ಎಸೆಕ್ಸ್ ತಂಡಕ್ಕೆ ಮುರಳಿ ವಿಜಯ್‌

7

ಎಸೆಕ್ಸ್ ತಂಡಕ್ಕೆ ಮುರಳಿ ವಿಜಯ್‌

Published:
Updated:
Deccan Herald

ಲಂಡನ್‌: ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಮುರಳಿ ವಿಜಯ್‌ ಅವರು ಇಂಗ್ಲಿಷ್ ಕೌಂಟಿಯಲ್ಲಿ ಎಸೆಕ್ಸ್ ತಂಡದ ಪರವಾಗಿ ಆಡಲು ಸಜ್ಜಾಗಿದ್ದಾರೆ. ಆಸ್ಟ್ರೇಲಿಯಾದ ಪೀಟರ್‌ ಸಿಡ್ಲ್‌ ಬದಲಿಗೆ ಅವರನ್ನು ತಂಡಕ್ಕೆ ಕರೆಸಿಕೊಳ್ಳಲಾಗಿದೆ. ‌

ಕೌಂಟಿಯ ಪಾಯಿಂಟ್ ಪಟ್ಟಿಯಲ್ಲಿ ಎಸೆಕ್ಸ್‌ ಈಗ ನಾಲ್ಕನೇ ಸ್ಥಾನದಲ್ಲಿದ್ದು ಇನ್ನು ಮೂರು ಪಂದ್ಯಗಳು ಬಾಕಿ ಇವೆ.

‘ವಿಜಯ್‌ ಅವರು ನಮ್ಮ ತಂಡದಲ್ಲಿ ಆಡಲು ಒಪ್ಪಿಕೊಂಡಿರುವುದು ಸಂತೋಷ ತಂದಿದೆ. ಅಗ್ರ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಇರುವ ಅವರು ತಂಡಕ್ಕೆ ಆಸ್ತಿಯಾಗಲಿದ್ದಾರೆ’ ಎಂದು ತಂಡದ ಮುಖ್ಯ ಕೋಚ್‌ ಆ್ಯಂಟನಿ ಮೆಕ್‌ಗ್ರಾ ಅಭಿಪ್ರಾಯಪಟ್ಟರು.

ಇಂಗ್ಲೆಂಡ್‌ ಎದುರಿನ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದ ಮುರಳಿ ಅವರಿಗೆ ನಂತರ ಅವಕಾಶಗಳು ಸಿಗಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !