ನವಿ ಮುಂಬೈ: ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಟಿ20 ಟೂರ್ನಿಯ ಫೈನಲ್ ಮೇಲೆ ಕಣ್ಣಿಟ್ಟಿರುವ ಮುಂಬೈ ಇಂಡಿಯನ್ಸ್ ತಂಡವು ‘ಎಲಿಮಿನೇಟರ್’ ಪಂದ್ಯದಲ್ಲಿ ಯುಪಿ ವಾರಿಯರ್ಸ್‌ಗೆ ಸವಾಲಿನ ಗುರಿ ನೀಡಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಮುಂಬೈ ಪಡೆ, ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 182 ರನ್ ಕಲೆಹಾಕಿದೆ.
ಮುಂಬೈ ಪರ ನತಾಲಿ ಸ್ಕೀವರ್ ಬ್ರಂಟ್ ಕೇವಲ 38 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 9 ಬೌಂಡರಿ ಸಹಿತ 72 ರನ್ ಸಿಡಿಸಿದರು. ಆರಂಭಿಕ ಬ್ಯಾಟರ್ ಯಸ್ತಿಕಾ ಭಾಟಿಯಾ (21), ಹೀಲಿ ಮ್ಯಾಥ್ಯೂಸ್ (26), ಮೇಲಿ ಕೆರ್ (29) ಸಹ ಉತ್ತಮ ಆಟವಾಡಿದರು. ಹೀಗಾಗಿ ಹರ್ಮನ್ ಪ್ರೀತ್ ಕೌರ್ ಪಡೆ ಉತ್ತಮ ಮೊತ್ತ ಕಲೆಹಾಕಲು ಸಾಧ್ಯವಾಯಿತು.
ಯುಪಿ ಪರ ಸೋಫಿ ಎಕ್ಲೆಸ್ಟೋನ್ 2 ವಿಕೆಟ್ ಪಡೆದರೆ, ಅಂಜಲಿ ಶರ್ವಾನಿ ಮತ್ತು ಪಿ.ಚೋಪ್ರಾ ಒಂದೊಂದು ವಿಕೆಟ್ ಕಿತ್ತರು.
ಯುಪಿಗೆ ಆರಂಭಿಕ ಆಘಾತ
ಈ ಗುರಿ ಬೆನ್ನತ್ತಿರುವ ಯುಪಿ ಆರಂಭಿಕ ಆಘಾತ ಅನುಭವಿಸಿದೆ. ತಂಡದ ಮೊತ್ತ 21 ರನ್ ಆಗುವಷ್ಟರಲ್ಲೇ ನಾಯಕಿ ಅಲೆಸ್ಸಾ ಹೀಲಿ (11), ಶ್ವೇತಾ ಶೆರಾವತ್ (1) ಮತ್ತು ತಹಿಲಾ ಮೆಕ್‌ಗ್ರಾತ್ (7) ಪೆವಿಲಿಯನ್ ಸೇರಿಕೊಂಡರು. 56 ರನ್ ಆಗಿದ್ದಾಗ ಗ್ರೇಸ್ ಹ್ಯಾರಿಸ್ (14) ಸಹ ಔಟಾದರು.
ಸದ್ಯ ಎಂಟು ಓವರ್‌ಗಳ ಆಟ ಮುಕ್ತಾಯವಾಗಿದ್ದು, 15 ಎಸೆತಗಳಲ್ಲಿ 23 ರನ್ ಗಳಿಸಿರುವ ಕಿರಣ್ ನವ್‌ಗಿರೆ ಹಾಗೂ 1 ರನ್ ಗಳಿಸಿರುವ ದೀಪ್ತಿ ಶರ್ಮಾ ಕ್ರೀಸ್‌ನಲ್ಲಿದ್ದಾರೆ. ಗೆಲ್ಲಲು ಬಾಕಿ ಇರುವ 6 ವಿಕೆಟ್‌ಗಳಿಂದ 12 ಓವರ್‌ಗಳಲ್ಲಿ 126 ರನ್ ಗಳಿಸಬೇಕಿದೆ.
ಮುಂಬೈ ಪರ ಸ್ಕೀವರ್ ಬ್ರಂಟ್, ಇಸ್ಸಿ ವಾಂಗ್ ಹಾಗೂ ಸೈಕಾ ಇಷಾಕ್ಯೂ ತಲಾ ಒಂದೊಂದು ವಿಕೆಟ್ ಉರುಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.