸಿ, ತವರಿನ ಅಭಿಮಾನಿಗಳನ್ನು ರಂಜಿಸಿದರು. ರಿಕೆಲ್ಟನ್ ವಿಕೆಟ್ ಪಡೆಯುವ ಮೂಲಕ ಈ ಜೊತೆಯಾಟವನ್ನು ಮೊಹ್ಸಿನ್ ಖಾನ್ ಮುರಿದರು.

ನಂತರ ಬಂದ ತಿಲಕ್ ವರ್ಮಾ (11) ಮತ್ತು ಹಂಗಾಮಿ ನಾಯಕ ಸೂರ್ಯಕುಮಾರ್ ಯಾದವ್ (12) ಅವರ ವೈಫಲ್ಯ ಈ ಪಂದ್ಯದಲ್ಲೂ ಮುಂದುವರಿಯಿತು. ನಮನ್ ಧೀರ್ (ಔಟಾಗದೇ 23) ಮತ್ತು ವಿಲ್ ಜ್ಯಾಕ್ಸ್ (ಔಟಾಗದೇ 10) ತಂಡವನ್ನು ಗೆಲುವಿನ ದಡ ಸೇರಿಸಿದರು. ಮುಂಬೈ ತಂಡವು ಎಂಟು ಎಸೆತಗಳು ಬಾಕಿ ಇರುವಂತೆ 4 ವಿಕೆಟ್ಗೆ 229 ರನ್ ಗಳಿಸಿ ಸಂಭ್ರಮಿಸಿತು.

ಪೂರನ್ ಮಿಂಚು: ಇದಕ್ಕೂ ಮೊದಲು ಪೂರನ್ ಅವರು ಮಿಚೆಲ್ ಮಾರ್ಷ್ (44;25ಎ) ಜೊತೆ ಕೇವಲ 34 ಎಸೆತಗಳಲ್ಲಿ 94 ರನ್ ಜೊತೆಯಾಟವಾಡಿ ತಂಡಕ್ಕೆ ಮಿಂಚಿನ ಆರಂಭ ಒದಗಿಸಿದರು. ಪವರ್ಪ್ಲೇ ಮುಗಿದಾಗ ಲಖನೌ 1 ವಿಕೆಟ್ಗೆ 90 ರನ್ ಗಳಿಸಿತು.

ಈ ಪಂದ್ಯಕ್ಕೆ ಮೊದಲು ಪೂರನ್ ರನ್ ಬರ ಎದುರಿಸಿದ್ದರು. ಮುಂಬೈ ಬೌಲರ್ಗಳು ನೇರ ಮತ್ತು ಲೆಂಗ್ತ್ನಲ್ಲಿ ಎಡವಿದ್ದನ್ನು ಬಂಡವಾಳ ಮಾಡಿಕೊಂಡ ವೆಸ್ಟ್ ಇಂಡೀಸ್ನ ಆಟಗಾರ ಒಂದು ಬೌಂಡರಿ ಜೊತೆ ಎಂಟು ಸಿಕ್ಸರ್ಗಳನ್ನು ಎತ್ತಿದರು. ಪೂರನ್ ಈ ಹಿಂದಿನ 17 ಇನಿಂಗ್ಸ್ಗಳಲ್ಲಿ ಪೂರನ್ ಅರ್ಧಶತಕ ಬಾರಿಸಲಾಗಿರಲಿಲ್ಲ. ಈ ಬಾರಿ ಮುಂಬೈ ಕಳಪೆ ಬೌಲಿಂಗ್ ಅವರಿಗೆ ಅವಕಾಶ ನಿಡಿತು. ದೀಪಕ್ ಚಾಹರ್ ಬೌಲಿಂಗ್ನಲ್ಲಿ ಸಿಕ್ಸರ್ನೊಡನೆ 16 ಎಸೆತಗಳಲ್ಲೇ ಅರ್ಧ ಶತಕ ದಾಟಿದರು.

ಆದರೆ ಕಾರ್ಬಿನ್ ಬಾಷ್ ಅವರು ಪೂರನ್ ಮತ್ತು ಮಾರ್ಷ್ ಅವರ ವಿಕೆಟ್ಗಳನ್ನು ಪಡೆದು ಲಖನೌ ನಾಗಾಲೋಟಕ್ಕೆ ಕಡಿವಾಣ ಹಾಕಿದರು. ನಾಯಕ ರಿಷಭ್ ಪಂತ್ (15, 10 ಎಸೆತ) ಮತ್ತೊಮ್ಮೆ ವಿಫಲರಾದರು. ಒಂದು ಹಂತದಲ್ಲಿ 1 ವಿಕೆಟ್ಗೆ 123 ರನ್ ಗಳಿಸಿದ್ದ ಲಖನೌ 12 ಓವರುಗಳ ಬಳಿಕ 160 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿತು.

ಏಡನ್ ಮರ್ಕರಂ (ಅಜೇಯ 31) ಮತ್ತು ಹಿಮ್ಮತ್ ಸಿಂಗ್ (ಅಜೇಯ 40) ಅವರು ಕುಸಿತ ತಡೆಗಟ್ಟಿ ಮುರಿಯದ ಆರನೇ ವಿಕೆಟ್ಗೆ 68 ರನ್ ಸೇರಿಸಿದ್ದರಿಂದ ತಂಡ 225ರ ಗಡಿ ದಾಟಿತು.

ಅಲಭ್ಯರಾದ ಪಾಂಡ್ಯ: ಬೆನ್ನುನೋವಿನ ಕಾರಣ ನಾಯಕ ಹಾರ್ದಿಕ್ ಪಾಂಡ್ಯ ಈ ಪಂದ್ಯದಲ್ಲಿ ಆಡಲಿಲ್ಲ. ಹೀಗಾಗಿ ಸೂರ್ಯಕುಮಾರ್ ನೇತೃತ್ವ ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.