ಢಾಕಾ: ವೇಗಿ ನಹೀದ್ ರಾಣಾ ಅವರು ವೃತ್ತಿಜೀವನದಲ್ಲಿ ಮೊದಲ ಬಾರಿ ಐದು ವಿಕೆಟ್ ಗೊಂಚಲು ಪಡೆದರು. ಅವರ ದಾಳಿಯ ನೆರವಿನಿಂದ ಬಾಂಗ್ಲಾದೇಶ ತಂಡವು ಬುಧವಾರ ಮೊದಲ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಎಂಟು ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು.

ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆತಿಥೇಯ ತಂಡವು 1–0 ಮುನ್ನಡೆ ಸಾಧಿಸಿತು. ಸರಣಿಯ ಇನ್ನೆರಡು ಪಂದ್ಯಗಳು ಇದೇ ಕ್ರೀಡಾಂಗಣದಲ್ಲಿ ಇದೇ 13 ಮತ್ತು 15ರಂದು ನಡೆಯಲಿವೆ.

ಟಾಸ್ ಗೆದ್ದ ಬಾಂಗ್ಲಾ ತಂಡವು ಫೀಲ್ಡಿಂಗ್ ಆಯ್ದುಕೊಂಡಿತು. ನಹೀದ್ (24ಕ್ಕೆ 5) ಮತ್ತು ನಾಯಕ ಮೆಹಿದಿ ಹಸನ್ ಮಿರಾಜ್ (29ಕ್ಕೆ 3) ಅವರು ಪರಿಣಾಮಕಾರಿ ದಾಳಿ ಸಂಘಟಿಸಿ, ಪಾಕ್ ತಂಡವನ್ನು 30.4 ಓವರ್ಗಳಲ್ಲಿ 114 ರನ್ಗಳಿಗೆ ಕಟ್ಟಿಹಾಕಿದರು. ಆರಂಭಿಕ ಆಟಗಾರ ಸಾಹಿಬ್ಝಾದಾ ಫರ್ಹಾನ್ (27) ಮತ್ತು ಫಹೀಂ ಅಶ್ರಫ್ (37) ಹೊರತುಪಡಿಸಿ ಉಳಿದವರು ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ.

ಇದು ಬಾಂಗ್ಲಾದೇಶ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ ಪಾಕಿಸ್ತಾನದ ಅತಿ ಕಡಿಮೆ ರನ್ ಮೊತ್ತವಾಗಿದೆ. 1999ರ ವಿಶ್ವಕಪ್ನಲ್ಲಿ 161 ಗಳಿಸಿದ್ದು, ಈವರೆಗಿನ ಕಡಿಮೆ ಮೊತ್ತವಾಗಿತ್ತು. ಆ ಪಂದ್ಯವನ್ನು ಪಾಕ್ 62 ರನ್ಗಳಿಂದ ಸೋತಿತ್ತು.

ಗುರಿ ಬೆನ್ನಟ್ಟಿದ ಆತಿಥೇಯ ತಂಡವು ಆರಂಭಿಕ ಬ್ಯಾಟರ್ ತಾಂಜಿದ್ ಹಸನ್ (ಔಟಾಗದೇ 67;42ಎ, 4x7, 6x5) ಅವರ ಅರ್ಧಶತಕದ ನೆರವಿನಿಂದ ಕೇವಲ 15.1 ಓವರ್ಗಳಲ್ಲಿ 2 ವಿಕೆಟ್ಗೆ 115 ರನ್ ಪೇರಿಸಿ ಸಂಭ್ರಮಿಸಿತು.

ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಿರಾಶಾದಾಯಕ ಪ್ರದರ್ಶನದ ಬಳಿಕ ಪಾಕ್ ತಂಡದಲ್ಲಿ ಸೈಮ್ ಅಯೂಬ್ ಮತ್ತು ಬಾಬರ್ ಆಜಂ ಅವರನ್ನು ಕೈಬಿಟ್ಟು ನಾಲ್ವರು ಹೊಸ ಮುಖಗಳಿಗೆ ಅವಕಾಶ ನೀಡಲಾಗಿತ್ತು. ಆದರೆ, ಅವರು ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲಿ ನಿರಾಸೆ ಮೂಡಿಸಿದರು.

ಸಂಕ್ಷಿಪ್ತ ಸ್ಕೋರ್:

ಪಾಕಿಸ್ತಾನ: 30.4 ಓವರ್ಗಳಲ್ಲಿ 114 (ಸಾಹಿಬ್ಝಾದಾ ಫರ್ಹಾನ್ 27, ಫಹೀಂ ಅಶ್ರಫ್ 37; ಮೆಹಿದಿ ಹಸನ್ ಮಿರಾಜ್ 29ಕ್ಕೆ 3, ನಹೀದ್ ರಾಣಾ 24ಕ್ಕೆ 5).

ಬಾಂಗ್ಲಾದೇಶ: 15.1 ಓವರ್ಗಳಲ್ಲಿ 2ಕ್ಕೆ 115 (ತಾಂಜಿದ್ ಹಸನ್ ಔಟಾಗದೇ 67, ನಜ್ಮುಲ್ ಹುಸೇನ್ ಶಾಂತೊ 27). ಪಂದ್ಯದ ಆಟಗಾರ: ನಹೀದ್ ರಾಣಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.