ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಪಘಾತ: ರಣಜಿ ಕ್ರಿಕೆಟಿಗ ಮುಶೀರ್ ಖಾನ್‌ಗೆ ಗಾಯ

Published : 28 ಸೆಪ್ಟೆಂಬರ್ 2024, 16:34 IST
Last Updated : 28 ಸೆಪ್ಟೆಂಬರ್ 2024, 16:34 IST
ಫಾಲೋ ಮಾಡಿ
Comments

ಲಖನೌ: ಭಾರತದ ಬ್ಯಾಟರ್‌ ಸರ್ಫರಾಜ್ ಖಾನ್ ಅವರ ಸೋದರನಾಗಿರುವ ಮುಂಬೈ ಆಲ್‌ರೌಂಡರ್‌ ಮುಶೀರ್ ಖಾನ್ ಅವರು ನಗರದ ಹೊರವಲಯದಲ್ಲಿ ಗುರುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆದರೆ 19 ವರ್ಷದ ಬ್ಯಾಟರ್‌, ಕಡೇಪಕ್ಷ ಮೂರು ತಿಂಗಳು ಕ್ರಿಕೆಟ್‌ನಿಂದ ಹೊರಗಿರಬೇಕಾಗಬಹುದು. ಅವರ ಕುತ್ತಿಗೆಗೆ ಗಾಯಗಳಾಗಿವೆ. ಇರಾನಿ ಕಪ್, ಮುಂಬೈ ತಂಡದ ಕೆಲವು ರಣಜಿ ಟ್ರೋಫಿ ಪಂದ್ಯಗಳನ್ನೂ ಅವರು ಕಳೆದುಕೊಳ್ಳಲಿದ್ದಾರೆ. ಇರಾನಿ ಟ್ರೋಫಿ ಅ.1ರಿಂದ 5ರವರೆಗೆ ಲಖನೌದಲ್ಲಿ ನಿಗದಿಯಾಗಿತ್ತು.

ಪೂರ್ವಾಂಚಲ ಎಕ್ಸ್‌ಪ್ರೆಸ್‌ ಮೂಲಕ ಅವರು ಲಖನೌದಿಂದ ಅಜಂಗಢಕ್ಕೆ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ, ನಂತರ ಉರುಳಿಬಿದ್ದಿದೆ. ಪ್ರಕರಣದಲ್ಲಿ ಅವರ ತಂದೆ ನೌಶಾದ್ ಖಾನ್ ಅವರಿಗೆ ತರಚಿದ ಗಾಯಗಳಾಗಿವೆ.

ಮುಷೀರ್ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ಲಖನೌದ ಮೇದಾಂತ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಭೋಲಾ ಸಿಂಗ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT