ಶುಕ್ರವಾರ, ಏಪ್ರಿಲ್ 3, 2020
19 °C

ಮುಷ್ತಾಕ್ ಅಲಿ ಟ್ರೋಫಿ; ಒತ್ತಡದಲ್ಲಿ ತಮಿಳುನಾಡು–ಮುಂಬೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೂರತ್: ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ–20 ಕ್ರಿಕೆಟ್  ಟೂರ್ನಿಯ ಸೂಪರ್ ಲೀಗ್‌ ಸುತ್ತಿನ ಬಿ ಗುಂಪಿನ ಪಂದ್ಯಗಳು ತೀವ್ರ ಕುತೂಹಲ ಕೆರಳಿಸಿವೆ.

ಪಟ್ಟಿಯ ಎರಡನೇ ಸ್ಥಾನದಲ್ಲಿರುವ  ತಮಿಳುನಾಡು ತಂಡವು ಜಾರ್ಖಂಡ್ ವಿರುದ್ಧ  ಮತ್ತು ಮೂರನೇ ಸ್ಥಾನದಲ್ಲಿರುವ ಮುಂಬೈ ಪಂಜಾಬ್ ವಿರುದ್ಧ ಬುಧವಾರ ಆಡಲಿವೆ. ತಮಿಳುನಾಡು ಮತ್ತು ಸೋಮವಾರ ಕರ್ನಾಟಕವನ್ನು ಸೋಲಿಸಿದ್ದ ಮುಂಬೈ ತಂಡಗಳು ತಲಾ ಎಂಟು ಪಾಯಿಂಟ್ ಗಳಿಸಿವೆ. ಕರ್ನಾಟಕ ಈಗಾಗಲೇ ತನ್ನ ಪಾಲಿನ ನಾಲ್ಕು ಪಂದ್ಯಗಳನ್ನೂ ಆಡಿ, ಮೂರರಲ್ಲಿ  ಗೆದ್ದು 12 ಅಂಕಗಳನ್ನು ಗಳಿಸಿದೆ.

ಒಂದೊಮ್ಮೆ ತಮಿಳುನಾಡು ಮತ್ತು ಮುಂಬೈ ತಂಡಗಳು ತಮ್ಮ ಪಂದ್ಯಗಳಲ್ಲಿ ಗೆದ್ದರೆ ತಲಾ ಒಟ್ಟು 12 ಪಾಯಿಂಟ್ಸ್ ಗಳಿಸಲಿವೆ.ಇದರಿಂದಾಗಿ ಮೂರು ತಂಡಗಳು ಸಮಬಲ ಸಾಧಿಸದಂತಾಗುತ್ತದೆ. ಆಗ ಸೆಮಿಫೈನಲ್‌ನಲ್ಲಿ ಆಡುವ ಎರಡು ತಂಡಗಳ ಆಯ್ಕೆಗೆ ರನ್‌ರೇಟ್ ಪರಿಗಣಿಸಲಾಗುತ್ತದೆ. ಕರ್ನಾಟಕದ ರನ್‌ರೇಟ್ (0.762) ಇದೆ. ತಮಿಳುನಾಡು ಸದ್ಯ (0.413) ಮತ್ತು ಮುಂಬೈ (–0.589 ) ರನ್‌ರೇಟ್ ಹೊಂದಿದೆ. ಇದರಿಂದಾಗಿ ಕರ್ನಾಟಕಕ್ಕೆ ನಾಲ್ಕರ ಘಟ್ಟದ ಹಾದಿ ಕೈತಪ್ಪುವ ಸಾಧ್ಯತೆ ತೀರಾ ಕಡಿಮೆ. ಮನೀಷ್ ಪಾಂಡೆ ಬಳಗವು ಒಂದೊಮ್ಮೆ ಮೊದಲ ಸ್ಥಾನದಲ್ಲಿದ್ದರೆ, ಎ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ತಂಡದ ಎದುರು ಅಥವಾ ಎರಡನೇ ಸ್ಥಾನಕ್ಕಿಳಿದರೆ ಎ ಗುಂಪಿನ ಮೊದಲ ಸ್ಥಾನದ ತಂಡದ ಎದುರು ಆಡಲಿದೆ.

ಎ ಗುಂಪಿನಲ್ಲಿ ಹರಿಯಾಣ (12ಪಾ), ಬರೋಡಾ (8ಪಾ) ಮೊದಲೆರಡು ಸ್ಥಾನದಲ್ಲಿವೆ.

 ಬುಧವಾರದ ಪಂದ್ಯಗಳು (ಸೂಪರ್ ಲೀಗ್)

ಎ ಗುಂಪು: ರಾಜಸ್ಥಾನ–ದೆಹಲಿ (ಮಧ್ಯಾಹ್ನ 1.30), ಮಹಾರಾಷ್ಟ್ರ–ಹರಿಯಾಣ (ಮಧ್ಯಾಹ್ನ 2.30)

ಬಿ ಗುಂಪು: ತಮಿಳುನಾಡು–ಜಾರ್ಖಂಡ್ (ಬೆಳಿಗ್ಗೆ 9.30), ಮುಂಬೈ–ಪಂಜಾಬ್ (ಸಂಜೆ 6.30)

ನೇರಪ್ರಸಾರ: ಸ್ಟಾರ್ ಸ್ಫೋರ್ಟ್ಸ್‌ ನೆಟ್‌ವರ್ಕ್

 

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು