ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಶ್ರೇಷ್ಠ ಲೆಗ್‌ಸ್ಪಿನ್ನರ್‌ಗಳಲ್ಲಿ ಚಾಹಲ್‌ ಒಬ್ಬರು: ಪಾಕ್‌ ಕ್ರಿಕೆಟಿಗ

ಮುಷ್ತಾಕ್‌ ಅಹ್ಮದ್‌ ಮೆಚ್ಚುಗೆ
Last Updated 4 ಮೇ 2020, 19:45 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವದ ಶ್ರೇಷ್ಠ ಲೆಗ್‌ಸ್ಪಿನ್ನರ್‌ಗಳಲ್ಲಿ ಸದ್ಯ ಭಾರತದ ಯಜುವೇಂದ್ರ ಚಾಹಲ್‌ ಕೂಡ ಒಬ್ಬರಾಗಿದ್ದಾರೆ. ಕ್ರೀಸ್‌ ಅನ್ನು ಸೂಕ್ತವಾಗಿ ಬಳಸಿಕೊಂಡರೆ ಅವರು ಇನ್ನಷ್ಟು ಪರಿಣಾಮಕಾರಿಯಾಗಬಲ್ಲರು ಎಂದು ಪಾಕಿಸ್ತಾನದ ಹಿರಿಯ ಸ್ಪಿನ್ನರ್‌ ಮುಷ್ತಾಕ್‌ ಅಹ್ಮದ್‌ ಅಭಿಪ್ರಾಯಪಟ್ಟಿದ್ದಾರೆ.

ಏಕದಿನ ಕ್ರಿಕೆಟ್‌ ಮಾದರಿಯಲ್ಲಿ ಚಾಹಲ್‌, ಆಸ್ಟ್ರೇಲಿಯಾದ ಆ್ಯಡಂ ಜಂಪಾ ಹಾಗೂ ಪಾಕಿಸ್ತಾನದ ಶಾದಬ್‌ ಖಾನ್‌ ಅವರನ್ನು ಮುಷ್ತಾಕ್‌ ಅವರು ಪ್ರಮುಖ ಲೆಗ್‌ಸ್ಪಿನ್ನರ್‌ಗಳು ಎಂದು ಹೆಸರಿಸಿದ್ದಾರೆ.

‘ಸೀಮಿತ ಓವರ್‌ಗಳ ಪಂದ್ಯಗಳ ಮಿಡಲ್‌ ಓವರ್‌ಗಳಲ್ಲಿ ವಿಕೆಟ್‌ ಗಳಿಸುವ ಮೂಲಕ ಚಾಹಲ್‌ ಹಾಗೂ ಕುಲದೀಪ್‌ ಯಾದವ್‌ ಅವರು ಭಾರತ ತಂಡದಲ್ಲಿ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಸ್ಪಿನ್ನರ್‌ಗಳಾಗಿದ್ದಾರೆ. ಚಾಹಲ್‌ ಪಿಚ್‌ನ ಮರ್ಮ ಅರಿತು ಬೌಲ್‌ ಮಾಡಬೇಕು. ‘ವೈಡ್‌ ಆಫ್‌ ದ ಕ್ರೀಸ್‌’ ಬಳಸಬಹುದು. ಸಪಾಟಾದ ಪಿಚ್‌ ಆಗಿದ್ದರೆ‌ ಸ್ಪಂಪ್‌ನ ನೇರಕ್ಕೆ ಚೆಂಡು ಎಸೆಯಬಹುದು’ ಎಂದು ಸದ್ಯ ಪಾಕಿಸ್ತಾನ ತಂಡದ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಮುಷ್ತಾಕ್‌ ಹೇಳಿದ್ದಾರೆ.

‘ಚೆಂಡು ಚೆನ್ನಾಗಿ ಹಿಡಿತಕ್ಕೆ ಸಿಗುತ್ತಿದ್ದರೆ ‘ವೈಡ್‌ ಆಫ್‌ ದ ಕ್ರೀಸ್‌’ ಮೂಲಕ ಎಂತಹ ಉತ್ತಮ ಬ್ಯಾಟ್ಸಮನ್‌ಗಳನ್ನೂ ತಬ್ಬಿಬ್ಬುಗೊಳಿಸಬಹುದು’ ಎಂದು ಮುಷ್ತಾಕ್‌ ನುಡಿದರು.

ಭಾರತದ ಪರ 52 ಏಕದಿನ ಪಂದ್ಯಗಳನ್ನು ಆಡಿರುವ ಚಾಹಲ್‌, 25.83ರ ಸರಾಸರಿಯಲ್ಲಿ 91 ವಿಕೆಟ್‌ ಗಳಿಸಿದ್ದಾರೆ. 42 ಟ್ವೆಂಟಿ–20 ಪಂದ್ಯಗಳ ಮೂಲಕ 24.34ರ ಸರಾಸರಿಯಲ್ಲಿ 55 ವಿಕೆಟ್‌ಗಳು ಅವರ ಖಾತೆಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT