ವಿಜಯ್‌ ಹಜಾರೆ ಅಖಿಲ ಭಾರತ ಏಕದಿನ ಕ್ರಿಕೆಟ್ ಟೂರ್ನಿ: ಎಂ.ಜಿ.ನವೀನ್‌ಗೆ ಸ್ಥಾನ

7
ವಿನಯಕುಮಾರ್ ನಾಯಕ

ವಿಜಯ್‌ ಹಜಾರೆ ಅಖಿಲ ಭಾರತ ಏಕದಿನ ಕ್ರಿಕೆಟ್ ಟೂರ್ನಿ: ಎಂ.ಜಿ.ನವೀನ್‌ಗೆ ಸ್ಥಾನ

Published:
Updated:
Deccan Herald

ಬೆಂಗಳೂರು: ದೇಶೀಯ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಮಿಂಚಿದ್ದ ಮಧ್ಯಮ ವೇಗಿ ಎಂ.ಜಿ.ನವೀನ್‌ ಅವರು ವಿಜಯ್ ಹಜಾರೆ ಟ್ರೋಫಿ ಅಖಿಲ ಭಾರತ ಏಕದಿನ ಕ್ರಿಕೆಟ್ ಟೂರ್ನಿಗಾಗಿ ಪ್ರಕಟಿಸಿರುವ ರಾಜ್ಯ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

15 ಮಂದಿಯ ತಂಡವನ್ನು ರಾಜ್ಯ ಕ್ರಿಕೆಟ್ ಸಂಸ್ಥೆ ಶುಕ್ರವಾರ ಪ್ರಕಟಿಸಿದ್ದು ತಂಡವನ್ನು ವಿನಯಕುಮಾರ್ ಮುನ್ನಡೆಸುವರು. ಟೂರ್ನಿ ಇದೇ 19ರಂದು ಆರಂಭವಾಗಲಿದೆ. ಕರ್ನಾಟಕದ ಮೊದಲ ಪಂದ್ಯ 20ರಂದು ನಡೆಯಲಿದ್ದು ಮಹಾರಾಷ್ಟ್ರದ ಸವಾಲನ್ನು ಎದುರಿಸಲಿದೆ.

24 ವರ್ಷದ ನವೀನ್‌ 2015ರಲ್ಲಿ ಟ್ವೆಂಟಿ–20 ಟೂರ್ನಿಯಲ್ಲಿ ರಾಜ್ಯದ ಪರವಾಗಿ ಆಡಿದ್ದು ಇದೇ ಮೊದಲ ಬಾರಿ ಏಕದಿನ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಕೆಪಿಎಲ್‌ ಟೂರ್ನಿಯಲ್ಲಿ ಬಿಜಾಪುರ ಬುಲ್ಸ್ ತಂಡದಲ್ಲಿದ್ದರು. ಈ ತಂಡ ಇತ್ತೀಚೆಗೆ ಮುಕ್ತಾಯಗೊಂಡ ಏಳನೇ ಆವೃತ್ತಿಯ ಟೂರ್ನಿಯಲ್ಲಿ ಚಾಂಪಿಯನ್ ಆಗಿತ್ತು. ಟೂರ್ನಿಯಲ್ಲಿ ಅವರು ಆರು ವಿಕೆಟ್ ಉರುಳಿಸಿದ್ದರು. ಮಧ್ಯಮ ವೇಗಿಗಳಾದ ರೋನಿತ್ ಮೋರೆ ಮತ್ತು ಎಚ್‌.ಎಸ್‌.ಶರತ್‌ ಈ ಬಾರಿಯ ಟೂರ್ನಿಯಲ್ಲಿ ವೈಫಲ್ಯ ಕಂಡದ್ದು ನವೀನ್ ಅವರ ಹಾದಿಯನ್ನು ಸುಗಮಗೊಳಿಸಿತು.

ಕಾರ್ಯಪ್ಪಗೆ ನಿರಾಸೆ: ಕ್ಯಾಪ್ಟನ್‌ ಕೆ.ತಿಮ್ಮಪ್ಪಯ್ಯ ಸ್ಮಾರಕ ಟೂರ್ನಿ ಮತ್ತು ಕೆಪಿಎಲ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದ ಸ್ಪಿನ್ನರ್‌ ಕೆ.ಸಿ.ಕಾರ್ಯ‍ಪ್ಪ ಅವರಿಗೆ ತಿಮ್ಮಪ್ಪಯ್ಯ ಸ್ಮಾರಕ ಟ್ರೋಫಿಗಾಗಿರುವ ತಂಡದಲ್ಲಿ ಸ್ಥಾನ ಸಿರುವ ನಿರೀಕ್ಷೆ ಇತ್ತು. ಕೆಪಿಎಲ್‌ನ ಅರು ಪಂದ್ಯಗಳಲ್ಲಿ ಅವರು ಎಂಟು ವಿಕೆಟ್ ಕಬಳಿಸಿದ್ದರು.

ತಂಡ ಇಂತಿದೆ: ವಿನಯಕುಮಾರ್‌ (ನಾಯಕ), ಮಯಂಕ್‌ ಅಗರವಾಲ್‌, ಸಮರ್ಥ್‌ ಆರ್‌, ಕರುಣ್ ನಾಯರ್‌, ಪವನ್ ದೇಶಪಾಂಡೆ, ಸ್ಟುವರ್ಟ್ ಬಿನ್ನಿ, ಸಿ.ಎಂ. ಗೌತಮ್‌ (ವಿಕೆಟ್ ಕೀಪರ್‌), ಕೃಷ್ಣಪ್ಪ ಗೌತಮ್,  ಶ್ರೇಯಸ್ ಗೋಪಾಲ್‌, ಅಭಿಮನ್ಯು ಮಿಥುನ್, ಪ್ರಸಿದ್ಧ ಕೃಷ್ಣ, ಜೆ.ಸುಚಿತ್‌, ಅಭಿಷೇಕ್ ರೆಡ್ಡಿ, ಎಂ.ಜಿ.ನವೀನ್‌, ಶರತ್‌ ಬಿ.ಆರ್‌.

ಕೋಚ್‌: ಯರೇಗೌಡ, ಬೌಲಿಂಗ್ ಕೋಚ್‌: ಎಸ್.ಅರವಿಂದ, ವ್ಯವಸ್ಥಾಪಕ: ಅನುತೋಷ್‌ ಪಾಲ್‌.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !