ಬುಧವಾರ, ಡಿಸೆಂಬರ್ 1, 2021
26 °C
ನಮಿಬಿಯಾ ಸಾಧಾರಣ ಮೊತ್ತ;

DNP ಜಡೇಜ, ಅಶ್ವಿನ್ ಸ್ಪಿನ್ ಮೋಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದುಬೈ (ಪಿಟಿಐ): ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜ ಅವರು ತಮ್ಮ ಸ್ಪಿನ್ ಮೋಡಿಯಿಂದ ನಮಿಬಿಯಾ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದರು.

ಪ್ರತಿಭಾವಂತ ಆಟಗಾರರಿರುವ ನಮಿಬಿಯಾ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 132 ರನ್‌ ಗಳಿಸಿತು. ಟಾಸ್ ಗೆದ್ದ ಭಾರತ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಮಿಬಿಯಾದ ಸ್ಟೀಫನ್ ಬಾರ್ಡ್ (21) ಮತ್ತು ಮೈಕೆಲ್ ವ್ಯಾನ್ ಲಿಂಗನ್ (14 ರನ್) ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ 33 ರನ್‌ ಸೇರಿಸಿದರು. ವೇಗಿ ಜಸ್‌ಪ್ರೀತ್ ಬೂಮ್ರಾ ಐದನೇ ಓವರ್‌ನಲ್ಲಿ ಮೈಕೆಲ್ ವಿಕೆಟ್ ಗಳಿಸಿ, ಜೊತೆಯಾಟ ಮುರಿದರು. ಇದರೊಂದಿಗೆ ನಮಿಬಿಯಾದ ವಿಕೆಟ್‌ ಪತನ ಆರಂಭವಾಯಿತು.

ಜಡೇಜ ಮತ್ತು ಅಶ್ವಿನ್ ಅವರ ದಾಳಿಗೆ ನಮಿಬಿಯಾ ತಂಡವು  72 ರನ್‌ಗಳಿಗೆ ಐದು ವಿಕೆಟ್‌ ಕಳೆದುಕೊಂಡಿತು.  ಆದರೆ, ಕೊನೆಯ ಹಂತದಲ್ಲಿ ಡೇವಿಡ್ ವೀಸ್  (26; 25ಎಸೆತ, 2 ಬೌಂಡರಿ), ಜಾನ್ ಫ್ರೈ ಲಿಂಗ್ (ಔಟಾಗದೆ 15; 15ಎ) ಮತ್ತು ರುಬೆನ್ ಟ್ರಂಪಲ್‌ಮನ್ (ಔಟಾಗದೆ 13; 6ಎಸೆತ, 1ಬೌಂಡರಿ, 1ಸಿಕ್ಸರ್)  ಅವರ ಬ್ಯಾಟಿಂಗ್‌ನಿಂದಾಗಿ ನೂರರ ಗಡಿ ದಾಟಿತು.

ಭಾರತದ ಬೌಲರ್‌ಗಳನ್ನು ಇವರು ದಿಟ್ಟತನದಿಂದ ಎದುರಿಸಿದರು. ಫ್ರೈಲಿಂಕ್ ಎಚ್ಚರಿಕೆಯಿಂದ ಆಡಿದರು. ಒಂದೂ ಬೌಂಡರಿ ಅಥವಾ ಸಿಕ್ಸರ್ ಗಳಿಸಲಿಲ್ಲ. 15ರನ್‌ಗಳ ಕಾಣಿಕೆ ನೀಡಿದರು. ಆದರೆ ಟ್ರಂಪಲ್‌ಮ್ಯಾನ್ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಹೊಡೆದು ಗಮನ ಸೆಳೆದರು.

ಎರಡನೇ ಗುಂಪಿನಲ್ಲಿ ಇದು ಕೊನೆಯ ಪಂದ್ಯವಾಗಿತ್ತು. ಉಭಯ ತಂಡಗಳು ಈಗಾಗಲೇ ಸೆಮಿಫೈನಲ್ ಹಾದಿಯಿಂದ ಹೊರಬಿದ್ದಿವೆ. ಭಾರತದ ಮೊಹಮ್ಮದ್ ಶಮಿ ಒಂದೂ ವಿಕೆಟ್ ಗಳಿಸಲಿಲ್ಲ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.