ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂಸ್ತಾ‌ನ್‌ ವಿ.ವಿ ಚಾಂಪಿಯನ್‌

ದಕ್ಷಿಣ ವಲಯ ಅಂತರ ವಿ.ವಿ ಕ್ರಿಕೆಟ್‌: ಮೈಸೂರು ವಿ.ವಿ ‘ರನ್ನರ್‌ ಅಪ್‌’
Last Updated 10 ಡಿಸೆಂಬರ್ 2019, 15:42 IST
ಅಕ್ಷರ ಗಾತ್ರ

ಮೈಸೂರು: ಚೆನ್ನೈನ ಹಿಂದೂಸ್ತಾನ್ ತಾಂತ್ರಿಕ ಮತ್ತು ವಿಜ್ಞಾನ ವಿ.ವಿತಂಡದವರು ಇಲ್ಲಿ ಕೊನೆಗೊಂಡ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಕ್ರಿಕೆಟ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದರು.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಫೈನಲ್‌ನಲ್ಲಿ ಹಿಂದೂಸ್ತಾನ್‌ ವಿ.ವಿ ತಂಡ 29 ರನ್‌ಗಳಿಂದ ಆತಿಥೇಯ ಮೈಸೂರು ವಿ.ವಿ ತಂಡವನ್ನು ಮಣಿಸಿತು.

ಮೊದಲು ಬ್ಯಾಟ್‌ ಮಾಡಿದ ಹಿಂದೂಸ್ತಾನ್‌ ವಿ.ವಿ ತಂಡ ಆದಿತ್ಯ ರಘುನಾಥನ್‌ ಮತ್ತು ನಾಯಕ ಆರ್‌.ಕವಿನ್‌ ಅವರ ಅರ್ಧಶತಕಗಳ ಬಲದಿಂದ 45 ಓವರ್‌ಗಳಲ್ಲಿ 7 ವಿಕೆಟ್‌ಗೆ 232 ರನ್‌ ಪೇರಿಸಿತು. ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಮೈಸೂರು ವಿ.ವಿ 203 ರನ್‌ಗಳಿಗೆ ಅಲೌಟಾಯಿತು.ಮೈಸೂರು ವಿ.ವಿ ತಂಡ ಕಳೆದ ಬಾರಿಯೂ ‘ರನ್ನರ್‌ ಅಪ್‌’ಆಗಿತ್ತು.

ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಹೈದರಾಬಾದ್‌ನ ಜವಾಹರಲಾಲ್‌ ನೆಹರು ತಾಂತ್ರಿಕ ವಿ.ವಿ ತಂಡ 13 ರನ್‌ಗಳಿಂದ ಕಳೆದ ಬಾರಿಯ ಚಾಂಪಿಯನ್‌ ಬೆಂಗಳೂರಿನ ಜೈನ್‌ ವಿ.ವಿ ತಂಡವನ್ನು ಮಣಿಸಿತು.

ಹಿಂದೂಸ್ತಾನ್ ವಿ.ವಿ,ಮೈಸೂರು ವಿ.ವಿ,ಜವಾಹರಲಾಲ್‌ ನೆಹರು ತಾಂತ್ರಿಕ ವಿ.ವಿ ಮತ್ತು ಜೈನ್‌ ವಿ.ವಿ.ತಂಡಗಳು ಅಖಿಲ ಭಾರತ ಅಂತರ ವಿ.ವಿ. ಟೂರ್ನಿಗೆ ಅರ್ಹತೆ ಪಡೆದುಕೊಂಡವು.

ಸಂಕ್ಷಿಪ್ತ ಸ್ಕೋರ್: ಹಿಂದೂಸ್ತಾನ್ ತಾಂತ್ರಿಕ ಮತ್ತು ವಿಜ್ಞಾನ ವಿ.ವಿ,ಚೆನ್ನೈ: 45 ಓವರ್‌ಗಳಲ್ಲಿ 7 ವಿಕೆಟ್‌ಗೆ 232 (ಆದಿತ್ಯ ರಘುನಾಥನ್ 69,ಆರ್‌.ಕವಿನ್ 50,ನಂದನ್ ನಾರಾಯಣ್ 39ಕ್ಕೆ 3)ಮೈಸೂರು ವಿ.ವಿ 41.2 ಓವರ್‌ಗಳಲ್ಲಿ 203 (ವಿಷ್ಣುಪ್ರಿಯನ್ 41,ಬಿ.ಧೀಮಂತ್ 35,ಎನ್‌.ಎಸ್‌.ಹರೀಶ್ 42ಕ್ಕೆ 3,ಅಜಿತ್‌ ಕುಮಾರ್ 25ಕ್ಕೆ 2) ಫಲಿತಾಂಶ: ಹಿಂದೂಸ್ತಾನ್‌ ವಿ.ವಿಗೆ 29 ರನ್‌ ಗೆಲುವು

ಜವಾಹರಲಾಲ್‌ ನೆಹರು ತಾಂತ್ರಿಕ ವಿ.ವಿ. ಹೈದರಾಬಾದ್: 43.5 ಓವರ್‌ಗಳಲ್ಲಿ 279 (ಪ್ರತೀಕ್‌ ಪವಾರ್ 113,ಪಿ.ಸಾಯ್‌ ವಿಕಾಸ್‌ ರೆಡ್ಡಿ 52,ಆದಿತ್ಯ ಗೋಯಲ್ 49ಕ್ಕೆ 3,ಆದಿತ್ಯ ಸೋಮಣ್ಣ 26ಕ್ಕೆ 3) ಜೈನ್‌ ವಿ.ವಿ,ಬೆಂಗಳೂರು: 45 ಓವರ್‌ಗಳಲ್ಲಿ 7 ವಿಕೆಟ್‌ಗೆ 266 (ಸ್ಪರ್ಶ್‌ ಹೆಗ್ಡೆ 91,ಅರ್ಜುನ್‌ ಅರೋರ 82,ಅಖಿಲೇಶ್‌ ರೆಡ್ಡಿ 36ಕ್ಕೆ 2) ಜವಾಹರಲಾಲ್‌ ನೆಹರು ತಾಂತ್ರಿಕ ವಿ.ವಿಗೆ 13 ರನ್‌ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT