ಬೆಂಗಳೂರು: 2026ರ ಐಪಿಎಲ್ ಆವೃತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗೆ ನವಿ ಯುಪಿಐ ತನ್ನ ಸಹಭಾಗಿತ್ವವನ್ನು ನವೀಕರಿಸಿಕೊಂಡಿದ್ದು, ಅಧಿಕೃತ ಪೇಮೆಂಟ್ಸ್ ಪಾರ್ಟ್ನರ್ ಆಗಿ ಮುಂದುವರಿಯಲಿದೆ.

ಈ ವರ್ಷದ ಸಹಭಾಗಿತ್ವದ ವಿಶೇಷತೆಯಾಗಿ, ನವಿ ಯುಪಿಐ ‘ಫಾಸ್ಟೆಸ್ಟ್ ಮೊಮೆಂಟ್ ಆಫ್ ದ ಮ್ಯಾಚ್ ಪವರ್ಡ್ ಬೈ ನವಿ ಯುಪಿಐ’ ಎಂಬ ಹೊಸ ಪ್ರಶಸ್ತಿಯನ್ನು ಪರಿಚಯಿಸುತ್ತಿದೆ. ವಿಜೇತ ಆಟಗಾರರಿಗೆ ₹50,000 ಬಹುಮಾನದ ಮೊತ್ತವನ್ನು ನವಿ ಯುಪಿಐ ಮೂಲಕ ವರ್ಗಾಯಿಸಲಾಗುತ್ತದೆ.

ಕಂಪನಿಯ ಎಂ.ಡಿ ಮತ್ತು ಸಿಇಒ ರಾಜೀವ್ ನರೇಶ್ ಮಾತನಾಡಿ, ‘ಆರ್ಸಿಬಿ ಜೊತೆಗಿನ ಸಹಭಾಗಿತ್ವ ಮುಂದುವರಿಸುತ್ತಿರುವುದು ಸಂತೋಷ ತಂದಿದೆ. ಕ್ರಿಕೆಟ್ನಲ್ಲಿ ಉತ್ತಮ ಆಟ ಫಲಿತಾಂಶವನ್ನು ನಿರ್ಧರಿಸುತ್ತವೆ. ನಮ್ಮ 'ಫಾಸ್ಟೆಸ್ಟ್ ಮೊಮೆಂಟ್ ಆಫ್ ದ ಮ್ಯಾಚ್' ಪರಿಕಲ್ಪನೆಯು ನವಿ ಯುಪಿಐನ ವೇಗ ಮತ್ತು ತಕ್ಷಣದ ಪಾವತಿ ಸೇವೆಯನ್ನು ಪ್ರತಿಬಿಂಬಿಸುತ್ತದೆ' ಎಂದರು .

ಕಂಪನಿಯ ಸಿಇಒ ರಾಜೇಶ್ ವಿ ಮೆನನ್ ಮಾತನಾಡಿ, ‘ನವಿ ಸಂಸ್ಥೆಯು ತನ್ನ ನವೀನ ತಂತ್ರಜ್ಞಾನದ ಮೂಲಕ ಪಾವತಿ ವ್ಯವಸ್ಥೆಯನ್ನು ಸುಲಭಗೊಳಿಸಿದೆ. ಆರ್ಸಿಬಿ ತಂಡದ ವೇಗ ಮತ್ತು ಪ್ರಭಾವಕ್ಕೆ ಈ ಸಹಭಾಗಿತ್ವವು ಪೂರಕವಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.